ಕೆ.ಆರ್.ಪೇಟೆ: ಗ್ರಾಮೀಣ ಪ್ರದೇಶದ ರೈತರ ಮೂಲ ಆದಾಯವೇ ಹೈನುಗಾರಿಕೆ, ಹಾಗಾಗಿ ರೈತರು ರಾಸುಗಳ ಆರೋಗ್ಯದಲ್ಲಿ ಏರಿಳಿತ ಆಗಂದತೆ ನೋಡಿಕೊಂಡು ಹಸಿ ಮೇವನ್ನು ನೀಡಿದಾಗ ಮಾತ್ರ ಹೆಚ್ಚು ಹಾಲು ಉತ್ಪತ್ತಿಯಾಗಲು ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ಕೆ.ಆರ್.ಪೇಟೆ: ಗ್ರಾಮೀಣ ಪ್ರದೇಶದ ರೈತರ ಮೂಲ  ಆದಾಯವೇ ಹೈನುಗಾರಿಕೆ, ಹಾಗಾಗಿ ರೈತರು ರಾಸುಗಳ ಆರೋಗ್ಯದಲ್ಲಿ ಏರಿಳಿತ ಆಗಂದತೆ ನೋಡಿಕೊಂಡು ಹಸಿ ಮೇವನ್ನು ನೀಡಿದಾಗ ಮಾತ್ರ ಹೆಚ್ಚು ಹಾಲು ಉತ್ಪತ್ತಿಯಾಗಲು ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ತಾಲ್ಲೂಕಿನ ಬೂಕನಕೆರೆ ಮಾಚಗೋನಹಳ್ಳಿ,ಬಲ್ಲೇನಹಳ್ಳಿ,ನಾಡಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನೆಡೆದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಬಹುತೇಕ ರೈತರ ಜೀವನಾಡಿ ಹೈನುಗಾರಿಕೆ ಆಗಿದೆ ಹಾಗಾಗಿ ರೈತರು ಆದಾಯ ನೀಡುವ ರಾಸುಗಳಿಗೆ ಗುಣಮಟ್ಟದ ಪೌಷ್ಟಿಕ ಮೇವು ನೀಡುವುದರ ಜೊತೆಗೆ ಮತ್ತಷ್ಟು ಹೈನುಗಾರಿಕೆ ಹೆಚ್ಚು ಒತ್ತು ನೀಡಬೇಕು. ಸಂಘವು ಉತ್ತಮ

ಗುಣಮಟ್ಟದ ಹಾಲನ್ನು ಪೂರೈಕೆ ಮಾಡುತ್ತಿರುವುದರಿಂದ ಸಂಘವು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗಿದೆ.ಉತ್ಪಾದಕರಿಗೆ ಗುಣಮಟ್ಟಕ್ಕೆ ತಕ್ಕಂತೆ ದರ ನೀಡುತ್ತಿರುವುದರಿಂದ ಹೈನುಗಾರಿಕೆಯು ರೈತರ ಜೀವನಕ್ಕೆ ಸಹಕಾರಿಯಾಗಿದೆ.ಹಾಲಿನಿಂದ 40ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚು

ಬಳಸಬೇಕು. ನಂದಿನಿ ಹಾಲಿನಲ್ಲಿ ಯಾವುದೇ ಕಲಬೆರಕೆ ಇರುವುದಿಲ್ಲ. ಉತ್ಪಾದಕರು ನೀಡುವ ಹಾಲನ್ನು ಗುಣಮಟ್ಟ ಕಾಪಾಡಿಕೊಂಡು ಸಂಸ್ಕರಿಸಲಾಗುತ್ತದೆ. ಜನರು ನಂದಿನಿ ಹಾಲು ಹೆಚ್ಚು ಬಳಸಬೇಕು.ಹಾಲು ಉತ್ಪಾದಕರು ಸ್ವಚ್ಛತೆಯತ್ತ ಗಮನಹರಿಸಬೇಕು ಡೈರಿಯಲ್ಲೂ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದ ಅವರು, ಗುಜರಾತ್‌ ರಾಜ್ಯದ ಡೈರಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿದೆ ನಮ್ಮಲ್ಲೂ ಜಾಗೃತಿ ಮೂಡಬೇಕು ಎಂದು ಹೇಳಿದರು.

2024-25 ನೇ ಸಾಲಿನ ಅಯ-ವ್ಯಯದ ಅನುಮೋದನೆ ಮತ್ತು ಹಿಂದಿನ ಸಾಲಿನಲ್ಲಿ ಅಯ ವ್ಯಯಕ್ಕಿಂತ ಹೆಚ್ಚಾದ ಬಾಬ್ತುಗಳಿಗೆ ಅನುಮೋದನೆ ನೀಡುವುದು,ಗರಿಷ್ಠ ಷೇರು ಮಿತಿ ನಿಗದಿ ಪಡಿಸುವುದು. ಹೀಗೆ ನಾನಾ ವಿಷಯಗಳನ್ನು ಚರ್ಚಿಸಸಿದರು.ಮಾಚಗೊನಳ್ಳಿ ಹಾಗೂ ಬಲ್ಲೇನಹಳ್ಳಿ ಸಂಘಗಳಿಗೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಿಗೆ ಹಾಗೂ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಾರ್ಗವಿಸ್ತಾರಣಾ ಅಧಿಕಾರಿ ನಾಗಪ್ಪ ಅಲ್ಲಿಬಾದಿ, ರಘುವೇಂದ್ರ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸುಜೇಂದ್ರಕುಮಾರ್, ನಾಡಭೋಗನಹಳ್ಳಿ ಸಂಘದ ಅಧ್ಯಕ್ಷೆ ಸರೋಜಮ್ಮ ರಾಜೇಂದ್ರ, ಉಪಾಧ್ಯಕ್ಷೆ ಶಾರದಮ್ಮ ಬಸವರಾಜು, ನಿರ್ದೇಶಕರಾದ ಗೀತಾ , ಮಹದೇವಮ್ಮ , ಶಿವಮ್ಮ , ಕೋಮಲ , ದಿವ್ಯ, ಲಲಿತಮ್ಮ , ವಗೆಶಮ್ಮ,ಲತಾಮಣಿ, ಸಣ್ಣದೇವಮ್ಮ, ಕಾರ್ಯದರ್ಶಿ ನಂದಿನಿ ಕುಮಾರ್, ಹಾಲು ಪರೀಕ್ಷಕಿ ಕಲ್ಪನಾ,

ಸವಿತಾ,ಮಾಚಗೋನಹಳ್ಳಿ ಸಂಘದ ಅಧ್ಯಕ್ಷೆ ಕೋಮಲ ಉಪಾಧ್ಯಕ್ಷೆ ಮೀನಾಕ್ಷಿ, ನಿರ್ದೇಶಕರಾದ ವಿಸೈತ, ಪಂಕಜ, ಕೆ. ಚಂದ್ರಿಕ, ಪದ್ಮಮ್ಮ, ಶಿವಮ್ಮ, ಹೆಚ್.ಎಂ ಪ್ರಭಾವತಿ, ನಂದಿನಿ, ಕೆ. ಕೆ ವಿನುತ, ನೇತ್ರಾವತಿ, ಪ್ರಭಾವತಿ, ಸಂಘದ ಕಾರ್ಯದರ್ಶಿ ಚಂದ್ರಪ್ರಭ, ಹಾಲು ಪರೀಕ್ಷಕಿ ರುಕ್ಮಿಣಿ,ಬಲ್ಲೇನಹಳ್ಳಿ ಸಂಘದ ಅಧ್ಯಕ್ಷ ಬಿ.ಎಸ್ ಪುಟ್ಟರಾಜು,

ಉಪಾಧ್ಯಕ್ಷ ದೇವರಾಜು, ನಿರ್ದೇಶಕರಾದ ಸ್ವಾಮಿಗೌಡ, ಧನಲಕ್ಷ್ಮೀ, ಕೃಷ್ಣಗೌಡ, ಪುಟ್ಟೇಗೌಡ, ಬಿ.ಎಸ್ ಯೋಗೇಶ್, ಸೋಮಶೇಖರ್, ಜ್ಯೋತಿ, ಮಂಗಳಮ್ಮ, ಸಂಘದ ಕಾರ್ಯದರ್ಶಿ ಧನುಷ್ ಗೌಡ, ಬಿ. ಎಂ, ಹಾಲು ಪರೀಕ್ಷ ನಂಜೇಗೌಡ, ಗುಮಸ್ತ ಹೇಮಂತ್, ಪರಮೇಶ್, ಲೋಕೇಶ್, ನಾಡಭೋಗನಹಳ್ಳಿ,ಬಲ್ಲೇನಹಳ್ಳಿ, ಮಾಚಗೋನಹಳ್ಳಿ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow