*ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆಗೆ 10ನೇ ದಿನ:* *ಪ್ರತಿಭಟನಾ ಸ್ಥಳದಲ್ಲಿ ಅಸ್ವಸ್ಥ ಗೊಂಡ ಮಹಿಳಾ ಗ್ರಾಮ ಆಡಳಿತ ಅಧಿಕಾರಿ*

ಕೆ.ಆರ್.ಪೇಟೆ: ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ರಾಜ್ಯದಲ್ಲೇಡೆ ನಡೆಯುತ್ತಿದ್ದರು ಸರ್ಕಾರ ಇವರ ಬೇಡಿಕೆಗೆ ತಕ್ಷಣ ಸ್ಪಂದಿಸದೇ ಇರುವುದು ಬೇಸರದ ಸಂಗತಿಯಾಗಿದ್ದು ನ್ಯಾಯ ಸಿಗುವವರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಮ್ಮ ಬೆಂಬಲಕ್ಕೆ ನಿಲ್ಲುವುದಾಗಿ ಎಂದು ತಾಲೂಕು ಅಧ್ಯಕ್ಷರಾದ ಲೋಕೇಶ್.ವಿ ತಿಳಿಸಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಂಡಿರುವ ಸ್ಥಳಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತ ಸಂಮಿತ್ರರು ಭೇಟಿ ಕೊಟ್ಟು ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತ ಪಡಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಉಪಾಧ್ಯಕ್ಷರಾದ ರಾಜು.ಜಿ.ಪಿ ಮಾತಾನಾಡಿ
ಆಡಳಿತಾಧಿಕಾರಿಗಳು ನಮ್ಮ ಗ್ರಾಮೀಣ ಭಾಗದ ರೈತರಿಗೆ ಬೇಕಾದ ಎಲ್ಲಾ ಪ್ರಮಾಣಪತ್ರಗಳು ಸೇರಿದಂತೆ ಭೂಮಿಗೆ ಸಂಬಂಧಪಟ್ಟ ಎಲ್ಲಾ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ಸ್ಪಂದಿಸುವ ಪ್ರಾಮಾಣಿಕ ನೌಕರರು.ಇವರ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಅವರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ ಅದರಲ್ಲೂ ಅವರ ಬೇಡಿಕೆ ಸಂವಿಧಾನ ಬದ್ಧವಾದ ಮೂಲಭೂತ ಬೇಡಿಕೆಗಳಿಗೆ ಎರಡನೇ ಬಾರಿ ಮುಷ್ಕರ ಕೈಗೊಂಡಿರುವುದು ಬೇಸರದ ಸಂಗತಿ ಇವೆಲ್ಲವನ್ನು ಗಮನಿಸಿದರೆ ರಾಮಾಯಣದ ಒಂದು ಸನ್ನಿವೇಶ ನೆನಪಿಗೆ ಬರುತ್ತದೆ ಎಂದು ವಾಲ್ಮೀಕಿ ಇಂಥ ಸನ್ನಿವೇಶದ ಬಗ್ಗೆ ರಾಮ ಲಕ್ಷ್ಮಣ ಭರತ ಸೀತೆ ರಾಮ ಪಟ್ಟಾಭಿಷೇಕವನ್ನು ತೊರೆದು ವನವಾಸಕ್ಕೆ ಹೊರಟಿರುತ್ತಾನೆ ರಾಮನ ಜೊತೆ ಸೀತೆ ಮತ್ತು ಲಕ್ಷ್ಮಣರು ಹೊರಟಿರುತ್ತಾರೆ ಪಟ್ಟಾಭಿಷೇಕ ನಡೆಯಬೇಕಾಗಿದ್ದ ರಾಮನನ್ನು ಕಾಣದ ಭರತ ಅರಮನೆ ಎಲ್ಲ ಮೌನ ಆವರಿಸಿರುತ್ತದೆ ಇದನ್ನು ಕಂಡ ಭರತ ಎಲ್ಲಿ ನನ್ನ ಅಣ್ಣ ರಾಮ ಎಂದು ಕೇಳುವಾಗ ದಶರಥ ಮಹಾರಾಜರ ಆದೇಶದಂತೆ ವನವಾಸಕ್ಕೆ ಹೊರಟಿದ್ದಾರೆ ಎಂದು ತಿಳಿದ ಕೂಡಲೇ ನಾನು ನನ್ನ ಅಣ್ಣನನ್ನ ಮತ್ತೆ ಕರೆದು ಬರುತ್ತೇನೆ ಅವನನ್ನು ರಾಜನಾಗಿ ಮಾಡುತ್ತೇನೆ ಎಂದು ಭರತ ಓಡೋಡಿ ಬರುತ್ತಾನೆ ಅರಣ್ಯದ ಮಧ್ಯೆ ಹೋಗುತ್ತಿದ್ದ ರಾಮನನ್ನು ತಡೆದು ಅಣ್ಣ ನೀನು ಮತ್ತೆ ಅರಮನೆಗೆ ಮರುಳಬೇಕು ನೀನು ಹಿರಿಯವನು ನೀನೇ ರಾಜನಾಗಬೇಕು ಎಂದು ಭರತ ರಾಮನಲ್ಲಿ ಬೇಡಿಕೊಳ್ಳುತ್ತಾನೆ ರಾಮ ಇದಕ್ಕೆ ಹೋಗದೆ ಭರತ ನಾನು ತಂದೆಗೆ ಕೊಟ್ಟ ಮಾತನ್ನು ವಿರೋಧಿಸುವುದಿಲ್ಲ ನೀನು ಹೋಗು ಅಲ್ಲಿ ರಾಜ್ಯವನ್ನ ನೋಡಿಕೋ ಎಂದು ಹೇಳಿದಾಗ ಭರತ ಹೇಳ್ತಾನೆ ಅಣ್ಣ ನಾನು ಚಿಕ್ಕವನು ಇನ್ನು ರಾಜ್ಯವನ್ನು ಹಾಳಲು ನನಗೆ ಅನುಭವವಿಲ್ಲ ಎಂದು ಹೇಳಿದಾಗ ರಾಮ ಭಾರತನಿಗೆ ರಾಜನಾದವನು ಸಿಂಹಾಸನದಲ್ಲಿ ಕೂತು ಇರುವುದಲ್ಲ ಪ್ರಜೆಗಳಾಗಿ ಪ್ರಜೆಗಳ ನಡುವೆ ಪ್ರಜೆಗಳ ಮೂಲಭೂತ ಸೌಕರ್ಯಗಳು ಮತ್ತು ಪ್ರಜೆಗಳಿಂದ ಸಂಗ್ರಹಿಸಿದ ತೆರಿಗೆ ಪ್ರಜೆಗಳಿಗೆ ಸಲ್ಲುವಂತೆ ನೋಡಿಕೊಳ್ಳಬೇಕು ಮಂತ್ರಿಗೆ ಸೈನಾಧಿಪತಿಗಳಿಗೆ ರಾಜ್ಯದ ಪರ ಕೆಲಸ ಮಾಡುವ ಜನರಿಗೆ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ರಾಜನ ವಿರುದ್ಧ ಧ್ವನಿಯುತ್ತದಂತೆ ನೋಡಿಕೊಳ್ಳಬೇಕು ಅವರ ಸಮಸ್ಯೆಗಳನ್ನು ಈ ತರಹದ ಬಳಿ ಹೇಳಿಕೊಳ್ಳದಂತೆ ಮೊದಲೇ ಅರ್ಥ ಮಾಡಿಕೊಂಡು ಅವರ ಕಷ್ಟಗಳನ್ನು ಪೂರೈಸಬೇಕು ಇಲ್ಲವಾದರೆ ಇವರು ಭ್ರಷ್ಟರಾಗಬೇಕಾಗುತ್ತದೆ ತನ್ನ ಆಸೆಯ ಪೂರೈಕೆಗಾಗಿ ನಮ್ಮ ವಿರೋಧಿಗಳ ಜೊತೆ ಸೇರಬೇಕಾಗುತ್ತದೆ ಇದರಿಂದ ನಮ್ಮ ಎದುರಾಳಿಗಳ ವಿರೋಧಿ ರಾಜರ ಜೊತೆ ನಮ್ಮ ವಿರುದ್ಧ ಮಾತನಾಡದಂತೆ ಜೊತೆಯಲ್ಲಿರುವ ಸೈನ್ಯದೀಸರನ್ನ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಭರತನಿಗೆ ರಾಮ ಬುದ್ದಿ ಹೇಳುತ್ತಾನೆ ಇಷ್ಟೊಂದು ಕೇಳಿದ ಭರತ ಅಣ್ಣನ ಪಾದಕ್ಕೆ ತೆಗೆದುಕೊಂಡು ಹೋಗಿ ಸಿಂಹಾಸನದಲ್ಲಿ ಇಟ್ಟು ತನ್ನ ಆಡಳಿತವನ್ನು ಅಣ್ಣ ಮಾತಿನಂತೆ ನಡೆಸಿಕೊಂಡು ಹೋಗುತ್ತಾನೆ ಇದನ್ನು ಈಗಲೇ ಸರ್ಕಾರ ಅರ್ಥ ಮಾಡಿಕೊಂಡು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಯನ್ನು ತತಕ್ಷಣ ಸರ್ಕಾರ ಕೂಡಲೇ ನೌಕರರ ಆಡಳಿತದ ಅನುಕೂಲಕ್ಕೆ ಬೇಕಾದ ಸೌಲಭ್ಯ ಮಾಡಿ ಸಮಸ್ಯೆಗಳನ್ನು ಸರ್ಕಾರ ಶೀಘ್ರ ಬಗೆಹರಿಸಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತರಾದ ಕೆ.ಎಸ್.ಚಂದ್ರು( ಕಾಡು ಮೆಣಸ) ಮಾತನಾಡಿ ಗ್ರಾಮ ಆಡಳಿತಾಧಿಕಾರಿಗಳು ನಮ್ಮ ಗ್ರಾಮೀಣ ಭಾಗದ ರೈತರಿಗೆ ಬೇಕಾದ ಎಲ್ಲಾ ಪ್ರಮಾಣಪತ್ರಗಳು ಸೇರಿದಂತೆ ಭೂಮಿಗೆ ಸಂಬಂಧಪಟ್ಟ ಎಲ್ಲಾ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ಸಲ್ಲಿಸುತ್ತಿದ್ದಾರೆ. ಇವರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಅವರಿಗೆ ಗುಣಮಟ್ಟದ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ವ್ಯವಸ್ಥೆ, ಕಚೇರಿಗೆ ಪೀಠೋಪಕರಣಗಳ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಅಗತ್ಯವಾಗಿದೆ. ಈ ಸೌಲಭ್ಯಗಳನ್ನು ನೀಡಬೇಕು. ಜೊತೆಗೆ ಕೌಟುಂಬಿಕ ಸಮಸ್ಯೆ ಇರುವ ಗ್ರಾಮ ಆಡಳಿತಾಧಿಕಾರಿಗಳಿಗೆ 5ವರ್ಷ ಸೇವೆ ಸಲ್ಲಿಸಿದವರಿಗೆ ಅಂತರ್ ಜಿಲ್ಲಾ ವರ್ಗಾವಣೆ ಅವಕಾಶವನ್ನು ನೀಡಲಾಗಿತ್ತು. ಇದನ್ನು ಮರು ಜಾರಿಗೊಳಿಸುವಂತೆ ಹೋರಾಟ ಮಾಡುತ್ತಿದ್ದೀರಿ, ತಮ್ಮ ಈ ಎಲ್ಲಾ ಬೇಡಿಕೆಗಳು ಆದಷ್ಟು ಬೇಗ ಈಡೇರಲಿ ಎಂಬ ಆಶಯವನ್ನು ಕೆ.ಎಸ್.ಚಂದ್ರು ರವರು ವ್ಯಕ್ತಪಡಿಸಿದರು.
*ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಮಹಿಳೆ:*
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳು ನೆಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತುಂಬು ಗರ್ಭಿಣಿ ಅಸ್ವಸ್ಥಗೊಂಡ ಘಟನೆ ನೆಡೆದಿದ್ದು ತಕ್ಷಣದಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಲಾಯಿತು,
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಲೋಕೇಶ್.ವಿ, ಹಿರಿಯ ಪತ್ರಕರ್ತರಾದ ಕೆ.ಎಸ್.ಚಂದ್ರು(ಕಾಡುಮೆಣಸ),ಮಂಡ್ಯ ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಡಿ.ಪಿ.ಹರೀಶ್.ತಾಲ್ಲೂಕು ಘಟಕದ ಅಧ್ಯಕ್ಷ ದಶರಥ ಪೂಜಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಜಿ.ಪಿ.ರಾಜು, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್, ಖಂಜಾಚಿ ಎಸ್.ರವಿ, ಪ್ರದೀಪ್, ಗೋವಿಂದರಾಜು, ಮಾಕವಳ್ಳಿ ರಂಗನಾಥ್, ಗ್ರಾಮ ಆಡಳಿತಾಧಿಕಾರಿ ಉಪಾಧ್ಯಕ್ಷ ರಾಘವೇಂದ್ರ,ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಸೋಮಾಚಾರಿ, ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಕೆ.ಸಾವಿತ್ರಿ, ಕಾರ್ಯದರ್ಶಿ ಬಿ.ಹೊನ್ನೇಶ್,ನಿರ್ದೇಶಕರಾದ ಶ್ವೇತ, ಪೂಜಾ, ಸೇರಿದಂತೆ ಉಪಸ್ಥಿತರಿದ್ದರು.
*ವರದಿ. ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






