*ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ -2024 ಆಯ್ಕೆಯಾದ ಪತ್ರಕರ್ತರಾದ ಹಲಗೂರು ಪ್ರತಾಪ್ ಎ. ಬಿ.*

*ಬೆಂಗಳೂರು: ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ - 2024*
*ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ ಗೆ ಆಯ್ಕೆಯಾದ ಮಳವಳ್ಳಿ ತಾಲ್ಲೂಕು ಕಾಯಕಯೋಗಿ ವರದಿಗಾರ ಪ್ರತಾಪ್. ಎ. ಬಿ.*
ಮೋನಿಶ್ ಚಾರಿಟೇಬಲ್ ಟ್ರಸ್ಟ್ (ರಿ )ನ ಸಂಸ್ಥಾಪಕರಾದ ಗೀತಾರೆಡ್ಡಿ. ಎಸ್. ಆರ್.ರವರು ಆಯೋಜಿಸಿರುವ ಮೋನಿಶ್ ಚಾರಿಟೇಬಲ್ ಟ್ರಸ್ಟ್ ವಾರ್ಷಿಕೋತ್ಸವ ಹಾಗೂ ಮೋನಿಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ದಿನಾಂಕ.10.11.2೦24ನೇ ಭಾನುವಾರ ಬೆಂಗಳೂರಿನ "ಕುವೆಂಪು ಸಭಾಂಗಣ"ಕನ್ನಡ ಸಾಹಿತ್ಯ ಪರಿಷತ್ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಿ ಶಾಸ್ತ್ರಿಯ ಸಂಗೀತ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ರಮ ಶಿವನೃತ್ಯ ಪ್ರಿಯ ಕಲಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಮತ್ತು ಗಾಯಕರಿಗೆ ಸನ್ಮಾನ , ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ "ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ -2024 "ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಮೋನಿಶ್ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥಾಪಕರಾದ ಗೀತಾರೆಡ್ಡಿ ಎಸ್. ಆರ್.ರವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.
*ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ -2024 ಆಯ್ಕೆಯಾದ ಪತ್ರಕರ್ತರಾದ ಹಲಗೂರು ಪ್ರತಾಪ್ ಎ. ಬಿ.*
ಮೋನಿಶ್ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥಾಪಕ ಅಧ್ಯಕ್ಷರಾದ ಎಸ್.ಆರ್.ಗೀತಾರೆಡ್ಡಿ ರವರು ಆಯೋಜಿಸಿರುವ ಮೋನಿಶ್ ಚಾರಿಟೇಬಲ್ ಟ್ರಸ್ಟ್ ನ ವಾರ್ಷಿಕೋತ್ಸವು ಸಮಾರಂಭದಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೋಕಿನ ಹಲಗೂರು ಹೋಬಳಿ ಅಂಕನಹಳ್ಳಿ ಗ್ರಾಮದ ಪ್ರತಾಪ್. ಎ. ಬಿ ರವರು ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಕಾಯಕಯೋಗಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದು " ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿಗೆ ಭಾಜನರಾಗಿದ್ದಾರೆ,
ಪ್ರಶಸ್ತಿಗೆ ಆಯ್ಕೆ ಹಿನ್ನೆಲೆಯಲ್ಲಿ ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಕೆಬಿಸಿ ಮಂಜುನಾಥ್, ಕಾಯಕಯೋಗಿ ಪತ್ರಿಕೆ ಸಂಪಾದಕರು ಅರುಣ್ ಜ್ಯೋತಿ. ಬಿ. ಕೆ., ಕರುನಾಡು ಯುವಜನ ವೇದಿಕೆ ಹಾಗೂ ಮಾಧ್ಯಮ ಸ್ಟುಡಿಯೋ ಕಛೇರಿಯಲ್ಲಿ ಸ್ನೇಹಿತರು ಪ್ರಶಂಸೆ ವ್ಯಕ್ತಪಡಿಸಿ
ದ್ದಾರೆ.
What's Your Reaction?






