*ಕಾವೇರಿಗಾಗಿ ಕಾವೇರಿದ ಹೋರಾಟದಲ್ಲಿ ಮಲೆನಾಡು ರಕ್ಷಣಾ ಸೇನೆ...!*

*ಕಾವೇರಿಗಾಗಿ ಕಾವೇರಿದ ಹೋರಾಟದಲ್ಲಿ ಮಲೆನಾಡು ರಕ್ಷಣಾ ಸೇನೆ...!*

*ಕಾವೇರಿಗಾಗಿ ಕಾವೇರಿದ ಹೋರಾಟದಲ್ಲಿ ಮಲೆನಾಡು ರಕ್ಷಣಾ ಸೇನೆ...!*

ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಕಾವೇರಿ ನೀರು ತಮಿಳುನಾಡಿಗೆ ಬಿಡುತ್ತಿರುವ ವಿಚಾರದಲ್ಲಿ ಈಗಾಗಲೆ ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು ರಾಜ್ಯದ ಹಲವು ನದಿಗಳಲ್ಲಿ ಮಳೆಯ ಕೊರತೆಯಿಂದ ನೀರಲ್ಲದ ಪರಿಸ್ಥಿತಿಯಲ್ಲಿ ರೈತರಿರುವ ಸಂದರ್ಭದಲ್ಲಿ 

ಈಗಾಗಲೇ ಮಳೆಯ ಅಭಾವದಿಂದ ರಾಜ್ಯದ ಹಲವು ನದಿಗಳಲ್ಲಿ ನೀರಿಲ್ಲದೆ ಬರದ ಛಾಯೆ ಮೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕರುನಾಡಿನ ಜೀವನದಿ ಕಾವೇರಿಯಲ್ಲಿ ನಮ್ಮ ರಾಜ್ಯದ ಜನರಿಗೇ ಕುಡಿಯಲು ನೀರಿಲ್ಲ. ಅದರಲ್ಲೂ ಪಕ್ಕದ ರಾಜ್ಯವಾದ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನೀತಿ ಕನ್ನಡ ನಾಡಿನ ಸಮಸ್ತ ರೈತ ಬಾಂಧವರಿಗೆ ಹಾಗೂ ಜನಸಾಮಾನ್ಯರಿಗೆ ಬೇಸರ ತಂದಿದೆ ಹಾಗೂ ಖಂಡನಾರ್ಹ.

         ಈ ನೀತಿಯನ್ನು ಖಂಡಿಸಿ ಮಲೆನಾಡು ರಕ್ಷಣಾ ಸೇನೆ ಇಂದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದ ಬೃಹತ್ ಪ್ರತಿಭಟನಾ ರ್ಯಾಲಿ ಯಲ್ಲಿ ಭಾಗವಹಿಸಿ ಜೀವನದಿ ಕಾವೇರಿಯ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಮುಂದಿನ ದಿನದಲ್ಲಿ ನೀರಿನ ಅಭಾವದಿಂದ ನಮ್ಮ ನಾಡಿನ ರೈತರು ಸಂಕಷ್ಟಕ್ಕೆ ಎದುರಾದರೆ ಅಥವಾ ರೈತರ ಆತ್ಮಹತ್ಯೆ ಪ್ರಕರಣಗಳು ಆದರೆ ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಮಲೆನಾಡು ರಕ್ಷಣಾ 

ಸೇನೆಯ ಸಂಸ್ಥಾಪಕ ರಾಜ್ಯದ್ಯಕ್ಷ ಸಾಗರ್ ಜಾನೆಕೆರೆ ಹಾಗು ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ , ರಾಜ್ಯ ಕಾರ್ಯದರ್ಶಿ ಅಶೋಕ್ ರವರು, ರಾಜ್ಯ ಉಸ್ತುವಾರಿ ವಸಂತ್ ಕುಮಾರ್ ರವರು ಮತ್ತು ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಉಪಾಧ್ಯಕ್ಷರಾದ ತೇಜೇಶ್ ಗೌಡ ಸುಳ್ಳಕ್ಕಿ ರವರು ರಾಜ್ಯದ ಹಲರಾಜ್ಯ ಸಂಘಟನೆಗಳು, ರಾಜ್ಯಾಧ್ಯಕ್ಷರುಗಳು ಮತ್ತು ಹಲವು ಕನ್ನಡ ಪರ ಹೋರಾಟಗಾರರೊಂದಿಗೆ ಕಾವೇರಿಗಾಗಿ ಕೈಜೋಡಿಸಿದರು.

*ಕನ್ನಡನಾಡಿನ ಜೀವನದಿ ಕಾವೇರಿಗಾಗಿ ಜೀವ ಬಿಟ್ಟೆವು ಆದರೆ ನೀರು ಬಿಡೆವು*

What's Your Reaction?

like

dislike

love

funny

angry

sad

wow