ಪುರಸಭಾ ಪೌರ ಕಾರ್ಮಿಕರ ದರ್ಪ..?ಅಸಮಾಧಾನ ವ್ಯಕ್ತಪಡಿಸಿದ ಎಸ್.ಡಿ.ಎಂ.ಸಿ ಅಧ್ಯಕ್ಷ - ಲೋಕೇಶ್.ವಿ

ಪುರಸಭಾ ಪೌರ ಕಾರ್ಮಿಕರ ದರ್ಪ..?ಅಸಮಾಧಾನ ವ್ಯಕ್ತಪಡಿಸಿದ ಎಸ್.ಡಿ.ಎಂ.ಸಿ ಅಧ್ಯಕ್ಷ - ಲೋಕೇಶ್.ವಿ

ಕೆ.ಆರ್.ಪೇಟೆ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಬಳಿ ಅಕ್ಕ-ಪಕ್ಕದವರು ಕಸವನ್ನು ಹಾಕಿ ಕಸದ ರಾಶಿಯನ್ನಾಗಿ ಮಾಡಿದ್ದು ದಿನಾಂಕ .20.02.2025ರ ಗುರುವಾರ ನಮ್ಮ ಶಾಲೆಯಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದ್ದು ಶಾಲೆಗೆ ಸುತ್ತಮುತ್ತಲಿನ ಅಧಿಕಾರಿ ವರ್ಗದವರು. ಶಾಲೆಯ ಮಕ್ಕಳು ಭಾಗವಹಿಸುತ್ತಿದ್ದು

ಆಗಾಗಿ ಸ್ವಚ್ಛತೆಯ ದೃಷ್ಟಿಯಿಂದ ಪುರಸಭೆಗೆ ಸಂಬಂಧಿಸಿದಂತೆ ಪೌರ ಕಾರ್ಮಿಕರಾದ ಮುತ್ತು ರವರಿಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಲೋಕೇಶ್.ವಿ ರವರು ಸತತ ಎರಡು ದಿನಗಳಿಂದ ಪೋನ್ ಕರೆಯ ಮೂಲಕ ಶಾಲೆಯ ಕಾರ್ಯಕ್ರಮ ಇದೆ ಕಸವನ್ನು ತೆಗೆದುಕೊಂಡು ಹೋಗಲು ಸಹಕರಿಸುವಂತೆ ವಿನಯದಿಂದ ಕೇಳಿಕೊಂಡರೂ ಸಹ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ. ಶಾಲೆಯ ಮುಂಭಾಗದಲ್ಲಿರುವ ಕಸವನ್ನು ತೆಗೆಯಲು ಮೀನಾ-ಮೇಷ ಮಾಡುತ್ತಿರುವ ಪುರಸಭಾ ಪೌರ ಕಾರ್ಮಿಕರರು ಇನ್ನೂ ಜನಸಾಮಾನ್ಯರಿಗೆ ಹೇಗೆ ಸ್ವೀಕರಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ,ಇದಕ್ಕೆ

ಸಂಬಂಧಿಸಿದಂತೆ ಪುರಸಭಾ ಮುಖ್ಯಾಧಿಕಾರಿಗಳು,ಪುರಸಭಾ ಅಧ್ಯಕ್ಷರು ಹಾಗೂ ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ ರವರ ಗಮನಕ್ಕೆ ತರುವುದಾಗಿ ತಿಳಿಸಿ ಜೊತೆಗೆ ಪಟ್ಟಣದಲ್ಲಿರುವ ಪ್ರತಿಯೊಂದು ಶಾಲೆಯ ಮುಂಭಾಗದಲ್ಲಿರುವ ಕಸವನ್ನು ತೆಗೆಯಲು ಸೂಚಿಸಿ ಅಧಿಕಾರಿಯಂತೆ ವರ್ತಿಸುತ್ತಿರುವ ಮುತ್ತು ಎಂಬುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಲೋಕೇಶ್.ವಿ ಮಾಧ್ಯಮಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ,*ವರದಿ: ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow