*ಹೇಮಗಿರಿ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ ಮಾಡಿದ ಮಕ್ಕಳು. ಮಕ್ಕಳ ವ್ಯವಹಾರ ಜಾಣ್ಮೆಗೆ ತಲೆದೂಗಿದ ಪೋಷಕರು* ...
*ಅಣ್ಣಾ ಬನ್ನಿ ಅಣ್ಣ, ಅಕ್ಕಾ ಬನ್ನಿ, ತಾಜಾ ತಾಜಾ ತರಕಾರಿ, ಸೊಪ್ಪು ತಗೊಳ್ಳಿ, ಕಬ್ಬಿನ ಹಾಲು, ಹಿರಳೆ ಕಾಯಿ ಜ್ಯೂಸ್ ಬೇಕಾ ಬನ್ನಿ, ವಡಾಪಾವ್, ಪಾನಿಪುರಿ, ಮೆಣಸಿನಕಾಯಿ ಬಜ್ಜಿ ತಗೊಳ್ಳಿ ಅಣ್ಣಾ ಎಂದು ಮಕ್ಕಳ ಸಂತೆಯಲ್ಲಿ ಬಿಜಿಎಸ್ ಸ್ಕೂಲ್ ಮಕ್ಕಳು ಭರ್ಜರಿ ವ್ಯಾಪಾರ ಮಾಡಿದರು*.
ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಇಂದು ನಡೆದ ಮಕ್ಕಳ ಸಂತೆಯಲ್ಲಿ ಶಾಲಾ ಮಕ್ಕಳು ಪೈಪೋಟಿಯಲ್ಲಿ ವ್ಯಾಪಾರ ವ್ಯವಹಾರ ಮಾಡಿ ತಾವು ಓದಿನ ಜೊತೆಗೆ ಲೋಕಜ್ಞಾನದಲ್ಲಿಯೂ ಚೆನ್ನಾಗಿದ್ದೇವೆ ಎಂದು ಸಾಧಿಸಿ ತೋರಿಸಿ ಸಾರ್ವಜನಿಕರು ಹಾಗೂ ಪೋಷಕರಿಂದ ಸೈ ಎನಿಸಿಕೊಂಡರು.
ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೆಗೌಡರ ನೇತೃತ್ವದಲ್ಲಿ ನಡೆದ ಬಿಜಿಎಸ್ ಪಬ್ಲಿಕ್ ಸ್ಕೂಲ್ ಮಕ್ಕಳ ಸಂತೆ ಕಾರ್ಯಕ್ರಮವನ್ನು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಉದ್ಘಾಟಿಸಿ ಸಂತೆಯಲ್ಲಿ ಮಕ್ಕಳ ಮಾರಾಟ ಮಳಿಗೆಗಳಿಗೆ ತೆರಳಿ ಮಕ್ಕಳೊಂದಿಗೆ ಮಾತನಾಡಿ ಚೌಕಾಶಿ ನಡೆಸಿ ವ್ಯಾಪಾರ ಮಾಡಿ ಸಂಭ್ರಮಿಸಿದರು.
ಶ್ರೀ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿಗಳಾದ ಡಾ.ರಾಮಕೃಷ್ಣೆಗೌಡ ಅವರು ಮಾತನಾಡಿ ಶಾಲಾ ಮಕ್ಕಳಲ್ಲಿ ವ್ಯವಹಾರ ಜಾಣ್ಮೆ, ಲೋಕಜ್ಞಾನ, ಲಾಭ-ನಷ್ಟ ಹಾಗೂ ಲೆಕ್ಕಾಚಾರದ ಬಗ್ಗೆ ಅರಿವಿನ ಜಾಗೃತಿ ಮೂಡಿಸಲು ಮಕ್ಕಳ ಸಂತೆ ಕಾರ್ಯಕ್ರಮವು ಸಹಕಾರಿಯಾಗಿದೆ. ಮಕ್ಕಳು ತಾವು ತಂದಿರುವ ವಸ್ತುಗಳನ್ನು ಸಂತೆಯಲ್ಲಿ ಪೈಪೋಟಿಯಲ್ಲಿ ಮಾರಾಟ ಮಾಡಿದಾಗ ಲಾಭ ನಷ್ಟಗಳ ಬಗ್ಗೆ ಸ್ಪಷ್ಟವಾಗಿ ತಿಳಿದು,ಅರಿವು ಮೂಡುತ್ತದೆ. ಇಂದು ಮಕ್ಕಳು ಸಂತೆಯಲ್ಲಿ ಭರ್ಜರಿಯಾಗಿ ವ್ಯಾಪಾರ ಮಾಡಿ ಒಳ್ಳೆಯ ಲಾಭಗಳಿಸಿ ನಾವು ಓದಿನ ಜೊತೆಗೆ ವ್ಯವಹಾರದಲ್ಲಿಯೂ ಮುಂದಿದ್ದೇವೆ ಎಂದು ಸಾಧಿಸಿ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಹರಿಚರಣ ತಿಲಕ್, ಕೆ.ಆರ್. ನೀಲಕಂಠ, ಮಾಕವಳ್ಳಿ ಮನು, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಗಂಜಿಗೆರೆ ಮಹೇಶ್, ಸೈಯ್ಯದ್ ಕಲೀಲ್, ಹೊಸಹೊಳಲು ರಘು, ಮಂಜುನಾಥ್, ಬಿಜಿಎಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಆನಂದ್, ಉಪ ಪ್ರಾಂಶುಪಾಲೆ ಜಯಶೀಲ, ಮುಖಂಡರಾದ ಅಶೋಕ್, ರಾಮೇಗೌಡ, ಶಿವಕುಮಾರ್, ಜಯರಾಮೇಗೌಡ, ವಿಶ್ವನಾಥ್ ಸೇರಿದಂತೆ ಮಕ್ಕಳ ನೂರಾರು ಪೋಷಕರು ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
*ವರದಿ.ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?