ಕೃಷ್ಣರಾಜಪೇಟೆ ಪಟ್ಟಣದ ನೇಕಾರ ತೊಗಟವೀರ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು ಶ್ರದ್ದಾ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು

ಕೃಷ್ಣರಾಜಪೇಟೆ ಪಟ್ಟಣದ ನೇಕಾರ ತೊಗಟವೀರ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು  ಶ್ರದ್ದಾ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು

ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮಣ್ಣಿ ಕೆರೆಯಲ್ಲಿ ಕರಗವನ್ನು ಸ್ಥಾಪಿಸಿ ಬಾಲಕಿಯರ ತಲೆಯ ಮೇಲೆ ಕರಗವನ್ನು ಹೊರಿಸಿ ನಡೆಮುಡಿಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮಂಗಳ ವಾಧ್ಯಗಳು ಹಾಗೂ ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯೊಂದಿಗೆ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ರಾಮ ಮಂದಿರದ ಆವರಣಕ್ಕೆ ಕರಗದ ಕಳಸವನ್ನು ತಂದು ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ನೇಕಾರ ತೊಗಟವೀರ ಸಮಾಜದ ಮುಖಂಡ ಹಂಸ ರಮೇಶ್ ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ನೇತೃತ್ವ ವಹಿಸಿ ಮಾತನಾಡಿ ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಸಮಾಜದಲ್ಲಿ ಅತ್ಯಂತ ಹಿಂದುಳಿದಿರುವ ನೇಕಾರ ತೊಗಟವೀರ ಸಮಾಜದ ಬಂಧುಗಳು ಸಮಾಜದ ಎಲ್ಲಾ ಜಾತಿ ವರ್ಗಗಳ ಜನರೊಂದಿಗೆ ಅನ್ಯೋನ್ಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಶ್ರೀ ಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವ ತೊಗಟವೀರ ಸಮಾಜದ ಬಂಧುಗಳು ತಮ್ಮ ನೇಕಾರಿಕೆ ವೃತ್ತಿಯ ಜೊತೆಗೆ ವ್ಯಾಪಾರ ವ್ಯವಹಾರವನ್ನು ನಡೆಸಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸಮಾಜಮುಖಿಯಾಗಿ ಮುನ್ನಡೆದು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ರಮೇಶ್ ಅಭಿಮಾನದಿಂದ ಹೇಳಿದರು.

ಮೈಸೂರು ವಿಭಾಗದ ತೊಗಟವೀರ ಸಮಾಜದ ಅಧ್ಯಕ್ಷ ಎಂಜಿನಿಯರ್ ವೆಂಕಟೇಶ್, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಆರ್. ಪುಟ್ಟಸ್ವಾಮಿ, ಪುರಸಭೆ ಸದಸ್ಯೆ ಇಂದ್ರಾಣಿ ವಿಶ್ವನಾಥ್, ಪದ್ಮರಾಜು, ಪುರಸಭೆ ಮಾಜಿ ಅಧ್ಯಕ್ಷ ರಾಮಕೃಷ್ಣ ಮಾಸ್ಟರ್, ರಾಚಿ ನಂಜುಂಡಣ್ಣ, ಮೈಲಾರಿ ರವಿ, ಕ್ಯಾಂಟೀನ್ ರಾಮಣ್ಣ, ಅಂಗಡಿ ಲಕ್ಷ್ಮಣ, ಕೈಗೋನಹಳ್ಳಿ ಈರಪ್ಪಣ್ಣ, ಚಂದ್ರಕಲಾ ರಮೇಶ್,ಮೀಸೆ ರಮೇಶಣ್ಣ, ಮಲ್ಲಿಕಾರ್ಜುನ, ನಿರಂಜನ, ಮಧುಸೂದನ್, ಕ್ಯಾಂಟೀನ್ ವಾಸು ಸೇರಿದಂತೆ ಅಂಚನಹಳ್ಳಿ, ತಗಡೂರು, ತೆಂಡೆಕೆರೆ, ಹೊನ್ನಾವರ, ಮಾಳಗೂರು, ಸರಗೂರು, ಶ್ರೀರಂಗಪಟ್ಟಣ, ಪಾಂಡವಪುರ, ಉಂಡಿಗನಹಾಳು, ಹರವು ಅರಳಕುಪ್ಪೆ, ಕೈಗೋನಹಳ್ಳಿ, ಸಿಂಧಘಟ್ಟ ಗ್ರಾಮಗಳಿಂದ ಸಾವಿರಾರು ಜನರು ಕರಗ ಮಹೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕರಗ ಮಹೋತ್ಸವದ ಅಂಗವಾಗಿ ನಡೆದ ಉಚಿತ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow