ಭಾರತೀಯ ಜನತಾ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರೇ ಪ್ರಬಲ ಧೀಶಕ್ತಿ ಆಗಿದ್ದಾರೆ. ರಾಶಿ ಸಿದ್ದರಾಜುಗೌಡ

ಭಾರತೀಯ ಜನತಾ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರೇ ಪ್ರಬಲ ಧೀಶಕ್ತಿ ಆಗಿದ್ದಾರೆ. ರಾಶಿ ಸಿದ್ದರಾಜುಗೌಡ

ಭಾರತೀಯ ಜನತಾ ಪಕ್ಷಕ್ಕೆ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರೇ ಧೀಶಕ್ತಿಯಾಗಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ ಭ್ರಷ್ಟಾಚಾರ ಮಾಡುತ್ತಾ ಸರ್ಕಾರದ ಕೋಟ್ಯಂತರ ಹಣವನ್ನು ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುವ ದಿಕ್ಕಿನಲ್ಲಿ ಪಕ್ಷವು ನೀಡುವ ಆದೇಶಕ್ಕೆ ಕಾರ್ಯಕರ್ತರು ಸದಾ ಸಿದ್ಧರಿರಬೇಕು ಎಂದು ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳು ಹಾಗೂ ಕೃಷ್ಣರಾಜಪೇಟೆ ತಾಲೂಕು ಉಸ್ತುವಾರಿಗಳಾದ ರಾಶಿ ಸಿದ್ದರಾಜುಗೌಡ ಕರೆ ನೀಡಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಮಂಡಲ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದ ಜನತೆಗೆ ಮಂಕುಬೂದಿ ಎರಚಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಿರಂತರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರು ಮೂಡಾ ದಲ್ಲಿ ನೂರಾರು ಕೋಟಿ ರೂಪಾಯಿ ಹಗರಣ ನಡೆಸಿ ಸಿಕ್ಕಿಬಿದ್ದಿದ್ದರೂ ಸಮಾಜವಾದಿ ನಾಯಕರಾದ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಸ್ಪಕ್ಷವಾಗಿ ತನಿಖೆ ನಡೆಯಲು ಅವಕಾಶ ಮಾಡಿಕೊಡದೆ ಅಧಿಕಾರಕ್ಕೆ ಅಂಟಿಕೊಂಡು ತಾವೇನೂ ತಪ್ಪೇ ಮಾಡಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಭ್ರಷ್ಟಚಾರ ನಡೆಸಿ ಸರ್ಕಾರದ ಕೋಟ್ಯಂತರ ಹಣವು ದುರುಪಯೋಗ ಆಗಲು ಕಾರಣರಾಗಿರುವ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆಯನ್ನು ಆಗಸ್ಟ್ 3 ರಿಂದ ಹಮ್ಮಿಕೊಂಡಿದ್ದು ತಾಲ್ಲೂಕಿನ ನೂರಾರು ಕಾರ್ಯಕರ್ತರು ಕಾಲ್ನಡಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಒಂದಾಗಿ ಹೋರಾಟಕ್ಕೆ ಧುಮುಕಬೇಕು ಎಂದು ಸಿದ್ದರಾಜುಗೌಡ ಮನವಿ ಮಾಡಿದರು.

ಆಗಸ್ಟ್ 15ರಂದು ನಡೆಯುತ್ತಿರುವ ಸುವರ್ಣ ಸ್ವಾತಂತ್ರೋತ್ಸವದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗ ಕಾರ್ಯಕ್ರಮ ಯಶಸ್ವಿಗೊ ಳಿಸಿಕೊಡಬೇಕು ಎಂದು ಮನವಿ ಮಾಡಿದರು. ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡರ ನೇತೃತ್ವದಲ್ಲಿ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಸಂಘಟಿತವಾಗು ತ್ತಿದೆ. ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆ ಗಳಲ್ಲಿಯೂ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರೆಯಲಿದ್ದು ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಸೋಲಿಸಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ದುಡಿಯಬೇಕು ಎಂದು ಸಿದ್ದರಾಜುಗೌಡ ಕರೆ ನೀಡಿದರು.

 ರಾಜ್ಯ ಎಸ್‌ಟಿ ಮೋರ್ಚ್ ಕಾರ್ಯಕಾರಿ ಕಮಿಟಿಯ ಸದಸ್ಯರಾದ ಮಹೇಶ್ ನಾಯಕ ಮಾತನಾಡಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 178 ಕೋಟಿ ಕಾಂಗ್ರೆಸ್ ಸರ್ಕಾರ ಹಗರಣ ಮಾಡಿರುವುದು ಈ ಹಣವನ್ನು ಸಚಿವರ ಹೆಂಡತಿ ಸಚಿವರ ಆಪ್ತರು ಹಿಂಬಾಲಕರ ಖಾತೆಗೆ ವರ್ಗಾವಣೆ ಮಾಡಿ ತೆಲಂಗಾಣ ಚುನಾವಣೆ ಹಾಗೂ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿರುವುದು ಜಗ ಜಾಹಿರತ್ ಆಗಿದ್ದರು ರಾಜೀನಾಮೆ ನೀಡದೆ ಬಂಡತನದಿಂದ ಸಮರ್ಥನೆ ಮಾಡುತ್ತಿರುವುದು ಇದು ನಮ್ಮ ಸಮಾಜಕ್ಕೆ ಮಾಡಿರುವ ದ್ರೋಹ ಪರಿಶಿಷ್ಟ ಪಂಗಡದ ಸಮಾಜದವರಿಗೆ ಅಭಿವೃದ್ಧಿಗೆ ಎಂದು ಇಟ್ಟಿದ ಹಣವನ್ನು ದುರ್ಬಳಕೆ ಮಾಡಿಕೊಂಡು ಬ್ರಷ್ಟಾಚಾರ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಅನುದಾನವನ್ನು ಮನಸಾಯಿಚೆ ವರ್ಗಾವಣೆ ಮಾಡಿ ಸಾರ್ವಜನಿಕರ ಸುತ್ತನ್ನು ಕಬಳಿಸಿರುವುದರ ವಿರುದ್ಧ ನಮ್ಮ ಭಾರತೀಯ ಜನತಾ ಪಾರ್ಟಿಯ ರಾಜ್ಯಧ್ಯಕ್ಷರಾದ ಬಿ ಎಸ್ ವಿಜಯೇಂದ್ರ ಯಡಿಯೂರಪ್ಪನವರು, ಎಸ್‌ಟಿ ಮೋರ್ಚದ ರಾಜ್ಯಾಧ್ಯಕ್ಷರಾದ ಬಂಗಾರ ಹನುಮಂತ್ ರವರ ನೇತೃತ್ವದಲ್ಲಿ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಬೆಂಬಲಿಸಲು ಈ ಭಾಗದ ಎಲ್ಲಾ ಬಿಜೆಪಿಯ ಕಾರ್ಯಕರ್ತರು ಎಸ್ ಟಿ ಸಮಾಜದ ಬಂಧುಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು,

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಲ ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ ಮಾತನಾಡಿ ಬಿಜೆಪಿ ಕಾರ್ಯಕರ್ತರು ತಮ್ಮಲ್ಲಿನ ಭಿನ್ನಮತವನ್ನು ಮರೆತು ಒಂದಾಗಿ ಕೆಲಸ ಮಾಡುವ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ದುಡಿಯಬೇಕು. ತಾಲ್ಲೂಕಿನ ಅಭಿವೃದ್ಧಿಗೆ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡಿದ್ದ ಮಾಜಿ ಸಚಿವರಾದ ನಾರಾಯಣಗೌಡ ಅವರು ಕುತಂತ್ರದಿಂದ ಸೋಲಬೇಕಾಯಿತು, ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣ ಗೌಡರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾರಾಯಣ ಗೌಡರ ಗೆಲುವು ನಿಶ್ಚಿತವಾಗಿದೆ ಆದ್ದರಿಂದ ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡಬೇಕು ಎಂದು ನಾಗಣ್ಣ ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಆನಂದ್ ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷ ಪರಮೇಶ್ ಅರವಿಂದ್, ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ, ಶಿಲ್ಪಾ, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಸಿಂಗನಹಳ್ಳಿ ರವಿಕುಮಾರ್, ಮಾಧ್ಯಮ ಪ್ರಮುಖರಾದ ಬೂಕನಕೆರೆ ಮಧುಸೂದನ್, ಅಕ್ಕಿಹೆಬ್ಬಾಳು ರಾಜ್ಯ ಎಸ್ ಟಿ ಮೋರ್ಚದ ಕಾರ್ಯಕಾರಿಣಿ ಸದಸ್ಯರಾದ ಮಹೇಶ್ ನಾಯಕ, ಮಂಡ್ಯ ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ವಾಸು. ತಾಲೂಕು ಬಿಜೆಪಿ ಎಸ್ಪಿ ಮೋರ್ಚದ ಅಧ್ಯಕ್ಷರಾದ ರಾಜು ಜಿ ಪಿ, ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷರಾದ ಆದ್ನೂರು ಮಂಜು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ರಾಜೇಗೌಡ, ಹರಿಹರಪುರ ನವೀನ್ ಬಲರಾಮೇಗೌಡ, ಬಿಗ್ ಬಾಸ್ ಮೋಹನ್, ಭಾರತಿಪುರ ಶ್ರೀನಿವಾಸ್, ಮೋದಿ ಸುರೇಶ್, ಚಂದ್ರಕಲಾ ರಮೇಶ್, ಗಂಜಿಗೆರೆ ವಿಜಯಕುಮಾರ್, ಮಡವಿನಕೋಡಿ ಗಂಗಾಧರ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow