ಡಾ, ಬಿ ಆರ್ ಅಂಬೇಡ್ಕರ್ ರವರ 68ನೇ ಪರಿನಿಬ್ಬಾಣ ದಿನ ಆಚರಣೆ

ಡಾ, ಬಿ ಆರ್ ಅಂಬೇಡ್ಕರ್ ರವರ 68ನೇ ಪರಿನಿಬ್ಬಾಣ ದಿನ ಆಚರಣೆ

*ಬಾಬಾ ಸಾಹೇಬ್ ಡಾಕ್ಟರ್ ಅಂಬೇಡ್ಕರ್ ರವರ ತತ್ವಗಳು ಎಂದೆಂದಿಗೂ ಪ್ರಸ್ತುತ ಯೋಗ ಗುರು ಲೋಕೇಶ ಗುರೂಜಿ*

ವಿಶ್ವ ಜ್ಞಾನಿ ಡಾಕ್ಟರ್ ಬಾಬಾ ಸಾಹೇಬರ ಬದುಕು ನಮಗೆ ಆದರ್ಶ, ಅವರ ಸಾಧನೆ ಅಮೋಘ ಈ ಬಯಲಲ್ಲಿ ಬಯಲಾದ ದಿನವಿದು, ಅವರ ಸಾಧನೆಯ ಹಾದಿಯಲ್ಲಿ ನಾವು ಸಾಗಿದರೆ ಮಾತ್ರ ಅವರಿಗೆ ನಾವು ಸಲ್ಲಿಸಬೇಕಾದ ನಿಜವಾದ ಗೌರವ ಎಂದು *ಬಸವ ಕಲ್ಯಾಣ ತಾಲೂಕಿನ ಬಸವ ಭಾರತಿ ಯೋಗ ಧಾಮದ ಪೂಜ್ಯ ಶ್ರೀ ಗೋರಟಾ ಲೋಕೇಶ ಗುರೂಜಿ ನುಡಿದರು*. ಬಹು ದೊಡ್ಡ ಕಾರಣವಿಟ್ಟುಕೊಂಡೇ ಬಾಬಾ ಸಾಹೇಬರು ಈ ಲೋಕಕ್ಕೆ ಬಂದಿದ್ದರು, ಅದರಂತೆ ಕಾರಣದಿಂದಲೇ ಕಾರ್ಯ ಮಾಡಿ ನಮಗೆ ಬಹುದೊಡ್ಡ ದಾರಿದೀಪವಾಗಿ ದಾರಿ ತೋರಿ ಈ ಲೋಕ ಬಿಟ್ಟು ತೆರಳಿದರು ಎಂದರು. ಅವರು ಈ ಲೋಕ ಬಿಟ್ಟು 68 ವರುಷಗಳಾಗಿವೆ,ಅವರ ಬದುಕು ಬರಹ ಎಂದೆಂದೂ ಪ್ರಸ್ತುತ ಎಂದು ನುಡಿದರು,ಶೋಷಿತರ ನಾಯಕರಷ್ಟೇ ಅಲ್ಲ, ಅಖಂಡ ಭಾರತೀಯರ ಧ್ವನಿ ಎಂದು ಲೋಕೇಶ ಗುರೂಜಿ ಬಣ್ಣಿಸಿದರು. 

*ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್* ರವರ 68 ನೇ

 *ಪರಿನಿಬ್ಬಾಣ ದಿನವನ್ನು* *ಹೌಸಿಂಗ್ ಬೋರ್ಡ್ ಬುದ್ಧ* *ಬಸವ ಅಂಬೇಡ್ಕರ್* *ಯೋಗ ಕೇಂದ್ರದ ಯೋಗ ಗುರು*

*ಎಸ್.ಎಂ. *ಅಲ್ಲಮಪ್ರಭುರವರ* ನೇತೃತ್ವದಲ್ಲಿ, ನಡೆದ ಕಾರ್ಯಕ್ರಮದಲ್ಲಿ ಗುರೂಜಿ ಮಾತನಾಡಿದರು.ಈ ಸಮಯದಲ್ಲಿ *ಯೋಗ ಗುರು ಎಸ್.ಎಂ. ಅಲ್ಲಮ ಪ್ರಭು ಮಾತನಾಡಿ ಅಸಮಾನತೆಯಲ್ಲಿ ಬೇಸತ್ತ ಬಾಬಾ ಸಾಹೇಬರು ನಿರಂತರ ಅಧ್ಯಯನ ಧರ್ಮಗಳ ತೌಲನಿಕ ಅಧ್ಯಯನ ಮಾಡಿ ಭಾರತೀಯರಿಗೆ ಬಹುದೊಡ್ಡ ಕ್ರಾಂತಿಯ* ಮೂಲಕ ಹೊಸ ದಾರಿದೀಪವಾದ ಸರ್ವ ಶ್ರೇಷ್ಠರು ಎಂದುನುಡಿದರು. *ಮನುಷ್ಯನ ಇಂದಿನ ಆಯುಷ್ಯ ತುಂಬಾ ಕಡಿಮೆಯಿದ್ದು ಬುದ್ದ ಬಸವ ಅಂಬೇಡ್ಕರ್ ರವರಂತೆ,ಶಿಕ್ಷಣ ಸಂಘಟನೆ ಹೋರಾಟದ ಜೊತೆಯಲ್ಲಿ ಯೋಗ ಧ್ಯಾನ ನಮ್ಮ ಇಂದಿನ ಅಗತ್ಯವಿದೆ ಎಂದುನುಡಿದರು*.

ಕಾರ್ಯಕ್ರಮದಲ್ಲಿಇಂಜಿನಿಯರ್ ತಿಮ್ಮಪ್ಪ, ಜೆಸಿಬಿ ಆನಂದ, ಕೆಇಬಿ ಆನಂದ,ಶಿಕ್ಷಕ ವಸಂತರಾಜ್ ಶ್ರೀಮತಿ ಪವಿತ್ರಾ ಪ್ರಕಾಶ್, ಸುಲೋಚನಾ ರವೀಂದ್ರ, ನೀತು ರಂಗನಾಥ್, ರುಕ್ಮಿಣಿ ಧನಂಜಯ, ಶಿಕ್ಷಕಿಯರಾದ ಯಮುನಾಸೂರ್ಯಪ್ರಕಾಶ್

ಪವಿತ್ರಾ ಚನ್ನೇಗೌಡ, ವಾಣಿ ರವಿಕುಮಾರ್, ರಾಧಾ ರವಿ ಆಚಾರ್,ಪೋಲಿಸ್ ಇಲಾಖೆ ವೈರಮುಡಿ, ಕರುಣಾ ಕೊಣನೂರು, ಉಪನ್ಯಾಸಕ ಶ್ರೀಧರ್, ಶಿಕ್ಷಣ ಸಂಯೋಜಕ ಹಾಗೂ ಉಪಾಸಕ ವೀರಭದ್ರಯ್ಯ, ಮುಂತಾದವರು ಉಪಸ್ಥಿತರಿದ್ದರು..

*ವರದಿ. ರಾಜು ಜಿ ಪಿ ಕಿಕ್ಕೇರಿ ಕೆ.ಆರ್.ಪೇಟೆ*

What's Your Reaction?

like

dislike

love

funny

angry

sad

wow