ಎಲ್ಲಾ ಅವಮಾನ ಮಾನಸಿಕ ಹಿಂಸೆಯನ್ನು ಹೆದರಿಸಿ,ವೈರತ್ವವನ್ನು ಶಾಂತಿಯಿಂದ ಬಗೆಹರಿಸಿ, ಬ್ರಹ್ಮಕುಮಾರಿ ಯತ್ನ ಅಕ್ಕ
ಎಲ್ಲಾ ಸ್ತರದ ಮಾನಸಿಕ ಒತ್ತಡ ಹಿಂಸೆಯನ್ನು ಶಾಂತಿಯಿಂದ ಹೆದರಿಸಬೇಕು,, ವಿದ್ಯಾರ್ಥಿಗಳು ಸದೃಢ ಆರೋಗ್ಯ ಸಧೃಡ ಮನಸು ಏಕಾಗ್ರತೆ ದೇಶಭಕ್ತಿ ಉಳ್ಳವರಾಗಬೇಕು ಎಂದು ಬ್ರಹ್ಮಕುಮಾರಿ ಯತ್ನಕ್ಕ ನುಡಿದರು,, ಹೌಸಿಂಗ್ ಬೋರ್ಡ್ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ನಡೆದ ಜೀವನ ಮೌಲ್ಯಗಳ ತರಬೇತಿ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದರು.ಯೋಗ ಗುರು ಅಲ್ಲಮಪ್ರಭು ನೇತೃತ್ವದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾನು ನನ್ನನ್ನು ಬದಲಾವಣೆ ಮಾಡಿಕೊಳ್ಳೋದು ಹೇಗೆ ಎಂದು ಸಂವಾದ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವರಿಸಿದರು,,,ಈ ಸಂದರ್ಭದಲ್ಲಿ ಛಾಯಾದೇವಿ ಆಡಳಿತಾಧಿಕಾರಿ ಶ್ರೀಮತಿ ಸವಿತಾ ರಮೇಶ್ ಮಾತನಾಡಿ
ಪ್ರತಿಯೊಬ್ಬ ವ್ಯಕ್ತಿಯೂ ಒಂದು ಇತಿಹಾಸ ಪುಸ್ತಕ ಎಂದರು. ಸಂಘರ್ಷದ ಸುಳಿಯಲ್ಲಿ ಇಂದು ನಾವು ಇದ್ದೇವೆ, ನಾವು ಹಿಂದೆ ಅನುಭವಿಸಿದ ಕಷ್ಟ ಈಗಿನ ಮಕ್ಕಳಿಗಿಲ್ಲ, ಎಂದರು.ಹಿರಿಯ ಪತ್ರಕರ್ತರಾದ
ಬಲ್ಲೇನಹಳ್ಳಿ ಮಂಜುನಾಥ್ ಅವರು ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಏಕಾಗ್ರತೆಯಿಂದ ಮನಸಿನಲ್ಲಿ ಉಂಟಾಗುವ ವೈರುಧ್ಯಗಳ ಮೆಟ್ಟಿ ನಿಲ್ಲಬೇಕು,, ಸಣ್ಣ ಪುಟ್ಟದಕ್ಕೆಲ್ಲಾ ಮಕ್ಕಳು ಆತ್ಮಹತ್ಯೆ ನಿರ್ಧಾರ ಮಾಡುವುದು,, ಅಕ್ಷಮ್ಯ ಎಂದು ನುಡಿದರು. ತಾವು ನಡೆದು ಬಂದ ಹಾದಿ ಬಗ್ಗೆ ವಿವರವಾಗಿ ವಿವರಿಸಿದರು. ವಿದ್ಯಾರ್ಥಿಗಳು ತಂದೆ ತಾಯಿಯನ್ನು ಗೌರವಿಸಬೇಕು,,ದೇಶದ ಅಭಿವೃದ್ಧಿಗೆ ಸಂಸ್ಕೃತಿ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು
ನುಡಿದರು. ತಾಲೂಕು ಎಸ್ ಸಿ ಎಸ್ ಟಿ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಹಳಿಯೂರು ಯೋಗೇಶ್ ರವರು ಮಾತನಾಡಿ ಸಮಾಜದಲ್ಲಿ ಶಾಂತಿ ಸಮಾನತೆಗಾಗಿ ದುಡಿಯಬೇಕು ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಬ್ರಹ್ಮ ಕುಮಾರಿ ಸವಿತಕ್ಕ,ಜಯಕ್ಕ,ಹಾದನೂರು ಶಿಕ್ಷಕರಾದ ಶ್ರೀ ಮಂಜುನಾಥ,, ಹರ್ಷವರ್ಧನ್, ಸುಷ್ಮಾ, ವೆಂಕಟೇಶ್, ಯೋಗ ಗುರು ಅಲ್ಲಮಪ್ರಭು ಹಾಗೂ ಶಿಕ್ಷಣ ಸಂಯೋಜಕರಾದ ಶ್ರೀ ವೀರಭದ್ರಯ್ಯ,ಸಿ ,ಕಾವೇರಿ ಟೈಲರ್ ವಾಸು, ಮುಂತಾದವರು ಹಾಜರಿದ್ದರು.
*ವರದಿರಾಜು ಜಿಪಿ ಕಿಕ್ಕೇರಿ ಕೃಷ್ಣರಾಜಪೇಟೆ*
What's Your Reaction?