ಕೆ.ಆರ್.ಪೇಟೆ: ಸಾಮೂಹಿಕ ಸತ್ಯನಾರಾಯಣ ಹಾಗೂ ಶ್ರೀ ಲಕ್ಷ್ಮಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಧರ್ಮಸ್ಥಳ ಸಂಸ್ಥೆಯು ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ದೂರಮಾಡಿ ಸಮಾನತೆ ತರಲು ಶ್ರಮಿಸುತ್ತಿದೆ ಎಂದು ತೆಂಡೇಕೆರೆ ಶ್ರೀ ಬಾಳೆಹೊನ್ನೂರು ಶಾಖಾ ಮಠ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಕೆ.ಆರ್.ಪೇಟೆ: ಸಾಮೂಹಿಕ ಸತ್ಯನಾರಾಯಣ ಹಾಗೂ ಶ್ರೀ ಲಕ್ಷ್ಮಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಧರ್ಮಸ್ಥಳ ಸಂಸ್ಥೆಯು ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ದೂರಮಾಡಿ ಸಮಾನತೆ ತರಲು ಶ್ರಮಿಸುತ್ತಿದೆ ಎಂದು ತೆಂಡೇಕೆರೆ ಶ್ರೀ ಬಾಳೆಹೊನ್ನೂರು ಶಾಖಾ ಮಠ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ತಾಲೂಕಿನ ಮುರುಕನಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತೆಂಡೇಕೆರೆ ವಲಯ ಇವರ ಸಂಯುಕ್ತಾಶ್ರಯದಲ್ಲಿ ನೆಡೆದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದವರು. ಮಾನವನ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವುದು ಸಾಮಾನ್ಯ. ಹೀಗಾಗಿ ದೇವರ ನಾಮಸ್ಮರಣೆಯಲ್ಲಿ ತೊಡಗಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಜತೆಗೆ ಮಾನಸಿಕ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಬಹುದು.ಆಧುನಿಕ ಕಾಲಘಟ್ಟದಲ್ಲಿ ಹಿರಿಯರ ಪುರಾತನ ಸಂಸ್ಕೃತಿ ಹಾಗೂ ಪರಂಪರೆಗಳು ನಾಶವಾಗುತ್ತಿದೆ. ದೇವಾಲಯಗಳಲ್ಲಿ ಭಾರತೀಯ ಸಂಸ್ಕೃತಿ ಉಡುಗೆ-ತೊಡುಗೆಗಳು ಮರೆಯಾಗುತ್ತಿವೆ. ಇವು ಭವಿಷ್ಯದಲ್ಲಿ ಮಕ್ಕಳಿಗೆ ಮಾರಕವಾಗುವ ಹಿನ್ನೆಲೆಯಲ್ಲಿ ನಮ್ಮ ನೆಲದ ಪರಂಪರೆ, ಪೂಜಾವಿಧಾನವನ್ನು ತಿಳಿಹೇಳುವ ಕೆಲಸ ಪಾಲಕರು ಮಾಡಬೇಕಿದೆ ಎಂದು ಹೇಳಿದರು. ಧರ್ಮಸ್ಥಳ ಸಂಘದಿಂದ ರಾಜ್ಯಾದ್ಯಂತ ಸಾವಿರಾರು ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ. ಮೊದಲೆಲ್ಲಾ ಮನೆಯಲ್ಲಿ ಕೂಡಿಟ್ಟ ಹಣದಿಂದ ಮಾತ್ರ ಉಳಿತಾಯವಾಗುತ್ತಿತ್ತು. ಇದೀಗ ಸ್ವಸಹಾಯದ ಮೂಲಕ ಹಣವನ್ನು ಉಳಿಸಿ ಸಂಕಷ್ಟದ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಹೆಣ್ಣು ಮಕ್ಕಳು ಬಳಕೆ ಮಾಡುತ್ತಿರುವುದಕ್ಕೆ ವೀರೇಂದ್ರ ಹೆಗಡೆಯವರ ದಿಟ್ಟ ಹೆಜ್ಜೆಯೇ ಮೂಲ ಕಾರಣ, ಗ್ರಾಮದ ಎಲ್ಲ ಮಾತೆಯರನ್ನು ಒಗ್ಗೂಡಿಸಿ ಸ್ವಸಹಾಯ ಸಂಘವನ್ನು ಸ್ಥಾಪಿಸಿ ರಾಜ್ಯಾದ್ಯಂತ ವಹಿವಾಟಿಗೆ ಸಂಘ ಮುಂದಾಗಿರುವುದು ಹೆಮ್ಮೆಯ ಸಂಗತಿ. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ಸಾಬೀತುಪಡಿಸಲು ಶ್ರೀಧರ್ಮಸ್ಥಳ ಸಂಘ ಕಾರಣವಾಗಿದೆ ಎಂದು ಬಾಳೆಹೊನ್ನೂರು ಶಾಖಾಮಠ ತೆಂಡೇಕೆರೆ ಕ್ಷೇತ್ರ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಜಿ‌ ನುಡಿದರು.

ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿಯೋಜನೆ ಮುಖಾಂತರ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿ ಕೊಳ್ಳಲು ಸಹಕಾರಿಯಾಗಿದೆ. ಮಹಿಳೆ ಅಬಲೆಯಲ್ಲಿ ಸಬಲೆ ಎಂದು ನಿರೂಪಿಸಬೇಕು. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದುವರಿದಿದ್ದು, ಯೋಜನೆಯ ಮುಖಾಂತರ ಬ್ಯಾಂಕ್ ಗಳಿಂದ ಪಡೆದುಕೊಂಡ ಸಾಲವನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರು.

ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಗೋಪಾಲಕೃಷ್ಣ ಅವಧಾನಿ ನೆರವೇರಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಗಸರಹಳ್ಳಿ ದೇವರಾಜು,ಪುರಸಭಾ ಮಾಜಿ ಸದಸ್ಯ ಕೆ.ಆರ್ ನೀಲಕಂಠ,ಗ್ರಾ.ಪಂ.ಉಪಾದ್ಯಕ್ಷ ಪುನೀತ್, ಸದಸ್ಯರಾದ ಪೂರ್ಣಿಮಾ ಆನಂದ್,ಜಗದೀಶ್, ಶಿವಸಾಗರ್,ಕವಿತಾಬಾಲಕೃಷ್ಣ,ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ್, ಶಾಲಾ ಉನ್ನತ್ತೀಕರಣ ಅಧ್ಯಕ್ಷ ರಮೇಶ್, ಮುಖಂಡರಾದ ನಿಂಗಪ್ಪ,ಅಣ್ಣೇಗೌಡ,ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕಾವ್ಯ,ಸಂಘದ ಮೇಲ್ವಿಚಾರಕರಾದ ರಘು, ಸೇವಾ ಪ್ರತಿನಿಧಿಗಳಾದ ಸುಜಾತ, ಪವಿತ್ರ ಸೇರಿದಂತೆ ಉಪಸ್ಥಿತರಿದ್ದ

ರು.

What's Your Reaction?

like

dislike

love

funny

angry

sad

wow