ಕೆ ಆರ್ ಪೇಟೆ : ಕೋರಮಂಡಲ್ ಶುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪರ ವಿರೋಧದ ನಡುವೆ ದಲಿತ ಮುಖಂಡ ಸಣ್ಣಯ್ಯನ ಮಗ ಸುನಿಲ್ ಕುಮಾರ್ ಗೆ ಅಲ್ಲೇ ಮಾಡಿ ದೌರ್ಜನ್ಯ ಎಸಗಿರುವರಿಗೆ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದರು

ಕೆ ಆರ್ ಪೇಟೆ : ಕೋರಮಂಡಲ್ ಶುಗರ್ ಕಾರ್ಖಾನೆಯಲ್ಲಿ ಎಥೆನಾಲ್  ಘಟಕ ಪರ  ವಿರೋಧದ ನಡುವೆ ದಲಿತ ಮುಖಂಡ ಸಣ್ಣಯ್ಯನ ಮಗ ಸುನಿಲ್ ಕುಮಾರ್ ಗೆ ಅಲ್ಲೇ ಮಾಡಿ ದೌರ್ಜನ್ಯ ಎಸಗಿರುವರಿಗೆ  ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದರು

ಕೆ ಆರ್ ಪೇಟೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕರೆದು ವಕೀಲರಾದ ಜಿ ಜೆ ಲೋಕೇಶ್ ಮಾತನಾಡಿ ಎಲ್ಲಾ ಚಳುವಳಿಗಳು ಹುಟ್ಟುವ ಮುನ್ನ ದಲಿತ ಚಳುವಳಿ ಹುಟ್ಟಿದ್ದು. ದಲಿತ ಚಳುವಳಿಗಳು ಎಂದು ರೈತ ಸಂಘಗಳ ವಿರುದ್ಧ ಪ್ರತಿಭಟಿಸಿಲ್ಲ. ಇಲ್ಲ ಇತರೆ ಸಂಘಗಳ ವಿರುದ್ಧ ಚಳುವಳಿಗಳನ್ನು ಮಾಡಿಲ್ಲ.ದಲಿತ ಚಳುವಳಿಗಳು ನ್ಯಾಯದ ಪರ ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ.ಇದುವರೆಗೂ 

 ಕೋರಮಂಡಲ್ ಐಸಿಎಲ್ ಶುಗರ್ ಫ್ಯಾಕ್ಟರಿ ಪರವಾಗಲಿ ವಿರೋಧವಾಗಲಿ ದಲಿತ ಸಂಘಟನೆಗಳು ಹೋರಾಟ ಮಾಡಿಲ್ಲ. ಹಾಗೆ ರೈತ ಸಂಘದ ಪರವಾಗಿ ಕಬ್ಬು ಬೆಳೆಗಾರರ ಸಂಘದ ಪರವಾಗಿ ವಿರೋಧವಾಗಲಿ ದಲಿತ ಸಂಘಟನೆಗಳು ಹೋರಾಟ ಮಾಡಿಲ್ಲ.ಆದರೆ ಮಾರ್ಚ್ ಆರನೇ ತಾರೀಕು ಜಿಲ್ಲಾಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಗಳು ತಾಲೂಕ ದಂಡಾಧಿಕಾರಿಗಳು ಪರಿಸರ ಮಾಲಿನ್ಯ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯಗಳನ್ನು ತಿಳಿಸಲು ಕರೆದಿದ್ದ ಸಭೆಯಲ್ಲಿ ಎಥೆನಾಲ್ ಘಟಕಕ್ಕೆ ಪರ ವಿರೋಧ ಮಾಡುವುದಕ್ಕೆ ಎಲ್ಲರಿಗೂ ಸಂವಿಧಾನಬದ್ಧ ಹಕ್ಕಿದೆ. ಇದನ್ನು ಬಿಟ್ಟು ನಮ್ಮ ಸಮಾಜದ ಮುಖಂಡ ಸಣ್ಣಯ್ಯ ರವರ ಮಗ ಸುನಿಲ್ ಕುಮಾರಗೆ ಹಲ್ಲೆ ಮಾಡಿ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಾರೆ ಎಂದರೆ ಜಿಲ್ಲಾಡಳಿತ ತಾಲೂಕ ಆಡಳಿತ ಎಲ್ಲವೂ ಅಲ್ಲಿದ್ದು ಒಬ್ಬ ದಲಿತನಿಗೆ ರಕ್ಷಣೆ ಕೊಡಲಾಗಲಿಲ್ಲವೆಂದರೆ ಇದು ಭದ್ರತೆ ವೈಫಲ್ಯವೇ ಸರಿ. ನಮ್ಮ ದಲಿತರು ಯಾರ ಮೇಲೂ ದೌರ್ಜನ್ಯ ದಬ್ಬಾಳಿಕೆ ಮಾಡುವುದಿಲ್ಲ.ನಮ್ಮವರು ಯಾರೂ ರೌಡಿಶೀಟರ್ ಕ್ರಿಮಿನಲ್ ಆಕ್ಟಿವಿಟೀಸ್ ಇರುವಂಥವರು ಇಲ್ಲ. ಇಂಥವರಿಗೆ ನಾವೇಂದು ಬೆಂಬಲ ನೀಡುವುದಿಲ್ಲ.

 ಎಥೆನಾಲ್ ಘಟಕದಿಂದ ಆಗುವ ಲಾಭ ನಷ್ಟಗಳ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ಮತ್ತೊಮ್ಮೆ ಮಾಡಿಕೊಡಬೇಕು ದಲಿತ ಸಂಘಟನೆಗಳು ಎಥಾನಲ್ ಘಟಕದ ಪರ ಇದ್ದೇವೆ ಎಥಾನಲ್ ಘಟಕದಿಂದ ದುಷ್ಪರಿಣಾಮಗಳು ಇದ್ದಾವೆ ಎನ್ನುವುದಾದರೆ ದಾಖಲೆ ಸಮೇತವಾಗಿ ಚರ್ಚೆಗೆ ಬರಲಿ. ಇಲ್ಲ ಎಂದರೆ ಜಿಲ್ಲಾಧಿಕಾರಿಗಳು ಮತ್ತೊಂದು ಸಾರಿ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಎಥನಲ್ ಘಟಕ ಪ್ರಾರಂಭ ಮಾಡಬೇಕು ಎಂದು ತಿಳಿಸಿದರು.

 ಡಿಎಸ್ಎಸ್ ಜಿಲ್ಲಾಧ್ಯಕ್ಷರಾದ ಮಂಬಳಿ ಜೈರಾಮ್ ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕೋರಮಂಡಲ್ ಶುಗರ್ ಫ್ಯಾಕ್ಟರಿ ಎಲ್ಲಿ ನಿರ್ದೇಶಕರು ಸದಸ್ಯರುಗಳನ್ನ ಮಾಡಿಕೊಳ್ಳಬೇಕು ಕೆಲವು ಸಂಘ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ನಿರ್ದೇಶಕರು ಸದಸ್ಯರುಗಳನ್ನು ಮಾಡಿಕೊಳ್ಳದೆ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದಾರೆ ಇದು ನಿಲ್ಲಬೇಕು ಕೋರಮಂಡಲ್ ಶುಗರ್ ಫ್ಯಾಕ್ಟರಿ ಬಂದು ಈ ತಾಲೂಕಿನ ಜನತೆಗೆ ಅನುಕೂಲವಾಗಿದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಕೂಡ ಕಬ್ಬು ಬೆಳೆಗಾರರಿದ್ದಾರೆ ಆದರೆ ದಲಿತರ ದಲಿತ ಮುಖಂಡ ಸಣ್ಣಯ್ಯ ರವರ ಮಗ ಸುನಿಲ್ ಕುಮಾರ್ ಮೇಲೆ ಅಲ್ಲೇ ಮಾಡಿ ದಬ್ಬಾಳಿಕೆ ದೌರ್ಜನ್ಯ ಮಾಡಿರುವುದು ಮತ್ತು ನಮ್ಮ ಸಮಾಜದ ಮುಖಂಡರಾದ ಚೌಡೇನಹಳ್ಳಿ ದೇವರಾಜ್ ರವರು ಬಿಡಿಸಲು ಹೋದ ರವರ ಮೇಲೆ ಅಲ್ಲೇ ಮಾಡಿರುವುದು ಖಂಡನೆಯ ಇನ್ನು ಮುಂದೆ ನಮ್ಮ ಸಮಾಜದ ಮುಖಂಡರ ಮೇಲಾಗಲಿ ಸಮಾಜದವರ ಮೇಲಾಗಲಿ ದಬ್ಬಾಳಿಕೆ ದೌರ್ಜನ್ಯ ನಡೆದಿದ್ದೇ ಆದರೆ ಇನ್ನು ಮುಂದೆ ನಮ್ಮ ದಲಿತ ಸಂಘಟನೆ ಉಗ್ರವಾದ ಹೋರಾಟಗಳನ್ನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಈ ಸಂದರ್ಭದಲ್ಲಿ ವಕೀಲರಾದ ಜಿ ಜೆ ಲೋಕೇಶ್, ಡಿಎಸ್ಎಸ್ ಜಿಲ್ಲಾಧ್ಯಕ್ಷರಾದ ಮಂಬಳಿ ಜಯರಾಮ್, ಡಿಎಸ್ಎಸ್ ಮುಖಂಡರಾದ ಲಕ್ಷ್ಮಿಪುರ ರಂಗಸ್ವಾಮಿ, ದಲಿತ ಸಂಘಟನೆಯ ಅಧ್ಯಕ್ಷರಾದ ಚೌಡೇನಹಳ್ಳಿ ದೇವರಾಜ್, ಕರ್ನಾಟಕ ಭೀಮ್ ಸೇನೆಯ ಜಿಲ್ಲಾ ಗೌರವಾಧ್ಯಕ್ಷರಾದ ಜಕ್ಕನಹಳ್ಳಿ ರಾಜೇಶ್, ಕಿಕ್ಕೇರಿ ವಿ ಎಸ್ ಎಸ್ ಎನ್ ಮಾಜಿ ನಿರ್ದೇಶಕರಾದ ಮುರಳಿ, ಕಿಕ್ಕೇರಿ ಸೋಮಶೇಖರ್, ತಂಡೆಕೆರೆ ನಿಂಗಯ್ಯ, ಮುದಿಗೆರೆ ಕುಳ್ಳಪ್ಪ. ಬಸ್ತಿ ಪವನ್ ಕುಮಾರ್. ಮಾಕೊಳ್ಳಿ ಸುನಿಲ್ ಕುಮಾರ್. ಮುದುಗೆರೆ ಮಂಜು. ಹೆಗ್ಗನಹಳ್ಳಿ ಪರಮೇಶ್, ನಗರಘಟ್ಟ ಮಂಜು, ಕಬ್ಬನ್ಗೆರೆ ಪುಟ್ಟರಾಜ್, ಚಿಕ್ಕಡಿಗನಹಳ್ಳಿ ಶ್ರೀಧರ್, ಮಹೇಂದ್ರ ರಾಮು ಗ್ರಾಮ ಪಂಚಾಯತಿ ಸದಸ್ಯರಾದ ಕೃಷ್ಣಾಪುರ ಗಿರೀಶ್ ಮತ್ತು ಹಲವು ದಲಿತ ಮುಖಂಡರು ಸಂಘ-ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು ,

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow