ಕೃಷ್ಣರಾಜಪೇಟೆ ತಾಲೂಕು ವೀರಶೈವ ಮಹಾಸಭಾ ಚುನಾವಣೆ ಅಕ್ರಮ ವೀರಶೈವ ಮಹಾಸಭಾ ನೂತನ ಅಧ್ಯಕ್ಷ ವಿಜೇಂದ್ರ ಹಾಗೂ ಚುನಾವಣಾಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೆ ಆರ್ ಪೇಟೆ ಟೌನ್ ಠಾಣೆಯಲ್ಲಿ ಪೊಲೀಸರಲ್ಲಿ ದೂರು ನೀಡಿ ವಕೀಲ ವಿ ಎಸ್ ಧನಂಜಯ ಆಗ್ರಹ*.

ಕೃಷ್ಣರಾಜಪೇಟೆ ತಾಲೂಕು ವೀರಶೈವ ಮಹಾಸಭಾ ಚುನಾವಣೆ ಅಕ್ರಮ ವೀರಶೈವ ಮಹಾಸಭಾ ನೂತನ ಅಧ್ಯಕ್ಷ ವಿಜೇಂದ್ರ ಹಾಗೂ ಚುನಾವಣಾಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೆ ಆರ್ ಪೇಟೆ ಟೌನ್ ಠಾಣೆಯಲ್ಲಿ ಪೊಲೀಸರಲ್ಲಿ ದೂರು ನೀಡಿ ವಕೀಲ ವಿ ಎಸ್  ಧನಂಜಯ ಆಗ್ರಹ*.

ಕೃಷ್ಣರಾಜಪೇಟೆ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ವ್ಯವಸ್ಥಿತ ಪಿತೂರಿ ನಡೆಸಿ ಕಳ್ಳಮತಗಳು ಸೇರಿದಂತೆ ಸತ್ತಿರುವ ನೂರಾರು ವ್ಯಕ್ತಿಗಳ ಹೆಸರಿನಲ್ಲಿರುವ ಮತ ಚಲಾಯಿಸಿ ಅಡ್ಡ ದಾರಿಯ ಮೂಲಕ ಗೆಲುವು ಸಾಧಿಸಿರುವ ತಾಲೂಕು ಘಟಕದ ಅಧ್ಯಕ್ಷ ವಿಜೇಂದ್ರ ಹಾಗೂ ಚುನಾವಣಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವೀರಶೈವ ಮಹಾಸಭಾದ ನಿರ್ಗಮಿತ ಅಧ್ಯಕ್ಷ ವಿ.ಎಸ್.ಧನಂಜಯ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ ಅವರಲ್ಲಿ ಮನವಿ ಮಾಡಿದರು.

ವೀರಶೈವ ಲಿಂಗಾಯತ ಮಹಾಸಭಾದ ಚುನಾವಣೆಯಲ್ಲಿ ಶತಾಯ ಗತಾಯ ನನ್ನನ್ನು ಸೋಲಿಸಲೇಬೇಕೆಂದು ಸಮಾಜದ ಮುಖಂಡರು ನನ್ನ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ನಡೆಸಿ, ಕಳ್ಳ ಓಟಿನ ಮೂಲಕ ಅಕ್ರಮ ನಡೆಸಿ, ಹಣವನ್ನು ಹಂಚಿ ಏಕಾಂಗಿಯಾಗಿ ಹೋರಾಟ ನಡೆಸಿದ್ದ ನನ್ನನ್ನು ಸೋಲಿಸಿ ಸಂಭ್ರಮಿಸಿದ್ದರು. ಆದರೆ 

ಚುನಾವಣೆಯಲ್ಲಿ ನಡೆದಿರುವುದೇ ಬೇರೆಯಾಗಿದ್ದು ವಕೀಲನಾಗಿ ಸಮಾಜದ ಸಂಘಟನೆಗೆ ನನ್ನ ಸ್ವಂತ ಹಣ ಖರ್ಚು ಮಾಡಿಕೊಂಡು ನನ್ನನ್ನೇ ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡು ಕೆಲಸ ಮಾಡುತ್ತಿದ್ದ ಸಿಂಹವನ್ನು ನೂರಾರು ಗುಳ್ಳೆನರಿಗಳು ಒಂದುಗೂಡಿ ಕುತಂತ್ರ ಹಾಗೂ ಮೋಸದಿಂದ ನನ್ನನ್ನು ಸೋಲಿಸಿ ಸಂತೋಷ ಪಟ್ಟಿರುವುದು ವಿಷಾದನೀಯ ಸಂಗತಿಯಾಗಿದೆ. 90 ಕ್ಕೂ ಹೆಚ್ಚಿನ ಮೃತರಾಗಿ

ಒಂದೆರಡು ವರ್ಷಗಳೇ ಕಳೆದಿರುವ ಸತ್ತ ವ್ಯಕ್ತಿಗಳ ಹೆಸರಿನ ಮತಗಳು ನನ್ನ ವಿರುದ್ಧವಾಗಿ ಚಲಾವಣೆಯಾ ಗಿವೆ. ವ್ಯವಸ್ಥಿತ ಒಳಸಂಚು ನಡೆದಿರುವುದು ಧಾಖಲೆಗಳ ಸಮೇತವಾಗಿ ಬಯಲಾಗಿದೆ. ಆದ್ದರಿಂದ ಪರಸ್ಪರ ಶಾಮಿಲಾಗಿ ನನ್ನ ಸೋಲಿಗೆ ಕಾರಣರಾಗಿರುವ

ಚುನಾವಣಾಧಿಕಾರಿ ಹಾಗೂ ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ವಿಜೇಂದ್ರ ವಿರುದ್ದ ಮುಂಬರುವ ಸೋಮವಾರದ ಒಳಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮೈಸೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ದೂರು ಸಲ್ಲಿಸುವ ಜೊತೆಗೆ ಅಕ್ರಮವಾಗಿ ಚುನಾವಣೆ ನಡೆಸಿ ಒಳಸಂಚಿನ ಮೂಲಕ ಗೆಲುವು ಸಾಧಿಸಿರುವ ವಿಜೇಂದ್ರ ನೇತೃತ್ವದ ಆಡಳಿತ ಮಂಡಳಿಯನ್ನು ವಜಾ ಮಾಡುವವರೆಗೂ ನಿರಂತರವಾಗಿ ಹೋರಾಟ ನಡೆಸುವುದಾಗಿ ಧನಂಜಯ ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

 

What's Your Reaction?

like

dislike

love

funny

angry

sad

wow