*ಮೋನಿಶ್ ಚಾರಿಟೇಬಲ್ ಟ್ರಸ್ಟ್ ವಾರ್ಷಿಕ ಮಹೋತ್ಸವ ಹಾಗೂ ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ -2024 ಪ್ರಶಸ್ತಿ ಪುರಸ್ಕಾರ ಸಮಾರಂಭ*

*ಮೋನಿಶ್ ಚಾರಿಟೇಬಲ್ ಟ್ರಸ್ಟ್ ವಾರ್ಷಿಕ ಮಹೋತ್ಸವ ಹಾಗೂ ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ -2024 ಪ್ರಶಸ್ತಿ ಪುರಸ್ಕಾರ ಸಮಾರಂಭ*

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಮೋನಿಶ್ ಚಾರಿಟೇಬಲ್ ಟ್ರಸ್ಟ್ ನ ವಾರ್ಷಿಕೋತ್ಸವ ಹಾಗೂ ಮೋನಿಷ್ ಅವರ ಹುಟ್ಟು ಹಬ್ಬದ ಅಂಗವಾಗಿ *ಯುವ ಮಾಣಿಕ್ಯ ಮೋನಿಷ್ ಪ್ರಶಸ್ತಿ- 2024* ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಎಲ್.ವೈ.ರಾಜೇಶ್(ಡಿವೈಎಸ್ಪಿ, ಲೋಕಾಯುಕ್ತ ಎಸ್ಐಟಿ),ಮೋನಿಶ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಗೀತಾ ರೆಡ್ಡಿ ,ಚಲನಚಿತ್ರ ನಿರ್ದೇಶಕರಾದ ವಿಜಯಾನಂದ್, ಚಲನಚಿತ್ರ ಪೋಷಕ ನಟರಾದ ಶಿವಕುಮಾರ್ ಆರಾಧ್ಯ, ವಿಶ್ವನಾಥ್ ಗೌಡರು,ಆರವ್ ಲೋಹಿತ್,ಕರಾಟೆ ಶ್ರೀನಾಥ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು 

ಈ ಕಾರ್ಯಕ್ರಮವನ್ನು ಕುರಿತು ಡಿವೈಎಸ್ಪಿ.ರಾಜೇಶ್ ಮಾತನಾಡಿ ಸಮಾಜದಲ್ಲಿ ಎಲ್ಲರೂ ಬದುಕುತ್ತಾರೆ,ಆದರೆ ಸೇವೆಯನ್ನು ಮಾಡಿದವರು ಹಾಗೂ ಸಮಾಜಕ್ಕೆ ಕೊಡುಗೆಯನ್ನು ನೀಡಿದವರು ಸತ್ತ ಮೇಲೂ ಬದುಕುತ್ತಾರೆ ಎಂದು ಎಲ್.ವೈ.ರಾಜೇಶ್ ಡಿವೈಎಸ್ಪಿ ರವರು ಡಾ.ಶಿವಕುಮಾರ ಸ್ವಾಮಿಗಳು,ಡಾ.ರಾಜ್ ಕುಮಾರ್,ಡಾ.ವಿಷ್ಣುವರ್ಧನ್,ಶಂಕರ್ ನಾಗ್,ಡಾ.ಪುನೀತ್ ರಾಜಕುಮಾರ್ ಹಾಗೂ ಇನ್ನೂ ಹಲವಾರು ಗಣ್ಯರನ್ನು ಉದಾಹರಣೆ ನೀಡಿ ತಿಳಿಸಿದರು. 

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾ ರೆಡ್ಡಿ.ಎಸ್.ಆರ್ ಮೋನಿಷ್ ಚಾರಿಟಬಲ್ ಟ್ರಸ್ಟ್(ರಿ) ಅಧ್ಯಕ್ಷರು, ಶ್ರೀ ಅಕ್ಷಯ್ ಎಸ್.ರೆಡ್ಡಿ ಉಪಾಧ್ಯಕ್ಷರು ಮೋನಿಷ್ ಚಾರಿಟಬಲ್ ಟ್ರಸ್ಟ್(ರಿ),ಎಲ್.ವೈ.ರಾಜೇಶ್ ಡಿ.ವೈ.ಎಸ್.ಪಿ ಲೋಕಾಯುಕ್ತ ಎಸ್.ಐ.ಟಿ, ಶ್ರೀ ಶಿವಕುಮಾರ್ ಆರಾಧ್ಯ ಪೋಷಕ ಚಲನಚಿತ್ರ ನಟರು, ಗಿನ್ನಿಸ್ ದಾಖಲೆ ಕರಾಟೆ ಯೋಗ ಮತ್ತು ಮಾರ್ಷಲ್ ಕೋಚ್ ಖ್ಯಾತಿಯ ಶ್ರೀ ಡಾ.ಕರಾಟೆ ಶ್ರೀನಾಥ್, ಶ್ರೀ ವಿಜಯಾನಂದ ಚಲನಚಿತ್ರ ನಿರ್ದೇಶಕರು, ಶ್ರೀ ಅರಾವ್ ಲೋಹಿತ್ ಚಲನಚಿತ್ರ ನಟರು ಮತ್ತು ನಿರ್ದೇಶಕರು, ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಕಡಬ ಶ್ರೀನಿವಾಸ್, ಜೂನಿಯರ್ ಪ್ರಾಣೇಶ್ ಖ್ಯಾತಿಯ ಶ್ರೀ ಬೆಮಲ್ ಕಂಪಲಪ್ಪ ಮತ್ತಿತ್ತರು ಕಾರ್ಯಕ್ರಮದಲ್ಲಿ ಹಾಜರಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜನ್ಮಭೂಮಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಜನ್ಮಭೂಮಿ ರವಿ, *ಮುಸ್ಸಂಜೆ ಸಮಯ ಪತ್ರಿಕೆಯ ವರದಿಗಾರರಾದ ಹಲಗೂರು ಎ.ಬಿ.ಪ್ರತಾಪ್,* ಸಂಪಾದಕರಾದ ಅಮಿತ್ ಗೋವಿಂದ್, ಪತ್ರಕರ್ತರಾದ ಆಂಥೋನಿ ರಾಜ್,ಅಮ್ಮನ ಆಶ್ರಯ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಸುಧಾ ತ್ಯಾಗರಾಜ್,ಎಸ್.ಜಿ.ಮಂಜುಳ,ಪ್ರೀತು ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ವರಲಕ್ಷ್ಮಿ ಮಂಜುನಾಥ್, ಅಭಯ್ ಸಮಾಜ ಸೇವಾ ‌ಸಂಸ್ಥೆಯ ಅಭಯ್ ಶೀಲಾ-ಅಭಯ್ ಕೃಷ್ಣಯ್ಯ,ಜಿ.ವೈ.ಲೀಲಾವತಿ,ವಿಜಯ ರಾಘವೇಂದ್ರ,ವೀಣಾ ದೇವಿ,ನಾಗರತ್ನ ರವರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

*ವರದಿ. ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow