ಕೆ.ಆರ್.ಪೇಟೆ: ನಮ್ಮ ದೇಶವು ಸ್ವಾತಂತ್ರ್ಯದ ಶತಮಾನದತ್ತ ಸಾಗುತ್ತಿದೆ. ಇದರೊಂದಿಗೆ ಅಮೃತ ಕಾಲದ ಆರಂಭಿಕ ಹಂತವನ್ನು ಹಾದುಹೋಗುತ್ತಿದೆ. ಇದು ಯುಗ ಬದಲಾವಣೆಯ ಅವಧಿ. ಗಣರಾಜ್ಯೋತ್ಸವವು ನಮ್ಮ ಮೂಲ ಮೌಲ್ಯಗಳು ಮತ್ತು ತತ್ವಗಳನ್ನು ನೆನಪಿಡುವ ಪ್ರಮುಖ ಸಂದರ್ಭವಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಶಾಸಕ ಹೆಚ್. ಟಿ ಮಂಜು ತಿಳಿಸಿದರು

ಕೆ.ಆರ್.ಪೇಟೆ: ನಮ್ಮ ದೇಶವು ಸ್ವಾತಂತ್ರ್ಯದ ಶತಮಾನದತ್ತ ಸಾಗುತ್ತಿದೆ. ಇದರೊಂದಿಗೆ ಅಮೃತ ಕಾಲದ ಆರಂಭಿಕ ಹಂತವನ್ನು ಹಾದುಹೋಗುತ್ತಿದೆ. ಇದು ಯುಗ ಬದಲಾವಣೆಯ ಅವಧಿ. ಗಣರಾಜ್ಯೋತ್ಸವವು ನಮ್ಮ ಮೂಲ ಮೌಲ್ಯಗಳು ಮತ್ತು ತತ್ವಗಳನ್ನು ನೆನಪಿಡುವ ಪ್ರಮುಖ ಸಂದರ್ಭವಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಶಾಸಕ ಹೆಚ್. ಟಿ ಮಂಜು ತಿಳಿಸಿದರು

ಪಟ್ಟಣದಲ್ಲಿರುವ ಶ್ರೀ ನಾಲ್ವಡಿಕೃಷ್ಣರಾಜ ಒಡಯರ್ ಬೃಹತ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ 75ನೇ ಭಾರತ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತ್ತು ಮಹತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದವರು ಸ್ವಾತಂತ್ರ್ಯ ದಿನವನ್ನು ಹೇಗೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ಖಂಡಿತ ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ.ದೇಶ-ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯರಿಗೆ ಇಂದಿನ ದಿನ ಬಹಳ ಮಹತ್ವದ ದಿನ. ಭಾರತೀಯರಾದ ನಾವು 75 ವರ್ಷಗಳ ಹಿಂದೆ ಇದೇ ದಿನ ವೈಶಿಷ್ಟ್ಯ ಪೂರ್ಣವಾದ ಸಂವಿಧಾನವನ್ನು ಅಂಗೀಕರಿಸಿದೆವು, ಅಧಿನಿಯಮಗೊಳಿಸಿದೆವು ಮತ್ತು ಆತ್ಮ ಸ್ವೀಕಾರ ಮಾಡಿಕೊಂಡೆವು. ಅಂತೆಯೇ ಈ ದಿನ ಸಂವಿಧಾನ ಪ್ರತಿಪಾದಿಸುವ ಮಹತ್ತರ ಮೌಲ್ಯಗಳ ಬಗ್ಗೆ, ಆಳವಾದ ವಿಚಾರ ಮಂಥನ ನಡೆಸುವ ಸಂದರ್ಭವಾಗಿದೆ ಸಂವಿಧಾನದ ಮುನ್ನುಡಿಯಲ್ಲಿ ನಿರೂಪಿಸಿರುವ-ನ್ಯಾಯ, ಸ್ವಾತಂತ್ರ್ಯ, ಸಮತೆ ಮತ್ತು ಭ್ರಾತೃತ್ವದ ಜೀವನ ಮೌಲ್ಯಗಳು ನಮ್ಮೆಲ್ಲರಿಗೂ ಪವಿತ್ರವಾದವು. ಕೇವಲ ಆಡಳಿತ ನಡೆಸಲು ಆಯ್ಕೆಯಾದವರಷ್ಟೇ ಇದನ್ನು ಪರಿಪಾಲಿಸಬೇಕು ಎಂಬುದಲ್ಲ, ಎಲ್ಲ ಜನತೆಯೂ ಇದಕ್ಕೆ ಕಟಿಬದ್ಧರಾಗಿರಬೇಕು. ನಮ್ಮ ಪ್ರಜಾಸತ್ತೆಯ ಮಂದಿರ, ಭದ್ರ ಬುನಾದಿಯ ಮೇಲೆ ವಿರಾಜಿಸುವಂತೆ ಮಾಡಲು, ನಮ್ಮ ದೇಶದ ಮಹನೀಯರು, ಮಹಿಳೆಯರು, ಮುನ್ನುಡಿಯಲ್ಲೇ ಈ ನಾಲ್ಕು ಮೌಲ್ಯಗಳನ್ನು ಅಳವಡಿಸಿರುವುದು ಅರ್ಥಪೂರ್ಣ. ವಾಸ್ತವವಾಗಿ ಇವು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮಾರ್ಗ ಸೂಚಿಗಳು. ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್,ಮಹಾತ್ಮ ಗಾಂಧಿ ಅವರಂತಹ ಹಲವಾರು ಮೇರು ನಾಯಕರು ಮತ್ತು ಚಿಂತಕರ ತೇಜೋಗಣ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಪ್ರೇರಣಾ ಪ್ರಣೀತರು. ಮಾತೃಭೂಮಿಯ ಭವ್ಯ ಭವಿಷ್ಯದ ಅಪಾರ ಕನಸುಗಳನ್ನು ಕಂಡವರು ಆದರೆ ಇವರೆಲ್ಲರ ಆಶೋತ್ತರಗಳ ಏಕ ಮಾತ್ರ ಸೂತ್ರ ನ್ಯಾಯ, ಸ್ವಾತಂತ್ರ್ಯ, ಸಮತೆ ಮತ್ತು ಭ್ರಾತೃತ್ವದ ಮೌಲ್ಯಗಳು. ನಮ್ಮ ರಾಷ್ಟ್ರ ನಿರ್ಮಾತೃಗಳಿಗೆ ಈ ಮೌಲ್ಯಗಳು ಏಕೆ ಸದೃಶ ದಾರಿ ದೀಪವಾದವು ಎಂಬುದನ್ನು ಅರಿಯಲು ನಾವು ನಮ್ಮ ಚರಿತ್ರೆಯತ್ತ ಮತ್ತಷ್ಟು ಹಿಂದಿರುಗಿ ನೋಡಬೇಕು ಮತ್ತು ಈ ಸುದಿನದಂದು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಸ್ಮರಿಸಲು ನಾವೆಲ್ಲರೂ ಒಟ್ಟಾಗಿಸಿರಬೇಕು ಎಂದು ಶಾಸಕ ಹೆಚ್. ಟಿ ಮಂಜು ಹೇಳಿದರು.

ರಾಷ್ಟದ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆಬಂತು ನಾನು ಬಯಸುತ್ತೇನೆ ಹಾಗೂ ಇದಕ್ಕೆ ಉತ್ತರ ಸುಸ್ಪಷ್ಟ. ಈ ಭೂಮಿ ಹಾಗೂ ಇಲ್ಲಿನ ನಿವಾಸಿಗಳು ಈ ತತ್ವಗಳನ್ನು ಅನಾದಿಕಾಲದಿಂದ ಪರಿಪಾಲಿಸಿದವರು. ನ್ಯಾಯ, ಸ್ವಾತಂತ್ರ್ಯ ನಾಗರಿಕತೆಯ ಉದಯ ಕಾಲದಿಂದಲೂ ಇವು ನಮಗೆ ಅವ್ಯಾಹತವಾಗಿ ಹರಿದು ಬಂದಿವೆ. ಆದಾಗ್ಯೂ ಪ್ರತಿಯೊಂದು ಪೀಳಿಗೆಗೂ ತನ್ನ ಕಾಲಮಾನಕ್ಕೆ ಅನುಗುಣವಾಗಿ ಇವುಗಳನ್ನು ಅರ್ಥೈಸಿಕೊಳ್ಳಬೇಕಾದ ಹೊಣೆ ಇದೆ. ಸ್ವಾತಂತ್ರ್ಯ ಹೋರಾಟಗಾರರು ಅವರ ದಿನಗಳಲ್ಲಿ ಮಾಡಿದ ರೀತಿಯೇ, ನಾವು ನಮ್ಮ ಕಾಲದಲ್ಲಿ ನಡೆದುಕೊಳ್ಳಬೇಕು ಈ ಮಹತ್ವಪೂರ್ಣ ತತ್ವಗಳು ನಮ್ಮ ಪ್ರಗತಿಯ ಪಥವನ್ನು ಬೆಳಗಬೇಕು ಎಂದರು.

ಪಟ್ಟಣದ ಕೆಪಿಎಸ್ ಶಾಲೆಯಿಂದ ಕ್ರೀಡಾಂಗಣದವರೆಗೂ ಮಂಗಳವಾದ್ಯ ಡೊಳ್ಳು ಕುಣಿತ ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಮಹನೀಯರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾ. ಪಂ ಕಾರ್ಯನಿರ್ವಾಹಕ ಸತೀಶ್, ಜಿ. ಪಂ ಮಾಜಿ ಸದಸ್ಯ ಹಿರಿಕಳಲೆ ರಾಮದಾಸ್,ತಾ. ಪಂ ಮಾಜಿ ಸದಸ್ಯರಾದ ಜಾನಕಿರಾಮ್,ಮಲ್ಲೇನಹಳ್ಳಿ ಮೋಹನ್,ಪುರಸಭಾ ಸದಸ್ಯ ಗಿರೀಶ್,ಇಂದ್ರಣಿ ವಿಶ್ವಾನಾಥ್,ಮಾಜಿ ಸದಸ್ಯ ಹೇಮಂತ್ ಕುಮಾರ್, ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸಿ ಕೆ ಶಿವರಾಮೇಗೌಡ,ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್,ಹಿರಿಯ ಮುಖಂಡ ಬಸ್ತಿ ರಂಗಪ್ಪ, ಕೆ.ಆರ್. ಪೇಟೆ ಶಿವಪ್ಪ,ಸಂತೆಬಾಚಹಳ್ಳಿ ರವಿಕುಮಾರ್,ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್,ಕೆ ಪಿ ಎಸ್ ಶಾಲಾ ಉಪಾಧ್ಯಕ್ಷ ವಾಸು,ಕ್ಷೆತ್ರ ಶಿಕ್ಷಣ ಅಧಿಕಾರಿ ಸೀತಾರಾಮ್,ಪುರಸಭಾ ಮುಖ್ಯ ಅಧಿಕಾರಿ ಸತೀಶ್, ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಮಾರಾಣಿ,ಜಗದೇಶ್, ಡಾ:ಶ್ರೀಕಾಂತ್,ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ದಿವಾಕರ್,ಎ ಡಿ ಎಲ್ ಆರ್ ಸಿದ್ದಯ್ಯ, ರಾಜಸ್ವ ನಿರೀಕ್ಷಕ ಜ್ಞಾನೇಶ್,ಮಹಿಳಾ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಬ್ಯಾಲದಕೆರೆ ಮರೀಗೌಡ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ತಾಲೋಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಗಣ್ಯರು ಭಾಗವಹಿಸಿದರು.

 *ವರದಿ,ರಾಜು ಜಿ ಪಿ ಕೆ ಆರ್ ಪೇಟೆ ಕೆ ಆರ್ ಪೇಟೆ

*

What's Your Reaction?

like

dislike

love

funny

angry

sad

wow