ಬಡ ವಿದ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಪಾವತಿಸಿದ ಧ್ವನಿ ಲಯನ್ಸ್ ಕ್ಲಬ್

ಬಡ ವಿದ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಪಾವತಿಸಿದ ಧ್ವನಿ ಲಯನ್ಸ್ ಕ್ಲಬ್

*ಮದ್ದೂರು ಸುದ್ದಿ*

ವರದಿ :-ಪ್ರತಾಪ್. ಎ. ಬಿ 

*ಬಡ ವಿದ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಪಾವತಿಸಿದ ಧ್ವನಿ ಲಯನ್ಸ್ ಕ್ಲಬ್*

*ನೂತನ ಲಯನ್ಸ್ ನ ಅಧ್ಯಕ್ಷರಾದ ರಜನಿ ರಾಜ್.*

  2024 - 25 ನೇ ಸಾಲಿನ ಅಧ್ಯಕ್ಷರಾದ ರಜನಿರಾಜ್ ಮತ್ತು ಅವರ ತಂಡದ ಪ್ರತಿಜ್ಞಾ ವಿಧಿ ಸಮಾರಂಭ ಮದ್ದೂರು ನಲ್ಲಿ ನಡೆಯಿತು.

ಈ ಸಮಾರಂಭ ಮತ್ತೊಂದು ಮಾನವೀಯ ಘಟನೆಗೆ ಸಾಕ್ಷಿ ಕೂಡ ಅಯಿತು.

ಸಹನ ಎಂಬ ವಿಧ್ಯಾರ್ಥಿ ಅಂತಿಮ ಬಿ ಇ ಓದುತ್ತಿದ್ದು ತನ್ನ ಓದು ಮುಂದುವರೆಸಲು ಬಡತನ ಮತ್ತು ಹಣಕಾಸು ಅಡ್ಡಿಯಾಯಿತು. 

ಇದೇ ವಿದ್ಯಾರ್ಥಿಗೆ ಲಯನ್ಸ್ ನ ಜಿಲ್ಲಾ ಸಂಪುಟ ಸಲಹೆಗಾರರಾದ ಕೆ ದೇವೆಗೌಡರು ಅ ವಿದ್ಯಾರ್ಥಿಯ ಶೈಕ್ಷಣಿಕ ವೆಚ್ಚ ಭರಿಸಿದ್ದರು.

ಈ ವಿದ್ಯಾರ್ಥಿಯ ಸಮಸ್ಯೆ ಯನ್ನು ಮದ್ದೂರು ಧ್ವನಿ ಲಯನ್ಸ್ ಸಂಸ್ಥೆ ಗಮನಕ್ಕೆ ತಂದರು.

ಈ ಸಮಸ್ಯೆ ಬಗ್ಗೆ ತಿಳಿದ ಕೂಡಲೇ ಧ್ವನಿ ಲಯನ್ಸ್ ಸಂಸ್ಥೆ ಅ ವಿದ್ಯಾರ್ಥಿ ಗೆ 45 ಸಾವಿರಗಳನ್ನ ಹಣಕಾಸು ಸಹಾಯ ಮಾಡುವ ಮೂಲಕ ಅ ವಿದ್ಯಾರ್ಥಿ ಯ ನೆರವಿಗೆ ಧಾವಿಸಿತು.

ಈ ಸಂಧರ್ಭದಲ್ಲಿ ಲಯನ್ ದೇವೇಗೌಡರು, ರಜನಿರಾಜ್ 

ಲಯನ್ ನಾರಾಯಣ ಸ್ವಾಮಿ ಲಯನ ಹರ್ಷ,ಲಯನ್ ನಿರಂಜನ , ಲಯನ್ ಮಂಜುನಾಥ್ ಭೈರಪ್ಪ, ಜಯವತಿ, ಸಿದ್ದು, ಅನಿಲ್ ಡಾಕ್ಟರ್ ಲೋಹಿತ್ ಚಂದನ್ ಲಕ್ಷ್ಮಿ , ನಿರಂಜನ ಹಾಗೂ ಲಯನ್ಸನ ನೂರಾರು ಬಂಧುಗಳು ಈ ಶುಭ ಸಮಾರಂಭದಲ್ಲಿ

ಉಪಸ್ಥಿತರಿದ್ದರು

What's Your Reaction?

like

dislike

love

funny

angry

sad

wow