ಕೆ.ಆರ್.ಪೇಟೆ: ನೂರಾರು ಎಕರೆ ಜಮೀನಿಗೆ ಹೋಗಲು ಇರುವ ಹಾಗೂ ರೈತರಿಗೆ ಅನುಕೂಲವಾಗುವ ಸರ್ಕಾರಿ ಖರಾಬು ರಸ್ತೆಯನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿದ್ದು ಜಮೀನಿಗೆ ಹೋಗಲು ತೊಂದರೆಯಾಗಿದ್ದು ಕೂಡಲೇ ಒತ್ತುವರಿ ತೆರವು ಮಾಡಿಸಿಕೊಡಬೇಕು ಎಂದು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮದ್ದಿಕ್ಯಾಚಮನಹಳ್ಳಿ, ಹೊಸಕೋಟೆ, ಮಡುವಿನಕೋಡಿ ಗ್ರಾಮದ ರೈತರು ತಹಸೀಲ್ದಾರ್ ನಿಸರ್ಗಪ್ರಿಯ ಅವರಿಗೆ ಮನವಿ ಸಲ್ಲಿಸಿರು ಒತ್ತಾಯ ಮಾಡಿದ್ದಾರೆ.
ಮಿನಿವಿಧಾನ ಸೌಧದಲ್ಲಿರುವ ಕೆ ಆರ್ ಪೇಟೆ ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರನ್ನು ಬೇಟಿ ಮಾಡಿದ ರೈತರು ಲಿಖಿತ ಮನವಿ ಸಲ್ಲಿಸಿ, ಮದ್ದಿಕ್ಯಾಚಮನಹಳ್ಳಿ ಗ್ರಾಮದ ಜಮಬಂದಿಗೆ ಸೇರಿರುವ ಸರ್ವೆ ನಂ.೨೨೭, ೨೨೮, ೨೨೯, ೨೩೦, ೨೩೬, ೨೩೭, ೨೩೮ ರ ಅಕ್ಕ-ಪಕ್ಕದ ಜಮೀನಿನ ರೈತರು ಸುಮಾರು ೩೦ ಅಡಿಯಿಂದ ೪೦ ಅಡಿಯಷ್ಟು ಸರ್ಕಾರಿ ಖರಾಬ್ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುತ್ತಾರೆ. ಇದರಿಂದಾಗಿ ಜಮೀನಿಗೆ ಹೋಗಲು ಬಂಡಿ ರಸ್ತೆಯು ಮುಚ್ಚಿ ಹೋಗಿರುತ್ತದೆ. ಇದರಿಂದ ನೂರಾರು ರೈತರು ತಮ್ಮ ಜಮೀನುಗಳಿಗೆ ಹೋಗಲು, ಜನ-ಜನುವಾರುಗಳಿಗೆ ತೊಂದರೆಯಾಗಿರುತ್ತದೆ. ಖರಾಬು ಜಾಗದಲ್ಲಿ ತಿರುಗಾಡಲು ಬಿಡುತ್ತಿಲ್ಲ. ಜನ-ಜಾನುವಾರುಗಳು ತಿರುಗಾಡಿದರೆ ಒತ್ತುವರಿ
ಮಾಡಿಕೊಂಡಿರುವAತಹ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ಕಡೆಯ ಭಾಗದ ರೈತರಿಗೆ ತುಂಬಾ ತೊಂದರೆಯಾಗಿರುತ್ತದೆ. ಈ ಹಿಂದೆ ೨೦೧೯ನೇ ಸಾಲಿನಲ್ಲಿ ತಾಲ್ಲೂಕು ತಹಶೀಲ್ದಾರ್ ಅಧಿಕಾರಿಯವರ ನೇತೃತ್ವದಲ್ಲಿ ಆಳತೆ ಮಾಡಿ ಗ್ರಾಮಸ್ಥರ ನೇತೃತ್ವದಲ್ಲಿ ಹದ್ದುಬಸ್ತು ಕಲ್ಲನ್ನು ಹಾಕಲಾಗಿತ್ತು. ಆದರೆ ಕಲ್ಲು ಕಿತ್ತುಹಾಕಿ ಮತ್ತೆ ಒತ್ತುವರಿ ಮಾಡಿಕೊಂಡು ಖರಾಬು ರಸ್ತೆಯನ್ನು ಜಮೀನು ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಕೇಳಿದರೆ ಬೆಳೆ ಕಟಾವು ಮಾಡಿದ ನಂತರ ರಸ್ತೆ ಬಿಟ್ಟುಕೊಡುತ್ತೇವೆ. ಅಳತೆ ಮಾಡಿಸಿ ಬಿಡಿಸಿಕೊಳ್ಳಿ ಎಂಬ ಸಬೂಬು ಹೇಳುತ್ತಿದ್ದಾರೆ. ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿ, ಗ್ರಾಮಸ್ಥರ ಸಮುಖದಲ್ಲಿ ರೈತರು ರಸ್ತೆ ಮಾಡಲು ಮುಂದಾಗಿದ್ದವು. ಆ ಸಂದರ್ಭದಲ್ಲಿ ಆವಾಚ್ಯ ಶಬ್ಧಗಳಿಂದ ಬೈದು ರೈತರ ಮೇಲೆ ಹಲ್ಲೆ ಮಾಡಲು ಮುಂದಾಗಿರುತ್ತಾರೆ. ಆದ್ದರಿಂದ ಪೊಲೀಸ್ ರಕ್ಷಣೆಯೊಂದಿಗೆ ಖರಾಬು ರಸ್ತೆಯನ್ನು ಅಳತೆ ಮಾಡಿಸಿ, ಒತ್ತುವರಿ ತೆರವು ಮಾಡಿಸಿ ರಸ್ತೆಯನ್ನು ಬಿಡಿಸಿಕೊಡಬೇಕು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತರಾದ ಮುತ್ತುರಾಜ್, ಪ್ರಶಾಂತ್, ಮಂಜುನಾಥ್, ನಟೇಶ್, ರಾಜಣ್ಣ, ಕಿರಣ್, ಕೆಂಪೇಗೌಡ, ಸೋಮೆಗೌಡ,ತಿಮ್ಮೇಗೌಡ, ಸುಜೇಂದ್ರ, ತಾಲ್ಲೂಕು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.
ಪೋಟೋ ಶೀರ್ಷಿಕೆ:೨೩.ಕೆ.ಆರ್.ಪಿ-೦೪: ಕೆ.ಆರ್.ಪೇಟೆ: ನೂರಾರು ಎಕರೆ ಜಮೀನಿಗೆ ಹೋಗಲು ಇರುವ ಹಾಗೂ ರೈತರಿಗೆ ಅನುಕೂಲವಾಗುವ ಸರ್ಕಾರಿ ಖರಾಬು ರಸ್ತೆಯನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿದ್ದು ಜಮೀನಿಗೆ ಹೋಗಲು ತೊಂದರೆಯಾಗಿದ್ದು ಕೂಡಲೇ ಒತ್ತುವರಿ ತೆರವು ಮಾಡಿಸಿಕೊಡಬೇಕು ಎಂದು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮದ್ದಿಕ್ಯಾಚಮನಹಳ್ಳಿ, ಹೊಸಕೋಟೆ, ಮಡುವಿನಕೋಡಿ ಗ್ರಾಮದ ರೈತರು ತಹಸೀಲ್ದಾರ್ ನಿಸರ್ಗಪ್ರಿಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದಾರೆ.
*ವರದಿ ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?