*ಚನ್ನರಾಯಪಟ್ಟಣ: ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ ಮಾಡಿದ ಚುಂಚಶ್ರೀ*.

*ಚನ್ನರಾಯಪಟ್ಟಣ: ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ ಮಾಡಿದ ಚುಂಚಶ್ರೀ*.

*ಚನ್ನರಾಯಪಟ್ಟಣ: ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ ಮಾಡಿದ ಚುಂಚಶ್ರೀ*. ಚನ್ನರಾಯಪಟ್ಟಣ: ದೆಹಲಿಯಲ್ಲಿ ನವಂಬರ್ 15ರಂದು ನಡೆಯಲಿರುವ ಪ್ರಥಮ ರಾಷ್ಟ್ರೀಯ ವರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚಗರಿ ಮಹಾಸಂಸ್ಥಾನ ಮಠದಲ್ಲಿ ಬಿಡುಗಡೆಗೊಳಿಸಿದ ಶ್ರೀ ಆದಿಚುಂಚುಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಮಾತನಾಡಿ ದೇಶದ ರಾಜಧಾನಿಯಾದ ದೆಹಲಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜನೆ ಮಾಡಿರುವ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನ ನಾವು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖಾಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಿ.ಎನ್ ಅಶೋಕ್, ದೆಹಲಿಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾದ ಅರುಣ್,ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಜಗದೀಶ್, ಜಯರಾಮ್, ಮಹದೇವ್, ಶ್ರೀಮತಿ ಲತಾ, ಶಾಮ್ ಸುಂದರ್, ಗಂಗಾಧರ್, ಲ.ನಾ.ಗುಪ್ತ, ಸಮ್ಮೇಳನದ ಲಾಂಛನವನ್ನು ತಯಾರು ಮಾಡಿರುವ ಕಲಾವಿದ ರವೀಂದ್ರ, ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow