*ಹೇಮಗಿರಿ, ಬಿಜಿಎಸ್ ಶಾಲೆಯಲ್ಲಿ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡ ಮಕ್ಕಳು*

*ಹೇಮಗಿರಿ, ಬಿಜಿಎಸ್ ಶಾಲೆಯಲ್ಲಿ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡ ಮಕ್ಕಳು*

.ಆರ್.ಪೇಟೆ: ಶ್ರೀ ಕೃಷ್ಣ ಧರ್ಮದ ಪ್ರತೀಕ.ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರಗೊಳ್ಳುತ್ತವೆ, ವಿದ್ಯಾರ್ಥಿಗಳು ಓದು ಬರಹದ ಜೊತೆಗೆ ಧರ್ಮ ಸಂಸ್ಕಾರ ಪಡೆಯಬೇಕು ಎಂದು ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ:ಜೆ.ಎನ್ ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.*

ತಾಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಎಜುಕೇಶನ್ ಸೆಂಟರ್ ಆವರಣದಲ್ಲಿ ನಡೆದ ಶ್ರೀ ಕೃಷ್ಣವೇಶಭೂಷಣ ಸ್ಪರ್ಧೆಯ ಸಮಾರಂಭಕ್ಕೆ ಮಾರ್ಗದರ್ಶನ ಮತ್ತು ನೇತೃತ್ವವಹಿಸಿ ಮಾತನಾಡಿದ ಅವರು ದೇವರು,ಕೃಷ್ಣನ ಜನನ, ಕಂಸನ ಸೆರೆಮನೆಯಲ್ಲಿ ಆಯ್ತು ಆದರೆ ಬೆಳದಿದ್ದು ನಂದನವನದ ಯಶೋಧೆಯ ಪಾಲನೆಯಲ್ಲಿ ನಂದ ಮಹಾರಾಜನ ಪಿತೃತ್ವದಲ್ಲಿ ಬೃಂದಾವನದ ಸರ್ವರ ಪ್ರೀತಿ ಪಾತ್ರನಾಗಿ ಬೆಳೆದು ಹಲವಾರು ರಾಕ್ಷಸರನ್ನು ಸಂಹರಿಸಿದ ವಿಶ್ವ ವಿರಾಟ ರೂಪಿ ಶ್ರೀಕೃಷ್ಣ, ಕೃಷ್ಣನ ಆಗರ್ಭ ಶ್ರೀಮಂತಿಕೆ, ಕುಚೇಲನ ಕಡು ಬಡತನ ಇವೆರಡು ಅವರ ಸ್ನೇಹಕ್ಕೆ ಎಂದೂ ಅಡ್ಡಿಯಾಗಲಿಲ್ಲ,ಶ್ರೀಕೃಷ್ಣನ ಜನ್ಮ ವೃತಾಂತ್ತ ಒಂದು ಕಾರ್ಯ ನಿಮಿತ್ತವಾದದ್ದು ಹೊರತು ಸಾಮಾನ್ಯವಾದುದ್ದಲ್ಲ, ಆಚರಣೆ ನಮ್ಮೆಲ್ಲರಿಗೂ ಒಂದು ಸದವಾಕಾಶ ಕಾರಣ ನಮ್ಮ ಶಾಲೆ ಮಕ್ಕಳನ್ನ ರಾಧೆ-ಕೃಷ್ಣರ ವೇಷಭೂಷಣಗಳನ್ನ ಮಾಡಿ ಪ್ರೀತಿ ಸ್ವರೂಪಿ ಭಗವಂತನನ್ನ ಕಾಣುತ್ತೇವೆ.ಅಷ್ಟೇ ಅಲ್ಲದೆ ದೇಶ ಕಂಡ ಮಾಹಾನ್ ನಾಯಕರುಗಳಾದ ಗಾಂಧೀ,ಚೆನ್ನಮ್ಮ ರಾಯಣ್ಣ, ಸ್ವಾಮೀ ವಿವೇಕಾನಂದ ಮುಂತಾದ ಮಹನೀಯರ ಬಗ್ಗೆ ಪರಿಚಯಿಸಿ ಅವರ ವೇಷಭೂಷಣಗಳನ್ನು ಮಾಡಿ ಇಂತಹ ಮಹಾನ ವ್ಯಕ್ತಿಗಳ ಆದರ್ಶ, ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆಯರ ವೇಷಭೂಷಣ ಧರಿಸಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ನೀಡಿದರು.

ಬಳಿಕ ಮಾತನಾಡಿ ಪುರಸಭಾ ಮಾಜಿ ಸದಸ್ಯ ಕೆ.ಆರ್. ನೀಲಕಂಠ ಮಹಾ ಪುರುಷರು ಜನ್ಮ ದಿನಾಚರಣೆಗಳು ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆ ನೆರವಾಗುತ್ತವೆ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಸಂಸ್ಕಾರ ಭಂಡಾರವಾದ ಹೇಮಗಿರಿ ಬಿಜಿಎಸ್ ಶಾಲೆಯಲ್ಲಿ ಆಯೋಜಿಸಿ ಶಾಲೆ ಮಕ್ಕಳಿಗೆ ಸಂಸ್ಕಾರ ಆಧಾರಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಭರತನಾಟ್ಯ ಕೋಲಾಟ ನೃತ್ಯ ಕಾರ್ಯಕ್ರಮದ ಜೊತೆಗೆ ಕೃಷ್ಣ ವೇಷಧಾರಿ ಮಕ್ಕಳಿಗೆ ಆಯೋಜಿಸಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ನೋಡುಗರ ಮನ ರಂಜಿಸಿತು.ಮಕ್ಕಳು ನಾ ಮುಂದೆ, ತಾ ಮುಂದೆ ಎನ್ನುವಂತೆ ಗಡಿಗೆ ಒಡೆಯಲು ಮುಗಿ ಬಿದ್ದರು.ಗಡಿಗೆ ಒಡೆದು, ಸಂಭ್ರಮದಲ್ಲಿ ತೇಲಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ಹಿರಿಯ ಪತ್ರಕರ್ತ ಕೆ ಆರ್ ನೀಲಕಂಠ, ಅಗ್ರಹಾರಬಾಚಳ್ಳಿ ಗ್ರಾ. ಪಂ.ಸದಸ್ಯ ಮತ್ತು ಶ್ರೀನಿವಾಸ್ ಸಜ್ಜನ್, ಸೈಯದ್ ಖಲೀಲ್, ಶಾಲಾ ಮುಖ್ಯ ಪ್ರಾಂಶುಪಾಲರಾದ ಆನಂದ್, ರವಿ, ಬೋಧಕ ಬೋಧಕಿರು ಮತ್ತು ಮಕ್ಕಳ ಪೋಷಕರು ಸೇರಿದಂತೆ ಉಪಸ್ಥಿತರಿದ್ದರು.

 *ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow