ಕೆ.ಆರ್.ಪೇಟೆ : 35ನೇ ವರ್ಷದ ಶಾಲೆಗೊಂದು ಕಾರ್ಯಕ್ರಮ,

ಕೆ.ಆರ್.ಪೇಟೆ : 35ನೇ ವರ್ಷದ ಶಾಲೆಗೊಂದು ಕಾರ್ಯಕ್ರಮ,

ಕೆ.ಆರ್.ಪೇಟೆ ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ರವರು ಆಯೋಜಿಸಲಾಗಿದ್ದ 35ನೇ ವರ್ಷದ ಶಾಲೆಗೊಂದು ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕರಾದ ಚಾ.ಶಿ.ಜಯಕುಮಾರ್, ಕನ್ನಡ ನಾಗರಾಜ್,ನೀಲಾಮಣಿ, ವರದಿಗಾರರಾದ ಲೋಕೇಶ್.ವಿ ರವರು ಪರಮಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಗೀತೆಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,

ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಕನ್ನಡ ಭಾಷೆಯನ್ನು ಬೆಳೆಸಬೇಕು,

ರಾಜಕೀಯ ನಾಯಕರು ಎಲ್ಲರೂ ಸೇರಿ ಭಾಷಾವಾರು ಪ್ರಾಂತ್ಯಗಳಾಗಿ ಮಾಡಿದ್ದು ಕರು - ಅಂದರೆ ಕಪ್ಪು ಮಣ್ಣಿನಿಂದ ಕೂಡಿದ ಫಲವತ್ತಾದ ಭೂಮಿಯನ್ನು ಕರುನಾಡು ಕನ್ನಡ ಭಾಷೆಯನ್ನು ಮಾತನಾಡುವ ನಾಡು ಕರ್ನಾಟಕ ಎಂದು ಹೆಸರು ಬಂದಿತ್ತು ಮೈಸೂರು ಹೆಸರು ನಾಮಕರಣ ಮಾಡಿದ ಮೇಲೆ ಎಲ್ಲಾ ಸಾಹಿತಿಗಳು ಕರ್ನಾಟಕ ಎಂದು ನಾಮಕರಣವನ್ನು 1973 ನವೆಂಬರ್ 01 ರಂದು ಅಧಿಕೃತವಾಗಿ ಘೋಷಿಸಲಾಗಿದೆ ಎಂದು ನೀಲಾಮಣಿ ರವರು ಪ್ರಾಸ್ತಾವಿಕ ಭಾಷಣ ಮಾಡಿದರು ,

ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಚಾ.ಶಿ.ಜಯಕುಮಾರ್ ಹಾಗೂ ಕನ್ನಡ ನಾಗರಾಜ್ ರವರು ಕರ್ನಾಟಕ ಏಕೀಕರಣದ ಬಗ್ಗೆ ಸುದೀರ್ಘವಾಗಿ ತಿಳಿಸಿ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು,

ಈ ಸಂದರ್ಭದಲ್ಲಿ ಚಾ.ಶಿ.ಜಯಕುಮಾರ್, ಕನ್ನಡ ನಾಗರಾಜು, ನೀಲಾಮಣಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದ ವಿಜಯಲಕ್ಷ್ಮಿ,ಕೆಬಿಸಿ ಮಂಜುನಾಥ್,ವಜ್ರಪ್ರಸಾದ್,ಮರುವನಹಳ್ಳಿ ಶಂಕರ್,ಹಾದನೂರು ಪರಮೇಶ್, ಚನ್ನೇಗೌಡ, ಸತೀಶ್, ವರದಿಗಾರರಾದ ಲೋಕೇಶ್.ವಿ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು - ಶಾಲಾ ಮಕ್ಕಳು ಭಾಗವಹಿಸಿದ್ದರು,

What's Your Reaction?

like

dislike

love

funny

angry

sad

wow