ಬೆಂಗಳೂರು: ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ.

ಬೆಂಗಳೂರು: ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ.

ಬೆಂಗಳೂರಿನ ಅಮ್ಮನ ಆಶ್ರಯ ಚಾರಿಟಬಲ್ ಟ್ರಸ್ಟ್ (ರಿ),ಸಂಸ್ಥಾಪಕ ಅಧ್ಯಕ್ಷರಾದ ಡಾ. ಲಕ್ಷ್ಮಿ ದೇವಮ್ಮ (ಸುಧಾ ತ್ಯಾಗರಾಜ್ ) ರವರು ಬೆಂಗಳೂರಿನ ವಿಜಯನಗರದಲ್ಲಿರುವ ಬಿಬಿಎಂಪಿ ಬಿಲ್ಡಿಂಗ್ ಎಂ.ಸಿ ಲೇಔಟ್ 2 ನೇ ಮಹಡಿ 8 ನೇ ಮುಖ್ಯರಸ್ತೆ ವಿಜಯನಗರದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ 2023 ನೇ ಸಾಲಿನ *" ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ "* ಪ್ರದಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು,

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಾಗೂ ಸಮಾಜ ಸೇವಕರಾದ ಡಾ||ಆಂಜನಪ್ಪನವರು ಮಾತನಾಡಿ ಮನುಷ್ಯ ದಿನನಿತ್ಯದ ಬದುಕಿನಲ್ಲಿ ಮೊಬೈಲ್ನ್ ದಾಸನಾಗಿದ್ದು ಮಾನಸಿಕವಾಗಿ- ದೈಹಿಕವಾಗಿ ತನ್ನ ಆಯಸ್ಸನ್ನು ಕಳೆದು ಕೊಳ್ಳುತ್ತಿದ್ದಾರೆ ಮನುಷ್ಯ ನಗಬೇಕು,ನಗಿಸಬೇಕು ಎಂದು ಮಕ್ಕುತಿಮ್ಮನ ಕಗ್ಗದಲ್ಲಿರುವ ಅಮೂಲ್ಯವಾದ ವಿಷಯಗಳನ್ನು ಆಳವಡಿಸಿಕೊಂಡು ನೂರು ವರ್ಷಗಳ ಕಾಲ ಬದುಕುವ ಗುಟ್ಟನ್ನು ತಿಳಿಸಿದರು 

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಗೋವರ್ಧನ್ ಲಾಲ್ ದೇಸಾಯಿ, ಬುಲೆಟ್ ರಾಜು, ರೋಹಿತ್, ಸೆಲ್ವಂ,ಗೌರಿ.ವಿ,ಗೀತಾರೆಡ್ಢಿ, ನಾಗರತ್ನ,ನೀಲಕಂಠ ಅಡಿಗ, ಸ್ವರಾಜ್ ಕುಮಾರ್ ಶಾಸ್ತಿ, ಸಂಜೆ ಪ್ರಭ ಮುಸ್ಸಂಜೆ ಸಮಯ ಪತ್ರಿಕೆಯ ವರದಿಗಾರರಾದ ಲೋಕೇಶ್.ವಿ, ಕಾಯಕಯೋಗಿ ದಿನಪತ್ರಿಕೆಯ ವರದಿಗಾರರಾದ ಎ.ಬಿ.ಪ್ರತಾಪ್, ಕರುನಾಡು ಯುವಜನ ವೇದಿಕೆಯ ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಎಸ್.ರವಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ.ರಾಜು, ಕರುನಾಡು ಯುವಜನ ವೇದಿಕೆಯ ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷರಾದ ಯುವರಾಜ್,ಹರಿಕುಮಾರ್,ಸುಮಂತ್ ಗೌಡ,ಕರವೇ ಫ್ರಾನ್ಸಿಸ್ ಡಿಸೋಜಾ,ಶಿವರಾಘವ, ಉಮಾ, ಲಕ್ಷ್ಮೀ ರವರಿಗೆ "ರಾಜ್ಯ ಮಟ್ಟದ 2023ನೇ ಸಾಲಿನ ಕರ್ನಾಟಕ ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ " ನೀಡಿ ಗೌರವಿಸಲಾಯಿತು,

ಈ ಸಂದರ್ಭದಲ್ಲಿ ಶಾಂತಕುಮಾರಿ ಮಾಜಿ ಮಹಾಪೌರರು (ಬೆಂಗಳೂರು ಮಹಾನಗರ ಪಾಲಿಕೆ), ಅಮ್ಮನ ಆಶ್ರಯ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷೀದೇವಮ್ಮ.ಡಿ.ಎಂ( ಸುಧಾ ತ್ಯಾಗರಾಜ್),ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹೇಂದ್ರ ಮುಣೋತ್, ಡಾ.ಆಂಜನಪ್ಪ,ಲಯನ್ ಮನೋಜ್ ರಣ್ಣೋರೆ,ಲೀಲಾ ಮೋಹನ್, ಕರುಣಾರತ್ನ ವೀರ ಕೆಂಪಯ್ಯ,ರಾಜ್ ಭಾಸ್ಕರ್, ಡಾ.ವಿಮಲ ಸುಬ್ರಹ್ಮಣ್ಯಂ, ಹೆಚ್.ಬಿ.ಶೇಖರ್, ಚಂದ್ರು ರಾಕ್ ಲೈನ್, ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಕೆಬಿಸಿ ಮಂಜುನಾಥ್, ವರದಿಗಾರರಾದ ಸಾಯಿಕುಮಾರ್,ಕುಂಡರೀಕ ಮೂರ್ತಿ, ಪ್ರಕಾಶ್ (ಅಬಾಕಸ್), ರಾಜ್ ದೇವ್, ಅಜಯ್, ಹನುಮಂತು,ಹೊಂಗಿರಣ ಆನಂದ್, ನೃತ್ಯ ಪಟುಗಳು, ಗಾಯಕರು ಸೇರಿದಂತೆ ಹಲವಾರು ಭಾಗವಹಿಸಿದ್ದರು,

What's Your Reaction?

like

dislike

love

funny

angry

sad

wow