*ಕೆ ಆರ್ ಪೇಟೆ: ತಾಲ್ಲೂಕು ಹೇಮಗಿರಿ ಬಿಜಿಎಸ್ ಶಾಲೆಯ ಕಾರ್ಯದರ್ಶಿಗಳವಾದ ಡಾ. ಜೆಎನ್ ರಾಮಕೃಷ್ಣೇಗೌಡರ ಮಾರ್ಗದರ್ಶನದಲ್ಲಿ ಯುಗ ಯೋಗಿ ಭೈರವೈಕ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪ್ರತಿಭೆಗೆ ಪುಷ್ಪಾರ್ಚನೆ ಮಾಡಿ ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಬಿಜಿಎಸ್ ಸಂಸ್ಥೆಯ ಟ್ರಸ್ಟಿ ಹಾಗೂ ಹಿರಿಯರಾದ ನಂಜಪ್ಪ ಗೌಡ ರವರು ಧ್ವಜಾರೋಹಣ ನೆರವೇರಿಸಿ.*

*ಕೆ ಆರ್ ಪೇಟೆ: ತಾಲ್ಲೂಕು ಹೇಮಗಿರಿ ಬಿಜಿಎಸ್  ಶಾಲೆಯ ಕಾರ್ಯದರ್ಶಿಗಳವಾದ ಡಾ. ಜೆಎನ್ ರಾಮಕೃಷ್ಣೇಗೌಡರ ಮಾರ್ಗದರ್ಶನದಲ್ಲಿ ಯುಗ ಯೋಗಿ ಭೈರವೈಕ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪ್ರತಿಭೆಗೆ ಪುಷ್ಪಾರ್ಚನೆ ಮಾಡಿ  ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಬಿಜಿಎಸ್  ಸಂಸ್ಥೆಯ ಟ್ರಸ್ಟಿ ಹಾಗೂ ಹಿರಿಯರಾದ  ನಂಜಪ್ಪ ಗೌಡ ರವರು ಧ್ವಜಾರೋಹಣ ನೆರವೇರಿಸಿ.*

ಬಳಿಕ ಮಾತನಾಡಿದ ನಂಜಪ್ಪ ಗೌಡ ಈ ದಿನವನ್ನು ಭಾರತೀಯರಾದ ನಾವು 78ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಬ್ರಿಟಿಷರ ದುರಾಡಳಿತದ ಆಳ್ವಿಕೆಯಿಂದ 1947ರಲ್ಲಿ ನಮ್ಮ ದೇಶ ಬಿಡುಗಡೆ ಹೊಂದಿದ ವಿಜಯದಿನವಾಗಿ ಗುರುತಿಸಲು ಆಚರಣೆ ಮಾಡಲಾಗುತ್ತದೆ. ಇಂದು ನಮ್ಮ ದೇಶಕ್ಕೆ ಹೆಮ್ಮೆಯ ದಿನ.ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಟ ನಡೆಸಿ ಶ್ರಮಿಸಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಣೆ

ಮಾಡಿಕೊಳ್ಳುವ ದಿನವಾಗಿದೆ ‌ಇದು ಭಾರತಕ್ಕೆ ಹೊಸಯುಗದ ಉದಯವನ್ನು ಸೂಚಿಸುತ್ತದೆ.ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ವಿಚಾರಗಳನ್ನು ಕುರಿತು ಜೀವನದಲ್ಲಿ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದಲ್ಲದೇ ಜೀವನದಲ್ಲಿ ಗುರಿಯನ್ನು ಸಾಧಿಸಲು ಗುರುಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ತಿಳಿಸಿದರು.

 ಸಿ ಆರ್ ಸಿ ಅಧಿಕಾರಿಗಳಾದ ಧನಂಜಯ್ ಮಾತನಾಡಿ ಯುವ ಪೀಳಿಗೆಗಳು ಸ್ವಾತಂತ್ರ ಹೋರಾಟಗಾರರ ಬಗ್ಗೆ ಈ ದಿನಮಾನಗಳ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಒಳ್ಳೆಯ ಮಾರ್ಗದಲ್ಲಿ ತಿಳಿದುಕೊಂಡು ಗುರುಗಳಿಗೆ ಹಿರಿಯರಿಗೆ ಗೌರವ ಪೂರಕವಾಗಿ ನಡೆದುಕೊಳ್ಳುವ ಮೂಲಕ ದೇಶ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

 ಪತ್ರಕರ್ತರಾದ ರಾಜು ಜಿ ಪಿ ಮಾತನಾಡಿ ಪ್ರೀತಿ ಸತ್ಯ ನಂಬಿಕೆ ಮೂಲಕ ಜ್ಞಾನವನ್ನು ಸಂಪಾದಿಸಿ ಶ್ರೀಮಂತರಗಿ ಶಾಶ್ವತವಾಗಿರುತಿರಿ ಮಹಾತ್ಮ ಗಾಂಧಿ. ಸುಭಾಷ್ ಚಂದ್ರ ಬೋಸ್. ಡಾ. ಬಿ ಆರ್ ಅಂಬೇಡ್ಕರ್. ಬೇಡರ ಹಲಗಲಿ ಪಡೆ ಇಂಥ ಎಷ್ಟೋ ಹಲವು ಮಹಾವೀರ ಆದರ್ಶ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ದೇಶಾಭಿಮಾನವನ್ನು ತೂರುವ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನ್ಯಾಯದ ಪರ ಹೋರಾಟ ಮಾಡುವ ಧ್ವನಿ ಆಗಬೇಕು ಸತ್ಯವನ್ನು ಬೆಂಬಲಿಸಬೇಕು ನಂಬಿಕೆಯನ್ನು ಪ್ರಕಾಶಮಾನವಾಗಿ ಬೆಳಗಬೇಕು ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು ನಮ್ಮ ದೇಶದಿಂದ ಬ್ರಿಟಿಷರನ್ನು ಓಡಿಸಲು ಅದೆಷ್ಟೋ ಮಹನೀಯರು ರಕ್ತ ಹರಿಸಿರುವ ಇತಿಹಾಸ ಇದೆ ಅದೇ ರೀತಿ ಈಗ ನಮ್ಮ ದೇಶದ ಮೇಲೆ ಕೇಡು ಬಯಸುವವರ ವಿರುದ್ಧ ಧ್ವನಿ ಮಾಡುವ ಶಕ್ತಿ ಯುವಕರಲ್ಲಿ ಮೂಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಮುಖಂಡರಾದ ನಂಜಪ್ಪ ಗೌಡ ರವರು. ಸಿ ಆರ್ ಸಿ ಅಧಿಕಾರಿಗಳಾದ ಧನಂಜಯ್ ರವರು, ಪೆಟ್ರೋಲ್ ಮಾಲೀಕರಾದ ‌ ಚೇತನ್. ಪತ್ರಕರ್ತರಾದ ರಾಜು ಜಿ ಪಿ. ಹೇಮಗಿರಿ ಬಿಜಿಎಸ್ ಸಂಸ್ಥೆಯ ಪ್ರಾಂಶುಪಾಲರು ಉಪ ಪ್ರಾಂಶುಪಾಲರು ಶಿಕ್ಷಕ ಶಿಕ್ಷಕಿಯರು ಪುಟಾಣಿ ಮಕ್ಕಳು ಪೋಷಕರು ಸೇರಿದಂತೆ ಶಾಲಾ ಆಡಳಿತ ಮಂಡಳಿಯವರು ಹಾಗೂ ‌ಸಿಬ್ಬಂದಿಯವರು ಉಪಸ್ಥಿತರಿದ್ದರು

What's Your Reaction?

like

dislike

love

funny

angry

sad

wow