ಎಥನಾಲ್ ಘಟಕದ ಪರವಾಗಿ ಬೀರವಳ್ಳಿ ಗ್ರಾಮದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು

ಎಥನಾಲ್ ಘಟಕದ ಪರವಾಗಿ ಬೀರವಳ್ಳಿ ಗ್ರಾಮದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು

ಎಥನಾಲ್ ಘಟಕದ ಆರಂಭವನ್ನು ವಿರೋಧಿಸುತ್ತಿರುವ ನಕಲಿ ರೈತ ಹೋರಾಟಗಾರರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಬೀರವಳ್ಳಿ ಭಾಗದ ಕಬ್ಬು ಬೆಳೆಗಾರರು* .

ಕೋರಮಂಡಲ್ ಸಕ್ಕರೆ ಕಾರ್ಖಾನೆಯು ತಾಲೂಕಿನ ರೈತರು ಹಾಗೂ ಕಬ್ಬು ಬೆಳೆಗಾರರ ಅಭಿವೃದ್ಧಿಗೆ ಪೂರಕವಾಗಿದ್ದು ರೈತರು ಸಧೃಡ ಸ್ವಾವಲಂಭಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ರೈತ ನಾಯಕ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಹರೀಶ್ ಹೇಳಿದರು.

ಮಾರ್ಚ್ 06ರಂದು ತಾಲ್ಲೂಕಿನ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಎಥನಾಲ್ ಘಟಕ ಆರಂಭ ಕುರಿತು ನಡೆದ ಪರಿಸರ ಆಲಿಕಾ ಸಭೆಯಲ್ಲಿ ಗಲಾಟೆ ಗದ್ದಲ ನಡೆಸಿ ಪರಿಸರ ಆಲಿಕಾ ಸಭೆಯನ್ನು ಹಾಳುಗೆಡವಿ ದವರು ಕಬ್ಬು ಬೆಳೆಗಾರರಲ್ಲ, ಅಂದಿನ ಸಭೆಯಲ್ಲಿ ಭಾಗವಹಿಸಿ ಗಲಾಟೆ ಹಬ್ಬಿಸಿದ ಸ್ವಯಂ ಘೋಷಿತ ಹೋರಾಟಗಾರರಾದ ಪುಟ್ಟೇಗೌಡ, ಕರೋಟಿ ತಮ್ಮಯ್ಯ, ಮಾಕವಳ್ಳಿ ಯೋಗೇಶ್, ದೇವರಸೆಗೌಡ, ಮುದ್ದುಕುಮಾರ್, ಸಿಂದಘಟ್ಟ ರವಿ ಮುಂತಾದವರು ರೈತಕುಲಕ್ಕೆ ಕಳಂಕ ತಂದು ಕಬ್ಬು ಬೆಳೆಗಾರರ ಮರ್ಯಾದೆಯನ್ನು ಹಾಳುಗೆಡವಿ ರೈತರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಹಾಲಿನ ಡೈರಿ ಮಾಜಿ ಅಧ್ಯಕ್ಷ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

 *ನಕಲಿ ರೈತಹೋರಾಟಗಾರರು ಸೇರಿದಂತೆ ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ತಾಲೂಕಿನ ಕಬ್ಬು ಬೆಳೆಗಾರರು ಎಥನಾಲ್ ಘಟಕದ ಪರವಾಗಿದ್ದಾರೆ. ಆದ್ದರಿಂದ ರೈತರು ಅಪಪ್ರಚಾರಗಳಿಗೆ ಕಿವಿಗೊಡದೆ ಪರಿಸರ ಸ್ನೇಹಿಯಾಗಿ ನಿರ್ಮಾಣ ವಾಗುತ್ತಿರುವ ಎಥನಾಲ್ ಘಟಕದ ಪರವಾಗಿ ದೃಢವಾಗಿ ನಿಂತು ತಾಲ್ಲೂಕಿನಾದ್ಯಂತ ಜನಾಂದೋಲನ ನಡೆಸಿ ರೈತ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಪರಶುರಾಮ್ ಮತ್ತು ಲಕ್ಷ್ಮೇಗೌಡ ಆಗ್ರಹಿಸಿದರು* .

ಜನಾಂದೋಲನ ಸಭೆಯಲ್ಲಿ ಕಬ್ಬು ಬೆಳೆಗಾರರಾದ ಬಿ.ಎಸ್. ಕುಮಾರ್, ಎಂ.ಎನ್. ಮಂಜೇಗೌಡ, ಮೂಢನಹಳ್ಳಿ ವೇಕಟೇಶ್, ಬಿ.ವಿ.ಲೋಹಿತ್, ಬಿ.ಆರ್.ಇಂದ್ರೇಶ್, ಸ್ವಾಮಿಗೌಡ, ಬೀಕನಹಳ್ಳಿ ಕುಮಾರ್, ಬಿ.ವೈ.ಯೋಗೇಶ್, ಡಿ. ಚಂದ್ರಶೇಖರ, ಸಂಪತ್ ಕುಮಾರ್, ವಾಸು, ನರೇಂದ್ರ ಬಾಬು, ಬಿ.ಎನ್.ಜಗಧೀಶ್, ರಾಮಯ್ಯ, ಬಿ.ಟಿ.ಕುಮಾರ್, ಬಿ.ಕೆ.ಮಂಜುನಾಥ್, ಹಂಗರಮುದ್ದನಹಳ್ಳಿ ನಾಗರಾಜ್, ಪವನ್, ನಾಟನಹಳ್ಳಿ ಮಹದೇವ್ ಸೇರಿದಂತೆ ನೂರಾರು ಕಬ್ಬು ಬೆಳೆಗಾರರು ಸಭೆಯಲ್ಲಿ ಭಾಗವಹಿಸಿದ್ದರು.

 *ವರದಿ:ರಾಜು ಜಿ ಪಿ ಕಿಕ್ಕೇರಿ ಕೆ ಆ

ರ್ ಪೇಟೆ*

What's Your Reaction?

like

dislike

love

funny

angry

sad

wow