*ಸಂಜೀವಿನಿ ಮಾಸಿಕ ಸಂತೆಮೇಳ ಮತ್ತು ಒಕ್ಕೂಟದ ವಾರ್ಷಿಕ ಮಹಾಸಭೆ ಸೌಮ್ಯ ಗಂಗಾಧರ ಅಧ್ಯಕ್ಷೆತೆಯಲ್ಲಿ ನಡೆಯಿತು*

ಕೆ.ಆರ್.ಪೇಟೆ : ಗಂಜಿಗೆರೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಿಂದ ಮಾಸಿಕ ಸಂತೆ ಮತ್ತು ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಆಯೋಜನೆ ಮಾಡಲಾಗಿತ್ತು,ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಪರಮೇಶ್.ಎಂ.ಆರ್,
ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸೌಮ್ಯಗಂಗಾದರ್ ರವರು ವಹಿಸಿದರು. ಮಾಸಿಕ ಸಂತೆಮೇಳದಲ್ಲಿ ತಾಲ್ಲೂಕಿನ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮತ್ತು ಪ್ರದರ್ಶನ ಮಾಡಲಾಯಿತು.
ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಜಿಲ್ಲಾಪಂಚಾಯಿತಿ ಮಂಡ್ಯ,ಕಿಶೋರ್.ಕೆ.ಟಿ. ರವರು ಒಕ್ಕೂಟದ ಸಮುದಾಯ ಬಂಡವಾಳ ನಿಧಿಯಿಂದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಸಾಲವನ್ನು ಪಡೆದುಕೊಂಡು ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಚಟುವಟಿಕೆಯನ್ನು ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗ ಬೇಕು ಎಂದು ತಿಳಿಸಿದರು, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಕೆ.ಆರ್.ಪೇಟೆ, ಜಗದೀಶ ಟಿ.ಡಿ. ರವರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಪಂಚಾಯಿತಿಯ ಸಹಯೋಗದೊಂದಿಗೆ ಕೆರೆಗಳನ್ನ ಗುರುತಿಸಿ ಕೂಟ್ಟು ಮೀನು ಸಾಗಾಣಿಕೆಯ ಬಗ್ಗೆ ತರಬೇತಿಯನ್ನು ಕೂಡುಸುತ್ತೇವೆ ಆಶಕ್ತರು ತರಬೇತಿಯನ್ನು ಪಡೆದು ಮೀನು ಸಾಕಾಣಿಕೆ ಮಾಡಿ ಎಂದು ಮಾಹಿತಿ ನೀಡಿದರು. ನಂತರ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಗೀತಾ.ಹಚ್.ಎನ್. ರವರು ಮಾತನಾಡಿ ಪಂಚಾಯಿತಿಯ ಒಕ್ಕೂಟದ ಮಾಸಿಕ ಸಭೆಯಲ್ಲಿ ಭಾಗವಹಿಸಿ ನಿಮಗೆ ಸಹಕಾರ ನೀಡುತ್ತೇನೆ ಎಂದು ಮಾಹಿತಿ ನೀಡಿದರು.
ಗಂಜಿಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಪರಮೇಶ್ ರವರು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಪ್ರತಿಯೊಂದು ಇಲಾಖೆಯಲ್ಲಿ ಸಿಗುವ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳ ಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಆರೋಗ್ಯ ವೈದ್ಯಾಧಿಕಾರಿಗಳು ಪಿ.ಹಚ್.ಸಿ ಗಂಜಿಗೆರೆ, ದಿನೇಶ್ ಬಾಬು ರೆಡ್ಡಿ ವ್ಯವಸ್ಥಾಪಕರು ಕೆ.ಜಿ.ಬಿ. ಬ್ಯಾಂಕ್ ಗಂಜಿಗೆರೆ,ಗ್ರಾಮ ಪಂಚಾಯಿತಿಯ ಸದಸ್ಯರಾದ ರೇಣುಕಾ ಪ್ರಸನ್ನ, ಕಾಂತಮಣಿ,ಈಶ್ವರಚಾರಿ,ಶಿವಕುಮಾರ್,ನಾಗರಾಜಪ್ಪ, ರಂಗೇಗೌಡ,ಪ್ರಭಾಕರ, ದಶರಥ, ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಎನ್.ಆರ್.ಎಲ್.ಎಂ. ಸಿಬ್ಬಂದಿಗಳು, ಭಾಗವಹಿಸಿದರು.
*ವರದಿ. ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






