*ಕೆಡಿಪಿ ಸಭೆಗೆ ಬರುವ ಮುನ್ನ ಮಾಹಿತಿಯನ್ನು ಸ್ಪಷ್ಟವಾಗಿ ತನ್ನಿ ಶಾಸಕ ಸಿ ಎನ್ ಬಾಲಕೃಷ್ಣ*.

*ಕೆಡಿಪಿ ಸಭೆಗೆ ಬರುವ ಮುನ್ನ ಮಾಹಿತಿಯನ್ನು ಸ್ಪಷ್ಟವಾಗಿ ತನ್ನಿ ಶಾಸಕ ಸಿ ಎನ್ ಬಾಲಕೃಷ್ಣ*.

*ಕೆಡಿಪಿ ಸಭೆಗೆ ಬರುವ ಮುನ್ನ ಮಾಹಿತಿಯನ್ನು ಸ್ಪಷ್ಟವಾಗಿ ತನ್ನಿ ಶಾಸಕ ಸಿ ಎನ್ ಬಾಲಕೃಷ್ಣ*. ಚನ್ನರಾಯಪಟ್ಟಣ: ತಾಲೂಕಿನ ಕೆಲವು ಅಧಿಕಾರಿಗಳು ಕೆ ಡಿ ಪಿ ಸಭೆಗೆ

ಸರಿಯಾದ ಮಾಹಿತಿ ನೀಡದೆ ಆಗಮಿಸಿದ ಅಧಿಕಾರಿಗಳ ನಡೆಯ ವಿರುದ್ಧ ಗರಂ ಆದ ಶಾಸಕರು ಕೆಡಿಪಿ ಸಭೆಗೆ ಬರುವ ಮುನ್ನ ಸರಿಯಾಗಿ ಹಾಗೂ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಬರುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು, ಪುರಸಭೆಯ ಸಭಾಂಗಣದಲ್ಲಿ ಏರ್ಪಡಿಸಿದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ ಎನ್ ಬಾಲಕೃಷ್ಣರವರು ಕಾರ್ಮಿಕ ಇಲಾಖೆ ಅಬಕಾರಿ ಮತ್ತು ಇಲಾಖೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪಲಾನುಭವಿಗಳ ಪಟ್ಟಿ ಮತ್ತು ಹಣದ ಮೊತ್ತ ಹಾಗೂ ಅಬಕಾರಿ ಇಲಾಖೆಯ ವೈವಾಟು ಹಾಗೂ ತೋಟಗಾರಿಕೆ ಇಲಾಖೆಯ ಮಾಹಿತಿಯನ್ನು ನೀಡುವಾಗ ಅಂಕಿ ಅಂಶಗಳ ಎಡವಟ್ಟು ಮಾಹಿತಿ ನೀಡಿದರು, ಅಬಕಾರಿ ಇಲಾಖೆಗೆ ದಿನಕ್ಕೆ ಏಳು ಕೋಟಿ ವೈವಾಟು ನಡೆಯುತ್ತಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿ ಹೇಳಿದಾಗ ಸರಿಯಾಗಿ ಮಾಹಿತಿ ನೋಡಿಕೊಳ್ಳಿ ಎಂದು ಹೇಳಿದ ಶಾಸಕರು ಸ್ಥಳದಲ್ಲಿ ಲೆಕ್ಕಾಚಾರ ಮಾಡಲು ಆರಂಭಿಸಿದರು, ಕೆಲ ಕಾಲದ ನಂತರ ಅಬಕಾರಿ ಇಲಾಖೆಯ ಅಧಿಕಾರಿಯು ದಿನಕ್ಕೆ ಏಳು ಕೋಟಿ ಅಲ್ಲ, ವಾರಕ್ಕೆ ಏಳು ಕೋಟಿ ಎಂದು ತಮ್ಮ ತಪ್ಪನ್ನು ತಿದ್ದುಕೊಂಡರು, ಅದೇ ರೀತಿ ಕಾರ್ಮಿಕ ಇಲಾಖೆಯ ಅಧಿಕಾರಿಯಾದ ಪುರುಷೋತ್ತಮ್ ಫಲಾನುಭವಿಗಳಿಗೆ ನೀಡಿದ ಮೊತ್ತವನ್ನು ಕೋಟಿಯ ಸಂಖ್ಯೆಯಲ್ಲಿ ಹೇಳಿ ಆನಂತರ ಲಕ್ಷ ಮೊತ್ತವನ್ನು ಹೇಳಿದರು, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿಯನ್ನು ನೀಡಲು ಗಡಿಬಿಡಿ ಮಾಡಿಕೊಂಡರು, ನಮ್ಮ ತಾಲೂಕಿನ ಹಲವು ಇಲಾಖೆ ಅಧಿಕಾರಿಗಳು ಅಂಕಿ ಅಂಶಗಳ ಮಾಹಿತಿಯನ್ನು ಕೆಡಿಪಿಗೆ ನೀಡುವಲ್ಲಿ ಸೂಕ್ತವಾಗಿ ಸ್ಪಂದಿಸದ ಬಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು, ಶ್ರವಣಬೆಳಗೊಳದ ಗ್ರಾಮ ಪಂಚಾಯತಿಯ ಒಬ್ಬ ಸಿಬ್ಬಂದಿ ತಾನು ಬಿಲ್ ಹಾಕುವಾಗ ಒಂದು ಸೊನ್ನೆಯನ್ನು ಬಿಟ್ಟುಬಿಡುತ್ತಿದ್ದ ಅವನನ್ನು ಸೊನ್ನೆ ಗಿರಾಕಿಯಾಗಿದ್ದ ,ಅವನಂತೆ ಆಗಬಾರದು ಎಂದು ಅಧಿಕಾರಿಗಳಿಗೆ ಮಾರ್ಮಿಕವಾಗಿ ಎಚ್ಚರಿಕೆ ನೀಡಿದರು, ಚೆಸ್ಕಾ ಇಲಾಖೆಯ ಬಗೆ ಪ್ರಗತಿಯನ್ನು ವಿವರಿಸಿದ ಅಧಿಕಾರಿಗಳು ಗೃಹ ಜ್ಯೋತಿ ಬರುವ ಮುನ್ನ ಏಳು ಕೋಟಿ ತೊಂಬತ್ತು ಲಕ್ಷ ಮೊತ್ತದ ಡಿಮ್ಯಾಂಡ್ ಇತ್ತು ಇದೀಗ ಕೈಗಾರಿಕೆ ವಾಣಿಜ್ಯ ದರ ಹೆಚ್ಚಾದ ನಂತರ 9 ಕೋಟಿ 51 ಲಕ್ಷ ವಸುಲಾತಿಯ ಡಿಮ್ಯಾಂಡ್ ಇದೆ ಎಂದು ಶಾಸಕರ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಿದರು, ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ 2000 ರೂಗಳಂತೆ ತಾಲೂಕಿನಲ್ಲಿ 20,000 ಮಂದಿಗೆ ಇದುವರೆಗೂ ಹಣ ಪಾವತಿ ಆಗಿರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಇಂದ್ರ ಶಾಸಕರ ಪ್ರಶ್ನೆಗೆ ಉತ್ತರಿಸಿದರು, ಇದೇ ಸಂದರ್ಭದಲ್ಲಿ ಶಾಸಕರಾದ ಸಿ.ಎನ್ ಬಾಲಕೃಷ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ ಆರ್ ಹರೀಶ್, ತಾಲೂಕು ದಂಡಾಧಿಕಾರಿ ಸಿ ಜಿ ಗೀತಾ, ಪುರಸಭೆಯ ಮುಖ್ಯ ಅಧಿಕಾರಿ ಹೇಮಂತ್, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ಕುಂಭಾರಹಳ್ಳಿ ರಮೇಶ್ ಹಾಜರಿದ್ದರು.

What's Your Reaction?

like

dislike

love

funny

angry

sad

wow