ತಾಲೂಕಿನಲ್ಲಿ ಹೆಚ್ಚು ಪೌರಾಣಿಕ ನಾಟಕಗಳ ಪ್ರದರ್ಶನ ಪ್ರದರ್ಶನಗೊಂಡಿದೆ : ಶಾಸಕ ಬಾಲಕೃಷ್ಣ ಹೇಳಿಕೆ
ಚನ್ನರಾಯಪಟ್ಟಣ : ತಾಲೂಕಿನಲ್ಲಿ ಅತಿ ಹೆಚ್ಚು ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಯೋಜನಾ ಪ್ರಾಧಿಕಾರ ಕಚೇರಿಯ ಹಿಂಬಾಗ ನೂತನವಾಗಿ ನಿರ್ಮಿಸಿರುವ ಶ್ರೀಗುರುಕಲಾ ಸಂಘದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು, ತಾಲೂಕಿನಲ್ಲಿ ಅತಿ ಹೆಚ್ಚು ಕಲಾವಿದರಿದ್ದು, ಕಲಾವಿದರ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗಲು ಕಲಾ ಭವನ ನಿರ್ಮಿಸಿ ಯುವ ಕಲಾವಿದರನ್ನು ಈ ಪೋಷಿಸಲು ಶ್ರೀ ಗುರು ಕಲಾ ಸಂಘವು ನಿವೇಶನಕ್ಕೆ ಬೇಡಿಕೆ ಸಲ್ಲಿಸಿದ್ದು, ತಾಲೂಕು ಆಡಳಿತದ ವತಿಯಿಂದ ನಿವೇಶನ ನೀಡಿದ್ದು ಇಂದು ಶ್ರೀಗುರುಕಲಾಭವನ ನಿರ್ಮಾಣಗೊಂಡು ಸಂಘದ ಹಾಗೂ ಕಲಾವಿದರ ಕಾರ್ಯ ಚಟುವಟಿಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ನೂತನ ಕಟ್ಟಡಕ್ಕೆ ದೇಣಿಗೆ ನೀಡಿದಂತಹ ಮಹನೀಯರಿಗೆ ಗೌರವ ಸಮರ್ಪಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು,ಶ್ರೀ ನಂಜುಂಡೇಶ್ವರ ಡ್ರಾಮಾ ಸೀನ್ಸ್ ಭವ್ಯರಂಗ ವೇದಿಕೆಯಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು, ಕಾರ್ಯಕ್ರಮದಲ್ಲಿ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಅವರು, ದಿವ್ಯ ಸಾನಿಧ್ಯ ವಹಿಸಿದ್ದರು.
ಕಳೆದ 25 ವರ್ಷದಿಂದ ಶ್ರೀ ಗುರು ಕಲಾಸಂಘ ಅನೇಕ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ತಾಲೂಕಿನಲ್ಲಿರುವ ಕಲಾವಿದರು ಕಲೆಯನ್ನು ಪ್ರೋತ್ಸಾಹಿಸುತ್ತಾ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅವರ ಪ್ರತಿಭೆಯನ್ನು ಬೆಳಗಿಸುತ್ತಿರುವುದು ಶ್ರೀ ಗುರುಕಲಾ ಸಂಘದ ಕಾರ್ಯವು ಶ್ಲಾಘನೀಯವಾಗಿದೆ ಎಂದರು
ಶ್ರೀ ಗುರು ಕಲಾ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಹಾಗೂ ಗುರುಕಲಾ ಭವನದ ಉದ್ಘಾಟನೆ ಪ್ರಯುಕ್ತ ಗುರುಕಲಾ ಭವನದ ಕಟ್ಟಡಕ್ಕೆ ಆರ್ಥಿಕ ಸಹಾಯ ಮಾಡಿದ ಮಹನೀರನ್ನು ಗೌರವಿಸಲಾಯಿತು,
ಇದೇ ಸಂದರ್ಭದಲ್ಲಿ ಶಾಸಕ ಸಿಎನ್ ಬಾಲಕೃಷ್ಣ, ಎಂಎಲ್ಸಿ ಸೂರಜ್ ರೇವಣ್ಣ,ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಶ್ರೀ ಗುರು ಕಲಾ ಸಂಘದ ಗೌರವಾಧ್ಯಕ್ಷ ಸಿ.ಜಿ.ಮಂಜಪ್ಪ, ವೆಂಕಟಸುಬ್ಬಯ್ಯ, ಅಧ್ಯಕ್ಷ ಹೆಚ್.ಎನ್. ರಾಮಣ್ಣ, ಕಾರ್ಯದರ್ಶಿ ಮಹಾದೇವ್, ಉಪಾಧ್ಯಕ್ಷರಾದ ಬಿ.ಎಸ್.ನಾಗರಾಜು, ಡಿ.ಎಸ್. ದೇವರಾಜೇಗೌಡ, ಗೌರವ ಸಲಹೆಗಾರ ಎನ್.ಶ್ರೀನಿವಾಸ್, ಕಾರ್ಯಾಧ್ಯಕ್ಷ ಕೃಷ್ಣೆಗೌಡ ಸಹಕಾರ್ಯದರ್ಶಿ ಬಿ.ಕೆ.ಬೆಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಮರಿನಿಂಗೇಗೌಡ, ಖಜಾಂಚಿ ಲಕ್ಷ್ಮಿನರಸಿಂಹಮೂರ್ತಿ, ಸಂಚಾಲಕ ಗುರುರಾಜ್, ಸಾಂಸ್ಕೃತಿ ಕಾರ್ಯದರ್ಶಿ ಹೆಚ್. ಎನ್. ನಂಜುಂಡೇಗೌಡ ಹಾಗೂ ಸಂಘದ ನಿರ್ದೇಶಕರು ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.
What's Your Reaction?