*ಕೆ.ಆರ್.ಪೇಟೆ ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 36ನೇ ವರ್ಷದ ಶಾಲೆಗೊಂದು ಕಾರ್ಯಕ್ರಮದ ಪೂರ್ವಭಾವಿ ಸಭೆ*
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್.ಆರ್.ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ 36ನೇ ವರ್ಷದ ಶಾಲೆಗೊಂದು ಕಾರ್ಯಕ್ರಮದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು,
ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ದಿನಾಂಕ:05.11.2024ನೇ ಮಂಗಳವಾರ ತಾಲ್ಲೋಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗವಿಮಠದಲ್ಲಿ 36ನೇ ವರ್ಷದ ಶಾಲೆಗೊಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಹೆಚ್.ಟಿ.ಮಂಜು, ಉದ್ಘಾಟನೆಯನ್ನು ತಾಲ್ಲೋಕು ದಂಡಾಧಿಕಾರಿಗಳಾದ ಎಸ್.ಯು.ಅಶೋಕ್ ಕುಮಾರ್
ನೇರವೇರಿಸಲಿದ್ದು ಪ್ರತಿಭಾ ಪುರಸ್ಕಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಚಂದ್ರಶೇಖರ್, ಪ್ರಧಾನ ಉಪನ್ಯಾಸ ಸಹಾಯಕ ನಿರ್ದೇಶಕರು ಸಿ.ಎನ್.ಯತೀಶ್, ಪ್ರಾಸ್ತಾವಿಕ ನುಡಿ ಹೆಚ್.ಆರ್.ಪೂರ್ಣಚಂದ್ರ ತೇಜಸ್ವಿ,ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಕೆ.ಎಂ.ಪ್ರಸನ್ನ ಕುಮಾರ್ ರವರು ವಿಧ್ಯಾರ್ಥಿಗಳಿಗೆ ಹಿತವಚನ ನೀಡಲಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಶ್ರೀನಿವಾಸ್ ಶೆಟ್ಟಿ,ಕೆ.ಕಾಳೇಗೌಡ,ಕೆ.ಆರ್.ನೀಲಕಂಠ,ಕೆ.ಎಸ್.ಸೋಮಶೇಖರ್, ಹರಿಚರಣ್ ತಿಲಕ್,ಅ.ಮ.ಶ್ಯಾಮೇಶ್,ಕೆ.ಎಂ.ವಾಸುದೇವ,ಎಸ್.ಎಂ.ಬಸವರಾಜ್,ಆರ್.ಕೆ.ರಮೇಶ್, ಚಂದ್ರಪ್ಪ,ಮಾರೇನಹಳ್ಳಿ ಲೋಕೇಶ್, ಹೆಚ್.ಆರ್.ಯೋಗೇಶ್,ಅಬರಾಶೆ ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು,
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್.ಆರ್.ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷರಾದ ಹರಿಚರಣ್ ತಿಲಕ್, ಕಟ್ಟೆ ಮಹೇಶ್,ಸಿ.ವಿ.ಧರ್ಮರಾಜ್,ಕೆ.ಸಿ.ಪಾಪಯ್ಯ,ಆರ್.ವಾಸು,ಆರ್.ಕೆ.ಮಹೇಶ್ ಉಪಸ್ಥಿತರಿದ್ದ
ರು
What's Your Reaction?