ಏಪ್ರಿಲ್ 6, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನಿಗೆ ಮಹತ್ವದ ದಿನ.ಇದು ನಮ್ಮ ಪಕ್ಷದ ಸಂಸ್ಥಾಪನಾ ದಿನ. 1980, ಏಪ್ರಿಲ್ 6 ಎಂದು ಜಿಲ್ಲಾ ಮಂಡಲ ಅಧ್ಯಕ್ಷರಾದ ಡಾ. ಇಂದ್ರೇಶ್ ಮಾತನಾಡಿ

ಏಪ್ರಿಲ್ 6, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನಿಗೆ ಮಹತ್ವದ ದಿನ.ಇದು ನಮ್ಮ ಪಕ್ಷದ ಸಂಸ್ಥಾಪನಾ ದಿನ. 1980, ಏಪ್ರಿಲ್ 6 ಎಂದು ಜಿಲ್ಲಾ ಮಂಡಲ ಅಧ್ಯಕ್ಷರಾದ ಡಾ. ಇಂದ್ರೇಶ್  ಮಾತನಾಡಿ

 

ಕೆ ಆರ್ ಪೇಟೆ ಬಿಜೆಪಿ ಕಚೇರಿಯಲ್ಲಿ ನಡೆದ ನಮ್ಮ ಭಾರತೀಯ ಜನತಾ ಪಕ್ಷದ ಸಂಸ್ಥಾಪನ ದಿನ ಆಚರಣೆಯನ್ನು ಭಾರತಾಂಬೆ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪುಷ್ಪಾರ್ಚನೆ ಮಾಡಿ ಮಾತನಾಡಿ.

 ಅಂದಿನಿಂದ ಇಂದಿನವರೆಗೆ ಅದೆಷ್ಟೋ ಕಾರ್ಯಕರ್ತರು ತಮ್ಮ

ತನು-ಮನ-ಧನವನ್ನು ಅರ್ಪಿಸುವ ಮೂಲಕ ಇಂದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನೊಳಗೊಂಡ, ದೇಶದಲ್ಲಿ ಅತಿ ಹೆಚ್ಚು

ಸಂಸದರನ್ನೊಳಗೊಂಡ, ದೇಶದಲ್ಲಿ ಅತಿ ಹೆಚ್ಚು ಶಾಸಕರನ್ನೊಳಗೊಂಡ ಪಕ್ಷವನ್ನಾಗಿ ಬಿಜೆಪಿಯನ್ನು ಬೆಳೆಸಿದ್ದಾರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾಗಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರಿಗೆ ಮತ ನೀಡುವ ಮೂಲಕ ಇತರರಿಗೂ ಮತ ಹಾಕುವಂತೆ ಮನವೊಲಿಸಿ ಕೇಂದ್ರ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ತಾಲೂಕು ಅಧ್ಯಕ್ಷರಾದ ಸಾರಂಗಿ ನಾಗಣ್ಣ ಮಾತನಾಡಿ 

ಸ್ವಾತಂತ್ರ್ಯ ಬಂದ ನಂತರ ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ನಮ್ಮ ಪಕ್ಷದಷ್ಟು ಕಷ್ಟ, ಅವಮಾನ ಇನ್ಯಾವ ಪಕ್ಷವೂ ಎದುರಿಸಿಲ್ಲ.

ಪಕ್ಷ ಸ್ಥಾಪನೆಯಾದ ಇಪ್ಪತ್ತು ತಿಂಗಳಲ್ಲೇ ನಮ್ಮ ಸಂಸ್ಥಾಪಕ ಅಧ್ಯಕ್ಷ, ಅಂದಿನ ದಿನಗಳ ಅತ್ಯಂತ ಎತ್ತರದ ನಾಯಕ ಡಾ.

ಶಾಮಪ್ರಸಾದ್‌ ಮುಖರ್ಜಿಯವರು ಕಾಶ್ಮೀರದ ಸೆರವಾಸದಲ್ಲಿದ್ದಾಗ ನಿಗೂಢ ರೀತಿಯಲ್ಲಿ ಮರಣ ಹೊಂದಿದರು. ಹದಿನೈದು

ವರ್ಷಗಳ ಕಾಲ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶ್ರಮಿಸಿ ಪಕ್ಷ ಬೆಳೆಯಲು ದೊಡ್ಡ ಯೋಗದಾನ ನೀಡಿ 1967 ರ ಡಿಸೆಂಬರ್ ನಲ್ಲಿ

ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡ ಪಂ.ದೀನದಯಾಳ್ ಉಪಾಧ್ಯಾಯರನ್ನು ಕೇವಲ ಎರಡು ತಿಂಗಳೊಳಗೇ ಉ.ಪ್ರದೇಶದ

ಮೊಗಲಸರಾಯಿ ರೈಲ್ವೇ ನಿಲ್ದಾಣದ ಬಳಿ ನಿಗೂಡ ರೀತಿಯಲ್ಲಿ ಕಳೆದುಕೊಂಡೆವು. ತುರ್ತು ಪರಿಸ್ಥಿತಿ ಸಮಯದಲ್ಲಿ ಅತ್ಯಂತ ಹೆಚ್ಚಿನ

ರೀತಿಯ ನೋವು, ಕಷ್ಟ ಅನುಭವಿಸಿದ್ದು ನಮ್ಮ ಪಕ್ಷ. ನಂತರ "ದ್ವಿಸದಸ್ಯತ್ವ" ಹೆಸರನಲ್ಲಿ ಜನತಾ ಪಕ್ಷ ತ್ಯಜಿಸಬೇಕಾಗಿ ಬಂದು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗಿನ ನಮ್ಮ ಸಂಬಂಧ ಮುಖ್ಯವೆಂದು ತೋರಿಸಿ ಭಾರತೀಯ ಜನತಾ ಪಕ್ಷವನ್ನು

ಪ್ರಾರಂಭಿಸಲಾಯಿತು. ಈ ಬಾರಿ ಮಂಡ್ಯ ಜಿಲ್ಲಾ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರಿಗೆ ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸಿ ಮತ್ತೊಮ್ಮೆ ಮೂರನೇ ಬಾರಿ ಪ್ರಧಾನಿಯಾಗಿ ನಮ್ಮ ದೇಶವನ್ನು ಸುರಕ್ಷಿತವಾಗಿ ರಕ್ಷಿಸಿ ಅಭಿವೃದ್ಧಿಪಡಿಸಲು ತಾವೆಲ್ಲರೂ ಮತವನ್ನು ನೀಡುವ ಮೂಲಕ ಮತ ಹಾಕಿಸಿ 2 ಲಕ್ಷಕ್ಕೂ ಅಧಿಕವಾಗಿ ಬಹುಮತಗಳ ಅಂತರದಿಂದ ಗೆಲ್ಲಲು ಬಿಜೆಪಿಯ ಎಲ್ಲ ಮಂಡಲ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಕಾರ್ಯಕರ್ತರು ಮುಖಂಡರು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಂಡಲದ ಅಧ್ಯಕ್ಷರಾದ ಡಾ. ಇಂದ್ರೇಶ್ ರವರು, ಜಿಲ್ಲಾ ಪ್ರಭಾರಿ ಕಾಂತರಾಜ್, ಜಿಲ್ಲಾ ಸಹ ಪ್ರಭಾರಿ ಸಿದ್ದರಾಜ್, ಕೆ ಆರ್ ಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷರಾದ ಸಾರಂಗಿ ನಾಗಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಹಾಗೂ ಸಿಂಗನಹಳ್ಳಿ ರವಿ, ಜಿಲ್ಲಾ ಪ್ರಕೋಶದ ಉಪಾಧ್ಯಕ್ಷ ಎ ಜಿ ಪರಮೇಶ್, ಬಿಜೆಪಿ ರಾಜ್ಯ ಎಸ್ ಟಿ ಕಾರ್ಯಕಾರಿ ಮಂಡಳಿಯ ಸದಸ್ಯರು ಮಹೇಶ್ ನಾಯಕ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ವಾಸು, ಜಿಲ್ಲಾ ರೈತ ಮೋರ್ಚ್ ಕಾರ್ಯದರ್ಶಿ ರಂಗೇಗೌಡ, ಎಸ್ ಸಿ ಜಿಲ್ಲಾ ಕಾರ್ಯದರ್ಶಿ ರವಿ ಶಿವಕುಮಾರ್, ರೈತ ಮೋರ್ಚಾದ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಭರತ್ ಜಿ,ತಾಲೂಕು ಮಹಿಳಾ ಅಧ್ಯಕ್ಷ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ಪುಷ್ಪ ರಮೇಶ್, ಜಿಲ್ಲಾ ಉಪಾಧ್ಯಕ್ಷೆ ಶೃತಿ,ನಗರ ಘಟಕ ಮಹಿಳಾ ಅಧ್ಯಕ್ಷೆ ಚಂದ್ರಕಲಾ, ಬಿಜೆಪಿ ತಾಲೂಕು ಮಾಜಿ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ,ತಾಲೂಕು ಉಪಾಧ್ಯಕ್ಷ ನವೀನ್ ಗೋವಿಂದನಹಳ್ಳಿ ಲೋಕೇಶ್, ಎಸ್ ಟಿ ಮೋರ್ಚ ತಾಲೂಕು ಅಧ್ಯಕ್ಷರಾದ ರಾಜು ಜಿ ಪಿ, ನಗರ ಘಟಕ ಅಧ್ಯಕ್ಷ ಮಂಜುನಾಥ್, ಮಾಧ್ಯಮ ಪ್ರಮುಖ ಬಿಕೆ ಮಧುಸೂದನ್, ತಾಲೂಕು ಯುವ ಘಟಕದ ಅಧ್ಯಕ್ಷ ರಾಜು, ಎಸ ಸಿ ಮೋರ್ಚಾ ತಾಲೂಕು ಅಧ್ಯಕ್ಷರಾದ ಯಲಕಪ್ಪ, ಎಸ್ ಟಿ ಮೊರ್ಚ್ ರಾಜ್ಯ ಕಾರ್ಯಕಾರಿ ಮಂಡಲದ ಮಾಜಿ ಸದಸ್ಯರು ಜಗದೀಶ್ ಆರ್, ಎಸ್ ಟಿ ಮೋರ್ಚ್ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಪ್ಪಾಜಿ, ತಾಲೂಕು ಮಂಡಲ ಹೋಬಳಿ ಮಂಡಲ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರುಗಳು ಪದಾಧಿಕಾರಿಗಳು ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆ

ರ್ ಪೇಟೆ*

What's Your Reaction?

like

dislike

love

funny

angry

sad

wow