ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳವು ನವದೆಹಲಿಯಲ್ಲಿ

ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳವು ನವದೆಹಲಿಯಲ್ಲಿ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳವು ನವದೆಹಲಿಯಲ್ಲಿ ನಾಳೆ ಜರುಗಲಿದೆ ಎಂದು ಅಧ್ಯಕ್ಷರಾದ ಸಿಎಂ ಅಶೋಕ್ ತಿಳಿಸಿದ್ದಾರೆ.

ಅವರು ದೆಹಲಿಯ ಕರ್ನಾಟಕ ಭವನದ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಇದೇ ಮೊದಲ ಬಾರಿಗೆ ಮಕ್ಕಳಿಂದ, ಮಕ್ಕಳಿಗಾಗಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕಾರ್ಯಕ್ರಮದಲ್ಲಿ ಧ್ವಜಾರೋಹಣ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಉದ್ಘಾಟಕರ ಸಮಾರಂಭದಲ್ಲಿ ಯುವ ಕವಿಗಳು ವಿಚಾರಗೋಷ್ಠಿ ಸಂವಾದ ಸಮಾರಂಭ ಸಾಧನೆಗೈದ ಹಲವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಂದ ಮಕ್ಕಳು ಸಾಹಿತಿಗಳು ಗಣ್ಯರು ಆಗಮಿಸಿದ್ದು ಎಲ್ಲರಿಗೂ ತುಂಬು ಹೃದಯದ ಸ್ವಾಗತವನ್ನು ಕೋರಿದರು. ಇದೇ ಸಂದರ್ಭದಲ್ಲಿ

ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೆನಹಳ್ಳಿ ಮಾತನಾಡಿ ಒಂದು ತಾಲೂಕಿನಲ್ಲಿ ಹುಟ್ಟಿದಂತಹ ಸಂಘಟನೆ ಈಗ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಬೆಳೆದಿರುವುದು ಸಂತೋಷದ ವಿಚಾರಮಕ್ಕಳ ಬೆಳವಣಿಗೆಗೆ ಯುವ ಪ್ರತಿಭೆಗಳನ್ನು ಗುರುತಿಸುವ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುವುದು ಹೆಮ್ಮೆಯ ವಿಚಾರವಾಗಿದೆ ಆದ್ದರಿಂದ ಈಗಾಗಲೇ ಮೂರು ದಿನಗಳಿಂದ ಕಾರ್ಯಕ್ರಮಗಳ ರೂಪರೇಷೆ ಬಗ್ಗೆ ದೆಹಲಿಗೆ ಆಗಮಿಸಿ ಸಂಘಟಕರ ಜೊತೆಗುಡಿ ಕೆಲಸವನ್ನ ಮಾಡಲಾಗಿದ್ದು ನಾಳೆ ನಡೆಯುವ ಅದ್ದೂರಿ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನ ನಡೆಸಿಕೊಂಡಿದ್ದೇವೆ ಎಂದರು

ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಸಿ ಎಸ್, ಮನೋಹರ್ ಗಜಾನನ, ಸಿದ್ದೇಶ್, ಮಹದೇವ್, ಲತಾ ಪುಟ್ಟೇಗೌಡ, ದೀಪ್ತಿ, ಸಚಿನ್, ಸಿಎನ್ ಅರುಣ್ ಕುಮಾರ್ ಸೇರಿದಂತೆ ಇತರ ಹಾಜರಿದ್ದರು

What's Your Reaction?

like

dislike

love

funny

angry

sad

wow