ಕೆ ಆರ್ ಪೇಟೆ ತಾಲೂಕು ಕಿಕ್ಕೇರಿ ಕೆಪಿಎಸ್ ಬಾಲಕಿಯರ ಶಾಲೆಯಲ್ಲಿ ಕೆಬಿಸಿ ಮಂಜುನಾಥ್ ರವರು ಹುಟ್ಟು ಹಬ್ಬದ ದಿನದಂದು ಮಕ್ಕಳಿಗೆ ಶಿಕ್ಷಕ ಶಿಕ್ಷಕಿಯರಿಗೆ ಸಿಹಿ ಅಂಚಿ ಐದು ಬೆಂಚ್ ಟೇಬಲ್ ಗಳನ್ನು ನೀಡಿದರು

ಕೆ ಆರ್ ಪೇಟೆ ತಾಲೂಕು ಕಿಕ್ಕೇರಿ ಕೆಪಿಎಸ್ ಬಾಲಕಿಯರ  ಶಾಲೆಯಲ್ಲಿ ಕೆಬಿಸಿ ಮಂಜುನಾಥ್ ರವರು ಹುಟ್ಟು ಹಬ್ಬದ ದಿನದಂದು ಮಕ್ಕಳಿಗೆ ಶಿಕ್ಷಕ ಶಿಕ್ಷಕಿಯರಿಗೆ  ಸಿಹಿ ಅಂಚಿ ಐದು ಬೆಂಚ್ ಟೇಬಲ್  ಗಳನ್ನು ನೀಡಿದರು

ಎಸ್ ಟಿ ಎಂ ಸಿ ಅಧ್ಯಕ್ಷರಾದ ಕೃಷ್ಣೆಗೌಡರವರು. ಮುಖ್ಯ ಶಿಕ್ಷಕಿ ಪಾರ್ವತಿ ಮೇಡಂ ಶಿಕ್ಷಕ ಶಿಕ್ಷಕಿಯರು ಪೋಷಕರು ಮಕ್ಕಳುಗಳು ಕೆಬಿಸಿ ಮಂಜುನಾಥ ರವರ ಕೈಯಲ್ಲಿ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯಗಳು ಕೋರಿದರು.

 ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ ರವರು ವಹಿಸಿಕೊಂಡು ಮಾತನಾಡಿ ನಮ್ಮ ಶಾಲೆಗೆ 5 ಬೆಂಚ್ ಟೇಬಲ್ ಗಳನ್ನು ನೀಡಿ ಮಕ್ಕಳಿಗೆ ಕೂತುಕೊಳ್ಳಲು ತುಂಬಾ ಅನುಕೂಲವಾಗಿದೆ ನಿಮ್ಮ ಸೇವೆ ಸದಾ ಹೀಗೆ ನಡೆಯಲು ಮಂಜುನಾಥ ಅವರ ಪರಿಚಯ ನಮಗೆ ಕಮ್ಮಿ ಇರಬಹುದು. ರಾಜು ರವರು ನಮ್ಮ ಶಾಲೆಗೆ ಕೊಡುವ ದಾನಿಗಳನ್ನು ಪರಿಚಯಿಸಿ ಸಹಾಯ ಮಾಡಿಸಿದ್ದು ತುಂಬಾ ಸಂತೋಷವಾಗಿದೆ ಇದೇ ರೀತಿ ಕೆ ಬಿ ಸಿ ಮಂಜುನಾಥ್ ರವರು ಹಲವು ಶಾಲೆಗಳಿಗೆ ಸಹಾಯ ಮಾಡುವ ಮೂಲಕ ಎಲೆಮರೆಕಾಯಿನಂತೆ ಸೇವೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷವನ್ನು ತಂದಿದೆ

ಇದೇ ರೀತಿ ಇವರ ಸೇವೆ ಮುಂದುವರಿಯಲಿ ಇವರಿಗೆ ಭಗವಂತ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕರುಣಿಸಲಿ ಇವರ ಕುಟುಂಬಕ್ಕೂ ಒಳ್ಳೆಯದಾಗಲಿ ಇಂಥವರನ್ನು ನೋಡಿಕೊಂಡು ಕೊಡುವ ದಾನಿಗಳು ಹೆಚ್ಚಾಗಿ ಇದ್ದವರು ಇಲ್ಲದವರಿಗೆ ದಾನ ಮಾಡುವಂತಹ ಜ್ಞಾನ ಬರಲಿ ಈ ದಿನ ಇವರ ಜನ್ಮದಿನ ನಮ್ಮ ಶಾಲೆಗೆ ಬಂದಿರುವುದು ನನಗೆ ಬಹಳ ಸಂತೋಷ. ಇದೇ ರೀತಿ ನಮ್ಮ ಶಾಲೆ ಕಡೆ ಬನ್ನಿ ಸರ್ಕಾರಿ ಶಾಲೆಗಳು ಉಳಿಯಲು ನಿಮ್ಮಂತವರ ಸೇವೆ ಸಹಕಾರ ನಮಗೆ ಅವಶ್ಯಕತೆ ಇದೆ ಎಂದು ತಿಳಿಸಿದರು.

 ಪತ್ರಕರ್ತರಾದ ರಾಜು ಜಿ ಪಿ ರವರು ಮಾತನಾಡಿ ಪೋಷಕರ ಸಭೆಗೆ ನಾನು ಭಾಗವಹಿಸಿದ್ದು ಆ ಸಭೆಯಲ್ಲಿ ಟೇಬಲ್ ಸ್ಟೂಲ್ ಅವಶ್ಯಕತೆ ಇದೆ ಎಂದು ಶಿಕ್ಷಕರು ಪೋಷಕರ ಗಮನಕ್ಕೆ ತಂದಿದ್ದು ಆ ಸಭೆಯಲ್ಲಿ ಪೋಷಕರ ಸಹಕಾರ ನೀಡುವಂತೆ ಮನವಿ ಮಾಡಿದ್ದೆ ಆ ಸಮಯದಲ್ಲಿ ನನಗೆ ನೆನಪು ಬಂದಿದ್ದು ಕೆಬಿಸಿ ಮಂಜುನಾಥ್ ರವರು ಅಣ್ಣ ನಿಮ್ಮ ಕೈಯಲ್ಲಿ ನಮ್ಮ ಕಿಕ್ಕೇರಿ ಕೆಪಿಎಸ್ ಶಾಲೆಯ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದೆ. ಇದಕ್ಕೆ ಮಂಜಣ್ಣ ನಾನು ಏನು ಸಹಾಯ ಮಾಡಬೇಕು ಎಂದು ನನಗೆ ಹೇಳಿ ಅಣ್ಣ ಎಂದು ನೇರವಾಗಿ ಕೇಳಿದರು. ಆ ಸಮಯದಲ್ಲಿ ನಾನು ಮಕ್ಕಳು

ಕೂತಿಕೊಳ್ಳುವ ಟೇಬಲ್ ಸ್ಟೂಲ್ ಅವಶ್ಯಕತೆ ಇದೆ ಇದನ್ನು ಕೊಡಿಸಿ ಕೊಡಿ ಎಂದು ಕೇಳಿದೆ. ಇದಕ್ಕೆ ನೇರವಾಗಿ ಸ್ಪಂದಿಸಿ 5 ಟೇಬಲ್ ಸ್ಟೂಲ್ ಗಳನ್ನು ಕೊಡಿಸಿ ಸಹಾಯ ಮಾಡಿದ್ದಾರೆ ಇವರ ಸೇವೆ ಸದಾ ಹೀಗೆ ಮುಂದುವರೆಯಲಿ ಈ ದಿನ ಇವರ ಜನ್ಮದಿನ ಕಿಕ್ಕೇರಿ ಬಾಲಕಿಯರ ಕೆಪಿಎಸ್ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚಿ ಮಕ್ಕಳ ಜೊತೆ ನಿಮ್ಮ ಸಂತೋಷ ಹಂಚಿಕೊಳ್ಳುತ್ತಿರುವುದು ಇತರರಿಗೆ ಮಾದರಿಯಾಗಲಿ ನಿಮ್ಮ ಪ್ರೀತಿ ವಿಶ್ವಾಸ ಸಹಕಾರ ಸದಾ ನಮ್ಮೊಂದಿಗೆ ಹೀಗೆ ಇರಲಿ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪಾರ್ವತಿ ರವರು. ಶಿಕ್ಷಕರು ಮಂಜೇಗೌಡ. ಸುರೇಶ್. ಪುನೀತ್. ಸತೀಶ್. ಶಿಕ್ಷಕಿಯರು ಭಾರತೀ. ಶಾಂಭವಿ. ಚೈತ್ರ. ಪ್ರಜ್ವಲ. ಸೌಮ್ಯ.ಕರುನಾಡ ಯುವ ಜನ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಹಾಗೂ ಪತ್ರಕರ್ತರು ವಿ ಲೋಕೇಶ್ ಜಿಲ್ಲಾಧ್ಯಕ್ಷರಾದ ರವಿ ರವರು. ಜಿಲ್ಲಾ ಉಪಾಧ್ಯಕ್ಷರು ಹಾಗೂ ಪತ್ರಕರ್ತರು ರಾಜು ಜಿ ಪಿ ರವರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಪತ್ರಕರ್ತರು ಸಾಯಿ ಕುಮಾರ್, ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಶ್ರೀನಾಥ್. ಆಸಿಫ್. ಬಾವಾಜಿ ಚಂದ್ರು. ಶಾಲೆಯ ಮಕ್ಕಳು ಕೆಬಿಸಿ ಮಂಜುನಾಥ್ ರವರಿಗೆ ಜನ್ಮದಿನದ ಶುಭಾಶಯಗಳು ತಿಳಿಸಿ ಶುಭ ಹಾರೈಸಿದರು.

 *ವರದಿ ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow