*ಸರ್ಕಾರಿ ನೌಕರ ಅಧಿಕಾರಿಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಂತ ಡಾ. #ಎಚ್ ಎಲ್ #ನಾಗರಾಜ್ ರವರು ಇಂದು ಸನ್ಯಾಸತ್ವದ ದೀಕ್ಷೆ ಪಡೆದಿದ್ದಾರೆ*
ಒಬ್ಬ ಅಧಿಕಾರಿಯಾಗಿ ಅವರು ಮಾಡಿದ ಕೆಲಸಗಳನ್ನ ಎಷ್ಟು ಬಣ್ಣಿಸಿದರೂ ಸಾಲದು ಒಬ್ಬ ಸಾಮಾನ್ಯ ಅಸಹಾಯಕ ಬಡ ವ್ಯಕ್ತಿಯ ದೃಷ್ಟಿಯಿಂದ ನೋಡಿದರೆ ಅವರು ದೈವಾಂಶ ಸಂಭೂತ. ಬಡವರ ಕೆಲಸಗಳನ್ನು ಒಂದು ಕ್ಷಣವೂ ವ್ಯರ್ಥ ಮಾಡದೇ ತುರ್ತಾಗಿ ಮಾಡಿಕೊಡುತ್ತಿದ್ದ ರೀತಿ. ಸಾರ್ವಜನಿಕ ಆಸ್ತಿ ರಕ್ಷಣೆಗೆ ಅವರು ಕೈಗೊಳ್ಳುತ್ತಿದ್ದಂತಹ ಕ್ರಮಗಳು, ನೂರಾರು ಒತ್ತುವರೆಯಾದ ಕೆರೆಗಳನ್ನು ಪ್ರಭಾವಿಗಳ ಕೈಮುಷ್ಟಿಯಿಂದ ಬಿಡಿಸಿದಂತಹ ಕಾರ್ಯಗಳು, ಯಾವುದೇ ರಾಜಕಾರಣಿಯಾದರೂ ಅವರ
ಮುಲಾಜಿಗೆ ಒಳಗಾಗದೆ ಕಾನೂನು ಪ್ರಕಾರ ಅವರು ಮಾಡುತ್ತಿದ್ದಂತಹ ಕಾರ್ಯಗಳು, ಆರೋಗ್ಯ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ಸುಧಾರಣೆಗೆ ಕೈಗೊಂಡ ಕ್ರಮಗಳು, ಹಗಲು ರಾತ್ರಿ ಎನ್ನದೆ ತಮ್ಮ ವ್ಯಾಪ್ತಿಯ ಕಡತ ಫೈಲ್ ಕೆಲಸಗಳನ್ನು ಮುಗಿಸುತ್ತಿದ್ದಂತಹ ರೀತಿ ಅವರು ಸಹಾಯಕ ಆಯುಕ್ತರಾಗಿದ್ದಾಗ ವರ್ಷಾನುಗಟ್ಟಲೆ ( 8-10)ವರ್ಷಗಳವರೆಗೂ ಕೊಳೆಯುತ್ತಿದ್ದ ಕೇಸ್ ಗಳನ್ನು ಯಾವುದೇ
ಅಪೇಕ್ಷೆ ಇಲ್ಲದೆ ತುರ್ತಾಗಿ ತೀರ್ಮಾನಿಸುತ್ತಿದ್ದ ಪರಿ, ರಾಜ್ಯದಲ್ಲೆ ಮೊದಲಾಗಿತ್ತು ಉನ್ನತ ಅಧಿಕಾರಿಗಳಿಂದ ತಮ್ಮ ಸೇವಾ ನಿಷ್ಠೆ ಮತ್ತು ಪ್ರಾಮಾಣಿಕತೆ ಕೆಲಸದ ದಕ್ಷತೆಗೆ ಪ್ರಶಂಸೆಯನ್ನು ಪಡೆದು ಸರ್ಕಾರ ದಿಂದ ಸೇವಾ ಸರ್ವೋತ್ತಮ ಪ್ರಶಸ್ತಿ ಸಮಾಜದ ವಿವಿಧ ಸಂಸ್ಥೆಗಳಿಂದ ನೂರಾರು ಸನ್ಮಾನ ಪ್ರಶಸ್ತಿಗಳನ್ನು ಅರ್ಹತೆಯ ಆದರದ ಮೇಲೆ ಪಡೆದ ಸಮಾಜಪರ ವ್ಯಕ್ತಿ
ಒಟ್ಟಾರೆ ಹೇಳುವುದಾದರೆ ಬಡವರ ನಿರ್ಗತಿಕರ ಪರ ಕಾನೂನಿನ ಪರ ಸರ್ಕಾರದ ಸದುದ್ದೇಶ ಪರ ಕೆಲಸ ನಿರ್ವಹಿಸಿದ ಅಪುರೂಪದಲ್ಲೇ ಅಪುರೂಪದ ಅಧಿಕಾರಿ ಡಾ. ಎಚ್ ಎಲ್ ನಾಗರಾಜು ರವರು.
ಡಾ. ಎಚ್ ಎಲ್ ನಾಗರಾಜ್ ಸರ್ ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಶ್ರೀ ಲಿಂಗಯ್ಯ ಮತ್ತು ಶ್ರೀಮತಿ ಗಂಗಮ್ಮ ಇವರ ಸುಪುತ್ರರಾದ ಡಾ. ಹೆಚ್.ಎಲ್.ನಾಗರಾಜ್‌ರವರು. ಶ್ರೀಯುತರು ಅರ್ಥಶಾಸ್ತ್ರದಲ್ಲಿ ಎಂ.ಎ., ಎಂ.ಫಿಲ್, ಪಿಹೆಚ್.ಡಿ ಪದವೀಧರರಾಗಿದ್ದಾರೆ. ಎರಡು ಸ್ನಾತಕೋತ್ತರ ಡಿಪ್ಲೋಮಾಗಳಲ್ಲಿ ತೇರ್ಗಡೆಯಾಗಿದ್ದಾರೆ. ೨೦೦೬ ರಲ್ಲಿ ಕೆ.ಎ.ಎಸ್.ಅಧಿಕಾರಿಯಾಗಿ ಆಯ್ಕೆಯಾಗಿ ಅನೇಕ ಸ್ಥಳಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಐದು ಉಪಯುಕ್ತ ಕೃತಿಗಳನ್ನು ಬರೆದು ಪ್ರಕಟಿಸುವ ಮೂಲಕ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ.
ರಾಜ್ಯ ಸರಕಾರದಿಂದ ಹಾಗು ಸಂಘ ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹಾಲಿ ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿ ಮತ್ತು ಹೆಚ್ಚುವರಿಯಾಗಿ ಮಂಡ್ಯ ಮೈ ಶುಗರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ಜನ ಮೆಚ್ಚುಗೆ ಪಡೆದಿದ್ದಾರೆ. ಸರಳತೆ, ಸಜ್ಜನಿಕೆ, ಕ್ರಿಯಾಶೀಲತೆ, ನಿಷ್ಕಂಳಕ ವ್ಯಕ್ತಿತ್ವ ಹೊಂದಿರುವ ಶ್ರೀಯುತರು ಶ್ರೀಮಠದ ಮೂಲಕ ನಾಡಿನ ಸೇವೆಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತಿರುವುದಕ್ಕೆ ಶುಭ ಹಾರೈಸುವ ನಾಡಿನ ಸಮಸ್ತ ಭಕ್ತ ವೃಂದ
What's Your Reaction?