ಕರ್ನಾಟಕದಿಂದ ಹೋದ 4 ಸಾವಿರ ಹೋಂ ಗಾರ್ಡ್ ಅತಂತ್ರ
ಇತ್ತೀಚೆಗೆ ಮಧ್ಯಪ್ರದೇಶ ಚುನಾವಣೆ ಡ್ಯೂಟಿಗೆ ಹೋದ ಕರ್ನಾಟಕದ ಸುಮಾರು 4 ಸಾವಿರ ಹೋಂ ಗಾರ್ಡ್ ಗಳನ್ನು ಎಲೆಕ್ಷನ್ ಮುಗಿದು 4 ದಿನಗಳಾಗಿದ್ದವು ವಾಪಸ್ ಕರೆಸಿಕೊಟ್ಟಿಲ್ಲದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಕರ್ನಾಟಕದಿಂದ ಮಧ್ಯಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಕರೆಸಿಕೊಂಡಿದ್ದ ಸುಮಾರು 4 ಸಾವಿರ ಹೋಂ ಗಾರ್ಡ್ ಗಳು ಕರ್ನಾಟಕಕ್ಕೆ ವಾಪಸ್ಸು ಆಗಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಸರಿಯಾದ ಊಟದ ವ್ಯವಸ್ಥೆ ಇಲ್ಲದೆ ಅನಾರೋಗ್ಯದಿಂದ ನರಳುತ್ತಿದ್ದಾರೆ,
ಎಲೆಕ್ಷನ್ ಮುಗಿದು 3-4 ದಿನಗಳು ಕಳೆದರೂ ಯಾವುದೇ ಭತ್ಯೆ ನೀಡದೇ ಹಾಗೂ ವಾಪಸ್ ಬರುವುದಕ್ಕೆ ಬಸ್ - ರೈಲಿನ ವ್ಯವಸ್ಥೆ ಮಾಡದೇ ಬೇಜವಾಬ್ದಾರಿ ಧೋರಣೆ ಮುಂದುವರಿಸಿದ್ದು ವಾಪಸ್ ಕಳಿಸದೇ ಇರುವುದರಿಂದ ಕರ್ನಾಟಕದ ಹೋಂ ಗಾರ್ಡ್ ಗಳ ಕುಟುಂಬದವರು ಅನಾರೋಗ್ಯದಿಂದ ಬಳಲುತ್ತಿದ್ದರೂ, ಕುಟುಂಬದ ಸಮಸ್ಯೆಗಳಿಗೂ ಕೇರ್ ಮಾಡದ
ಮಧ್ಯಪ್ರದೇಶದ ಸರ್ಕಾರದ ವಿರುದ್ಧ ಕರ್ನಾಟಕದ ಹೋಂ ಗಾರ್ಡ್ ಗಳು ಮಾಧ್ಯಮಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಅಧಿಕಾರಿಗಳಿಗೆ ಹೋಂ ಗಾರ್ಡ್ ಮೇಲೆ ಏಕೆ ಇಷ್ಟೊಂದು ತಾಸಾರ ಹೋಂ ಗಾರ್ಡ್ ಸೇವಾ ಮನೋಭಾವನೆಯಿಂದ ಅವರುಗಳ ಮನೆಯಲ್ಲಿರುವ ಕಷ್ಟ ಕಾರ್ಪಣ್ಯಗಳನ್ನು ಬಿಟ್ಟು ಸೇವೆ ಮಾಡುವ ಇವರಿಗೆ ಅಧಿಕಾರಿಗಳ ದಬ್ಬಾಳಿಕೆ ದೌರ್ಜನ್ಯ ತಾರತಮ್ಯ ಮುಂದುವರಿಸಿಕೊಂಡು ಬರುತ್ತಿರುವುದು ಎಷ್ಟರಮಟ್ಟಿಗೆ ಸರಿ.
ಇವರಿಗೂ ಕುಟುಂಬವಿದೆ ಇವರ ಕುಟುಂಬವು ನೆಮ್ಮದಿಯಿಂದ ಇರಬೇಕು ಎಂದು ಒಂದು ಸಲ ಯೋಚನೆ ಮಾಡಿ.
ಅಧಿಕಾರಿಗಳು ಇವರನ್ನು ಸಹೋದರರಂತೆ ನೋಡಿದರೆ ತಮ್ಮ ಕುಟುಂಬದವರಂತೆ ನೀವು ಕಂಡಿದ್ದರೆ ಬೇರೆ ರಾಜ್ಯಗಳಿಗೆ ಹೋಗಿ ಊಟ ಸರಿ ಇಲ್ಲ ಆರೋಗ್ಯ ಸರಿಯಿಲ್ಲದೆ ನಮ್ಮ ಊರಿಗೆ ಕಳಿಸಿಕೊಡಿ ದಮ್ಮಯ್ಯ ಎಂದು ಕೈ ಮುಗಿಯುವ ಪರಿಸ್ಥಿತಿ ಬರುತ್ತಿತ್ತ ?
ಹೋಂ ಗಾರ್ಡ್ ಇಲಾಖೆ ಹೆಸರಿಗೆ ಮಾತ್ರ ಐಜಿಪಿ ಡಿಜಿಪಿ ಕಮಾಂಡೆಂಟ್ ಡೆಪ್ಯೂಟಿ ಕಮಾಂಡೆಂಟ್ ಬೋಧಕರು ಸಹ ಬೋಧಕರು ಹೀಗೆ ಸಾಲು ಸಾಲು ಅಧಿಕಾರಿಗಳು. ಇದು ಏನು ಪ್ರಯೋಜನ?
ಹೋಂ ಗಾರ್ಡ್ಸ್ ಗಳನ್ನು ಎದುರಿಸಿಕೊಂಡು ಬೆದರಿಸುವ ಮೂಲಕ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದಾರೆ.
ಯಾರು ಅಧಿಕಾರಿಗಳ ವಿರುದ್ಧ ಮಾತನಾಡಿ ನ್ಯಾಯ ಕೇಳುವ ಹೋಂ ಗಾರ್ಡ್ ಇಲಾಖೆಯಿಂದ ಕಿತ್ತು ಬಿಸಾಡುತ್ತಾರೆ.
ಇಲ್ಲ ಇಂಥವರಿಗೆ ನೋಟಿಸ್ ಕೊಟ್ಟಿ ಮಾನಸಿಕ ಕಿರುಕುಳ ನೀಡುತ್ತಾರೆ
ತಪ್ಪೇ ಮಾಡದೇ ಇರುವ ಹೋಂ ಗಾರ್ಡ್ ತಪ್ಪೊಪ್ಪಿಕೊಂಡು ಕ್ಷಮೆ ಕೇಳುವಂತೆ ಮಾಡುತ್ತಾರೆ.
ಈ ಪತ್ರ ಇಟ್ಟುಕೊಂಡು ಸದಾ ಹೋಂ ಗಾರ್ಡ್ ಗಳ ಮೇಲೆ ಸವಾರಿ ಮಾಡುತ್ತಾರೆ ಅಧಿಕಾರಿಗಳು.
ಏನಾದರೂ ನೀವು ಗಸ್ ಮಿಸ್ ಎಂದರೆ ನಿಮ್ಮನ್ನ ಕಿತ್ತು ಬಿಸಾಡಿ ಹೊಸಬರನ್ನ ಸೇರಿಸಿಕೊಳ್ಳುತ್ತೇವೆ ಎಂದು ಭಯ ಹುಟ್ಟಿಸುತ್ತಾರೆ.
ನಮ್ಮ ಮೇಲೆ ನಿರಂತರ ಎಷ್ಟೇ ದೌರ್ಜನ್ಯ ನಡೆದರೂ ಧ್ವನಿ ಎತ್ತುವ ಶಕ್ತಿ ಇಲ್ಲ ನಮ್ಮ ಪರವಾಗಿ ನ್ಯಾಯ ಕೇಳುವ ಒಂದು ಸಂಘಟನೆಯು ಇಲ್ಲ.
ಯಾವ ಅಧಿಕಾರಿಗಳಿಗೆ ನಮ್ಮ ನೋವಿನ ಬಗ್ಗೆ ದೂರು ನೀಡಿದರು ನ್ಯಾಯ ಸಿಗುವುದಿಲ್ಲ.
ನೊಂದ ಹೋಂ ಗಾರ್ಡ್ ಗಳ ಕಣ್ಣೀರಿನ ಕಥೆ ಇದು ಅಧಿಕಾರಿಗಳೇ ಗೃಹ ಸಚಿವರೇ ಈಗಲಾದರೂ ಹೋಂ ಗಾರ್ಡ್ ಗಳಿಗೆ ನ್ಯಾಯ ಕೊಡಿಸಿ .
ಎರಡು ದೋಣಿಯ ಪಯಣವನ್ನು ಬಿಟ್ಟು ಒಂದು ದೋಣಿಯಲ್ಲಿ ಸಾಗುವಂತೆ ನಮಗೂ ಪರಮೆಂಟ್ ಮಾಡಿಸಿ ವರ್ಷವಿಡಿ ಕರ್ತವ್ಯ ಸಿಗುವಂತೆ ಮಾಡಿ.
ಅಧಿಕಾರಿಗಳ ದಬ್ಬಾಳಿಕೆ ದೌರ್ಜನ್ಯದಿಂದ ರಕ್ಷಣೆ ನೀಡಿ ನಮ್ಮನ್ನು ಮಾನವೀಯ ದೃಷ್ಟಿಯಿಂದ ನೋಡಿ ಎಂದು ನೊಂದ ಹೋಂ ಗಾರ್ಡ್ಸ್ ಗಳು ತಮ್ಮ ನೋವಿನ ಅಭಿಮತಗಳನ್ನು ತಿಳಿಸಿದರು.
.*ವರದಿ.ರಾಜು ಜಿಪಿ ಕಿಕ್ಕೇರಿ*
What's Your Reaction?