*ಕೂಡಲಕುಪ್ಪೆ ಗ್ರಾಮದಲ್ಲಿ ಕುಂದುಕೊರತೆ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ವಿಶೇಷ ಸಭೆ*

*ಕೂಡಲಕುಪ್ಪೆ ಗ್ರಾಮದಲ್ಲಿ ಕುಂದುಕೊರತೆ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ವಿಶೇಷ ಸಭೆ*

ಕೆ.ಆರ್.ಪೇಟೆ:ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಲಕುಪ್ಪೆ ಗ್ರಾಮದಲ್ಲಿ ಡಾ.ನಾಗಲಕ್ಷ್ಮೀ ಚೌಧರಿ.ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ.ಬೆಂಗಳೂರು ಇವರು ದಿ.16-1-2025ನೇ ಕೂಡಲಕುಪ್ಪೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮದ ಜನರಿಂದ ಸ್ವೀಕೃತವಾದ ಸಮಸ್ಯೆಗಳನ್ನು ಸ್ವೀಕರಿಸಿ ನಿಯಮಾನುಸಾರ ಈ ಬಗ್ಗೆ ಕ್ರಮವಹಿಸಿ ಕರ್ನಾಟಕ ಮಹಿಳಾ ಆಯೋಗಕ್ಕೆ ವರದಿಯನ್ನು ನೀಡಲು ತಿಳಿಸಿದ್ದ ಹಿನ್ನೆಲೆಯಲ್ಲಿ ಕೂಡಲಕುಪ್ಪೆ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ಗ್ರಾ.ಪಂ.ಅಧ್ಯಕ್ಷರಾದ ಕುಮಾರ.ಕೆ.ಪಿರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯನ್ನು ಆಯೋಜಿಸಿ ಜನರ ಅಹವಾಲುಗಳನ್ನು ಸ್ವೀಕರಿಸಿ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಜನರ ಸಮಸ್ಯೆಗಳ ಕುರಿತು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುಷ್ಮಾ.ಕೆ ರವರು ಮಾತನಾಡಿ ನರೇಗಾ ಯೋಜನೆಯಡಿ ಕಾಂಕ್ರೀಟ್ ರಸ್ತೆ,ಬಾಕ್ಸ್ ಚರಂಡಿ, ಉದ್ಯೋಗಚೀಟಿಗೆ ಅರ್ಜಿ ಸಲ್ಲಿಕೆ ಮತ್ತು ವಿತರಣೆ,ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು ಹಾಗೂ ಸಮುದಾಯ ಕಾಮಗಾರಿಗಳ ಕೂಲಿಕೆಲಸಕ್ಕೆ ಅರ್ಜಿ ಸಲ್ಲಿಸಿ ಭಾಗವಹಿಸುವಂತೆ ತಿಳಿಸಿ ಮತ್ತು ಗ್ರಾಮಕ್ಕೆ ಮಂಜೂರಾಗಿರುವ ಮನೆ ಹಂಚಿಕೆಯ ಮಾಹಿತಿ ನೀಡಿ, ಶೌಚಾಲಯಕ್ಕೆ ಅರ್ಜಿ ಪಡೆದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.

ನಾಲಾ ರಸ್ತೆ,ಗ್ರಾಮಠಾಣಾ ಅಳತೆ,ಸ್ಮಶಾನಕ್ಕೆ ರಸ್ತೆ,ಗ್ರಾಮದ ಮುಖ್ಯ ರಸ್ತೆಯ ಅಗಲೀಕರಣಕ್ಕೆ ನಿಯಮಾನುಸಾರ ಕ್ರಮವಹಿಸುವುದು,ಹೆಚ್.ಎಲ್.ಬಿ.ಸಿ ಕಾಲುವೆ ನೀರನ್ನು ನಿಗಧಿತ ಬಿಡುಗಡೆ ಮಾಡಲು ಕ್ರಮವಹಿಸುವ ಕುರಿತು ತಾಲ್ಲೂಕು ದಂಡಾಧಿಕಾರಿ ಅಶೋಕ್ ರವರು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಅಜಿತ್.ಜೆ ರವರು ಮಾತನಾಡಿ ಗ್ರಾಮದ ಜನರ ಆರೋಗ್ಯದ ದೃಷ್ಟಿಯಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಶಿಬಿರ ಆಯೋಜಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಸ್ಥಳ ಹಾಗೂ ನೂತನ ಕಟ್ಟಡ ನಿರ್ಮಿಸಲು ಅಗತ್ಯ ಸ್ಥಳಾವಕಾಶ ನೀಡಿ ಸಹಕರಿಸುವಂತೆ ಸಾರ್ವಜನಿಕರಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅರುಣ್ ಕುಮಾರ್ ರವರು ತಿಳಿಸಿದರು.

      ಇದೇ ಸಂದರ್ಭದಲ್ಲಿ ಮಂಜುನಾಥ್.ಎಂ.(ಎಇಇ)ಲೋಕೋಪಯೋಗಿ ಇಲಾಖೆ,ಉಮಾಶಂಕರ್.ಕೆ.ಎನ್ ಸಹಾಯಕ ನಿರ್ದೇಶಕರು(ಗ್ರಾಉ),ಕೆ.ರವಿ.ಎ.ಇಪಂಚಾಯತ್ ರಾಜ್ ಇಲಾಖೆ, ಬಿ.ಎಲ್.ಚಂದ್ರಕಲಾ.ರಾಜಸ್ವ ನಿರೀಕ್ಷಕರು,ಪವನ್.ಹೆಚ್.ಆರ್.ರೇಷ್ಮೆ ಇಲಾಖೆ,ತಾಲ್ಲೂಕು ಮಟ್ಟದ ಅಧಿಕಾರಿಗಳು,ಗ್ರಾ.ಪಂ.ಮಟ್ಟದ ಚುನಾಯಿತ ಪ್ರತಿನಿಧಿಗಳು, ಗ್ರಾ.ಪಂ.ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್ ಹಾಗೂ ಕಾರ್ಯದರ್ಶಿ ಸಲ್ಮಾ ಬೇಗಂ ನದಾಫ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

*ವರದಿ. ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow