*ಹನುಮನ ಶಕ್ತಿ ನಮ್ಮ ದೇಶದ ಯೋಧರಿಗೆ ರಕ್ಷಕವಚವಾಗಿರಲಿ ಸಾರಂಗಿ ನಾಗಣ್ಣ*

*ಹನುಮನ ಶಕ್ತಿ ನಮ್ಮ ದೇಶದ ಯೋಧರಿಗೆ ರಕ್ಷಕವಚವಾಗಿರಲಿ ಸಾರಂಗಿ ನಾಗಣ್ಣ*

ಕೆ ಆರ್ ಪೇಟೆ ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೃಷ್ಣರಾಜಪೇಟೆ ಬಿಜೆಪಿ ಮಂಡಳ ಅಧ್ಯಕ್ಷರಾದ ಸಾರಂಗಿ ನಾಗಣ್ಣ ಹಾಗೂ ಮೋರ್ಚಗಳ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ನೇತೃತ್ವದಲ್ಲಿ ಪಾಕಿಸ್ತಾನ ಭಾರತಕ್ಕೆ ನಡೆಯುತ್ತಿರುವ ಯುದ್ಧದಲ್ಲಿ ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ದೇಶದ ಸೈನಿಕರಿಗೆ ಆಯಸ್ಸು ಆರೋಗ್ಯ ಕೀರ್ತಿ ಲಭಿಸಿ ಜಯಗಳಿಸಿ ದುಷ್ಕರ್ಮಿಗಳ ಎಡೆಮುರಿ ಕಟ್ಟಿ ನಮ್ಮ ಯೋಧರು ಸುರಕ್ಷಿತವಾಗಿ ಜಯಗಳಿಸಿ ಬರಲಿ ಎಂದು ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಮಂಡಳ ಅಧ್ಯಕ್ಷರಾದ ಸಾರಂಗಿ ನಾಗಣ್ಣ ಪಾಲ್ಗಾಮ್‌ನಲ್ಲಿ ನಡೆದ ನಮ್ಮ ದೇಶದ 26 ಪ್ರವಾಸಿಗರಿಗೆ ಧರ್ಮದ ಹೆಸರಿನಲ್ಲಿ ದುಷ್ಕೃತ್ಯ ನಡೆಸಿದ ಭಯೋತ್ಪಾದಕರ ನೆಲೆಯ ಮೇಲೆ ದಾಳಿ

ನಡೆಸಿ ಭಾರತದ ಯುದ್ಧ ಭಯೋತ್ಪಾದಕ ದುಷ್ಕರ್ಮಿಗಳಿಗೆ ಹೊರತು ಬೇರೆಯವರ ಮೇಲ ಅಲ್ಲ ಎಂದು ಸಂದೇಶ ಸಾರಿದೆ ಆದರೂ ಪಾಕಿಸ್ತಾನ ತಮ್ಮ ತಪ್ಪುಗಳನ್ನು ಅರಿವು ಮಾಡಿಕೊಳ್ಳದೆ ಪದೇ ಪದೇ ಖ್ಯಾತಿ ತೆಗೆಯುತ್ತಿರುವುದು ಭಯೋತ್ಪಾದಕರಿಗೆ ಬೆಂಬಲ ಕೊಡುತ್ತಿರುವುದು ಪಾಕಿಸ್ತಾನದ ವಿನಾಶದ ದಾರಿಯನ್ನ ಪಾಕಿಸ್ತಾನ್ವೇ ಸೃಷ್ಟಿ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ ದೇಶದ ಅಭಿಮಾನಕ್ಕೆ ದೇಶ ರಕ್ಷಣೆಗೆ ಗಡಿಯಲ್ಲಿ ನಿಂತು ಯುದ್ಧ ಮಾಡುತ್ತಿರುವ ನಮ್ಮ ಸೈನಿಕರಿಗೆ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಂದ್ರ ಸರ್ಕಾರಕ್ಕೆ ಶುಭವಾಗಲಿ ಅನಿವಾರ್ಯತೆ ಬಿದ್ದರೆ ಇಡೀ ಭಾರತಾಂಬೆಯ ಮಕ್ಕಳಾದ ನಾವೆಲ್ಲರೂ ತಮ್ಮ ಬೆಂಬಲಕ್ಕೆ ಸಹಕಾರಕ್ಕೆ ನಿಲ್ಲುತ್ತೇವೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪರಮೇಶ್ ಅರವಿಂದ್,ಪ್ರಧಾನ ಕಾರ್ಯದರ್ಶಿಗಳಾದ ಚೋಕನಹಳ್ಳಿ ಪ್ರಕಾಶ್, ಎಸ್ ಟಿ ಮೋರ್ಚಾದ ತಾಲೂಕ್ ಅಧ್ಯಕ್ಷರಾದ ರಾಜು ಜಿ ಪಿ, ಶಿಲ್ಪ, ನಾಗಮಣಿ, ಕೆಂಪಯ್ಯ, ಬಿಜೆಪಿ ಕಾರ್ಯಕರ್ತರು ದೇಶಾಭಿಮಾನಿಗಳು ಪೂಜೆಯಲ್ಲಿ ಭಾಗವಹಿಸಿ ದೇಶಕ್ಕೆ ಯೋಧರಿಗೆ ಶುಭವಾಗಲಿ ಎಂದು ಪ್ರಾರ್ಥಿಸಿದರು.

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow