ಬಡವರ ಮನೆಯ ದೀಪ ಆರಿಸದಿರಿ ವಿದ್ಯುತ್ ಖಾಸಗಿಕರಣ ಕೈಬಿಡಿ

ಬಡವರ ಮನೆಯ ದೀಪ ಆರಿಸದಿರಿ ವಿದ್ಯುತ್ ಖಾಸಗಿಕರಣ ಕೈಬಿಡಿ

ಬಡವರ ಮನೆಯ ದೀಪ ಆರಿಸದಿರಿ ವಿದ್ಯುತ್ ಖಾಸಗಿಕರಣ ಕೈಬಿಡಿ

ಭಾರತ್ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ) ಕೃಷ್ಣರಾಜಪೇಟೆ ತಾಲೂಕು ಸಮಿತಿ ವತಿಯಿಂದ ಟಿಬಿ ವೃತ್ತದಿಂದ ಜಾತ ತೆರಳಿ ತಹಸಿಲ್ದಾರ್ ಗೆ ಮನವಿ ನೀಡಿದರು. ಈ ಸಭೆ ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿಯ ಸದಸ್ಯರು ಸಿಪಿಐ(ಎಂ)

 ಎಂ ಪುಟ್ಟ ಮಾತು ರವರು.

 ಬೆಲೆ ಏರಿಕೆ ನಿಲ್ಲಿಸಿ, ಉದ್ಯೋಗ ಒದಗಿಸಿ, 5 ಕೆ.ಜಿ. ಹೆಚ್ಚುವರಿ ಅಕ್ಕಿ ಕೊಡಿ ಮತ್ತು ಕಾವೇರಿ ಜನರಿಗೆ

ಪರಿಹಾರ ಒದಗಿಸಲು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಸಿ.ಪಿ.ಐ.[ಎ೦] ಒತ್ತಾಯ.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು, ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯದ

ಜನತೆಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಯನ್ನು ನೀಡಲು ರಾಜ್ಯದ ತೆರಿಗೆ ಪಾಲನ್ನು ಹೆಚ್ಚಿಸಲು ಮತ್ತು ಜಿಎಸ್‌ಟಿ ಬಾಕಿ

ವತರಿಸಲು ವಿದ್ಯುತ್ ಖಾಸಗೀಕರಣ ಕೈಬಿಡಲು ಮತ್ತು ಕಾವೇರಿ ನೀರು ಬಿಡುಗಡೆ ಆಗಿರುವ ತೊಂದರೆಗೆ ಪರಿಹಾರ

ಕಲ್ಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸಿ.ಪಿಐ[ಎಂ] ಮನವಿ ಸಲ್ಲಿಸುತ್ತದೆ.

ದೇಶಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟಿಸಲು ಭಾರತ ಕಮ್ಯುನಿಸ್ಟ್ ಪಕ್ಷ [ಮಾಕ್ಸ್ವಾದಿ]

ಕೇಂದ್ರ ಸಮಿತಿ ನೀಡಿರುವ ಕರೆಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಕೂಡಲೇ ಕೆಳಕಂಡ

ಬೇಡಿಕೆಗಳನ್ನು ಈಡೇರಿಸಲು ಸಿ.ಪಿ.ಐ.[ಎಂ] ಒತ್ತಾಯಿಸುತ್ತದೆ.

ಬೇಡಿಕೆಗಳು

ಬೆಲೆ ಏರಿಕೆ ತಡೆಯಿರಿ

2014 ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಜನತೆಯನ್ನು ದಿವಾಳಿ

ಎಬ್ಬಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ಹೈರಾಣಾಗಿದ್ದು, ಕಳೆದ ಐದು ವರ್ಷಗಲಲ್ಲಿ ಅಗತ್ಯ ವಸ್ತುಗಳ

ಬೆಲೆಯಲ್ಲಿ ಶೇಕಡ 67 ರಷ್ಟು ಹೆಚ್ಚಳವಾಗಿದೆ. ಅದೇ ಸಮಯದಲ್ಲಿ ದುಡಿಯುವ ಜನರ ವೇತನ ಕೇವಲ ಶೇಕಡ 35

ಮಾತ್ರ ಹೆಚ್ಚಳವಾಗಿದೆ. ಇದರಿಂದಾಗಿ ದುಡಿದ ಕಾಸು ಕೈಯಲ್ಲಿ ಉಳಿಯದ ಹೊಟ್ಟೆ ತುಂಬಿಸಲು ಸಾಲ

ಮಾಡಬೇಕಾದ ಸ್ಥಿತಿನ್ನು ಮೋದಿ ಸರ್ಕಾರ ನಿರ್ಮಿಸಿದೆ. ಅಡಿಗೆ ಅನಿಲ, ಪೆಟ್ರೋಲ್, ಡೀಸೆಲ್, ರಾಸಾಯನಿಕ

ಗೊಬ್ಬರ, ಕೃಷಿ ಉಪಕರಣಗಳು ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಎಲ್ಲಾ ವಸ್ತುಗಳ ಮೇಲೆ

ಮನಸೋಯಿಚೆ ವಿಧಿಸುತ್ತಿರುವ ಜಿಎಸ್‌ಟಿ ತೆರಿಗೆ ಮತ್ತು ಸರ್ಕಾರ ನೀಡುತ್ತಿದ್ದ ಸಹಾಯಧನದ ಕಡಿತ ಇದಕ್ಕೆಲ್ಲ ಕಾರಣವಾಗಿದೆ ಎಂದು ತಿಳಿಸಿದರು.

 ಸಿಪಿಐ(ಎಂ) ಸದಸ್ಯರು ತಾಲೂಕು ಮುಖಂಡರು ಜಿಎಚ್ ಗಿರೀಶ್ ಮನವಿ ಪತ್ರವನ್ನು ಪ್ರತಿಭಟನಾಕಾರರು ಮತ್ತು ಸಾರ್ವಜನಿಕರ ಮುಂದೆ ಮನವಿ ಮಾಡುತ್ತಿರುವ ವಿಷಯಗಳ ಬಗ್ಗೆ ಮಾತನಾಡಿ ಕೃಷ್ಣರಾಜಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವುದು ಹಾಗೂ ಉದ್ಯೋಗ ಖಾತರಿ

ಯೋಜನೆಯಡಿ ಕೂಲಿ ಹೆಚ್ಚಳ ಮಾಡುವುದು ಮತ್ತು ಕೂಲಿ ಮಾಡುವ ದಿನವನ್ನು ಹೆಚ್ಚಳ ಮಾಡುವುದು.

ಕೃಷ್ಣರಾಜಪೇಟೆ ತಾಲೂಕು, ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಮತ್ತು ಸ್ಮಶಾನ

ಒದಗಿಸುವುದು.

ಕೃಷ್ಣರಾಜಪೇಟೆ ತಾಲೂಕು, ಕಿಕ್ಕೇರಿ ಹೋಬಳಿಯ ಉದ್ವಿನಮಲ್ಲನಹೊಸೂರುಕೊಪ್ಪಲು ಗ್ರಾಮಕ್ಕೆ ರಸ್ತೆ,

ಕುಡಿಯುವ ನೀರು ಮತ್ತು ಸ್ಮಶಾನ ಒದಗಿಸುವುದು.

« ಕೃಷ್ಣರಾಜಪೇಟೆ ತಾಲೂಕು, ಅಕ್ಕಿಹಬ್ಬಾಳು ಹೋಬಳಿಯ ಶ್ರವಣನಹಳ್ಳಿ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು

ಒದಗಿಸುವುದು.

ಕೃಷ್ಣರಾಜಪೇಟೆ ತಾಲೂಕು, ಕಿಕ್ಕೇರಿ ಹೋಬಳಿ, ಕಿಕ್ಕೇರಿ ಗ್ರಾಮದ ಸರ್ವೆ ನಂಬರ್:6 , ಎಪಿಎಂಸಿ ಮುಂಭಾಗ

ಸುಮಾರು 40 ವರ್ಷದಿಂದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ಜನರಿಗೆ ಹಕ್ಕುಪತ್ರ ಮತ್ತು ಕುಡಿಯುವ

ನೀರು ಈ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಮನವಿ ಪತ್ರ ನೀಡಿದರು. 

 ಈ ಹೋರಾಟದ ನೇತೃತ್ವವನ್ನು 

ಎಂ.ಪುಟ್ಟಮಾದು

ರಾಜ್ಯ ಸಮಿತಿ ಸದಸ್ಯರು, ಸಿಪಿಐ[ಎಂ]

 ಜಿ ರಾಮಕೃಷ್ಣ 

ಜಿಲ್ಲಾ ಸಮಿತಿ ಕಾರ್ಯದರ್ಶಿ

ಜಯಮ್ಮ

 ಸದಸ್ಯರು ಸಿಪಿಐ(ಎಂ) 

ಗೋಪಾಲ

ಸದಸ್ಯರು, ಸಿಪಿಐ(ಎಂ] ಸದಸ್ಯರು, ಸಿಪಿಐ[ಎಂ]

ಜಿ.ಹಚ್.ಗಿರೀಶ

ತಾಲೂಕುಮುಖಂಡರು, ಸಿಪಿಐ[ಎಂ]

ಪೂಜಾ ಚಿಕ್ಕೇಗೌಡ

ಸದಸ್ಯರು, ಸಿಪಿಐ[ಎಂ]

ಜಾಹಿರ್

ಸದಸ್ಯರು, ಸಿಪಿಐ[ಎಂ] ಪವಿತ್ರ, ರಾಣಿ,ಲಕ್ಷ್ಮೀ,ರಾಜಯ್ಯ,ಕುಲಿ ಕಾರ್ಮಿಕ ರೈತ ಮಹಿಳೆಯರು, ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

 ವರದಿ *ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow