ಕಿಡಿಗೇಡಿಗಳಿಂದ ಶ್ರೀ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ : ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ*

ಕಿಡಿಗೇಡಿಗಳಿಂದ ಶ್ರೀ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ : ದುಷ್ಕರ್ಮಿಗಳ ವಿರುದ್ಧ ಕಠಿಣ  ಕ್ರಮಕ್ಕೆ ಗ್ರಾಮಸ್ಥರ ಆಗ್ರಹ*

ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬಿಕನಹಳ್ಳಿ ಗ್ರಾಮದ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಯುವಕರು ಮತ್ತು ಗ್ರಾಮಸ್ಥರ ಸಹಕಾರದಿಂದ ದಿನಾಂಕ 18-6-2023 ರಂದು ಬಿಡದಿಯ ನುರಿತ ಶಿಲ್ಪಿಯಿಂದ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಶ್ರೀ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ಕತ್ತಿ.ಕೈ.ಕಾಲು ಸೇರಿದಂತೆ ವಿವಿಧ ಭಾಗದಲ್ಲಿ ಹಾನಿಗೊಳಿಸಿ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿರುವ ಘಟನೆ ಜರುಗಿದೆ. 

ಘಟನೆಯ ಕುರಿತು ಮಾತನಾಡಿದ ಗ್ರಾಮದ ಮುಖಂಡ ಬಿಕನಹಳ್ಳಿ ಗ್ರಾಮದ ಹಿರೇಗೌಡ ಸರ್ವ ಸಮುದಾಯ ನಾಯಕ ಮತ್ತು ಸ್ವತಂತ್ರಕ್ಕಾಗಿ ಹೋರಾಡಿದ ದೇಶಭಕ್ತ ಶ್ರೀ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ದೂರ ದೃಷ್ಟಿಯಿಂದ ಅವರ ಪ್ರತಿಮೆಯನ್ನು ಗ್ರಾಮಸ್ಥರ ಸಹಕಾರದಿಂದ ನಮ್ಮ ಯುವಕರು ನಮ್ಮ ಗ್ರಾಮದಲ್ಲಿ ಅದ್ದೂರಿಯಾಗಿ ಒಂದು ವರ್ಷದ ಹಿಂದೆ ಅಷ್ಟೇ ನಮ್ಮ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಶ್ರೀ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಯಾರೋ ಕಿಡಿಗೇರಿಗಳು ತಡರಾತ್ರಿ ರಾಯಣ್ಣನ ಕತ್ತಿ ಮತ್ತು ಕಾಲು. ಕೈ ಭಾಗಕ್ಕೆ ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ ದೇಶಕ್ಕಾಗಿ ಬಲಿದಾನವಾದ ಮಹನೀಯರ ಮೇಲೆ ವಿಕೃತಿ ಮೆರೆದಿರುವ ದುಷ್ಕರ್ಮಿಗಳನ್ನ ಸರ್ಕಾರ ಶೀಘ್ರವೇ ಬಂಧಿಸಬೇಕು. ಈ ಮಹನೀಯರು ಒಂದು ಸಮುದಾಯಕ್ಕೆ ಸೀಮಿತವಲ್ಲ ಇವರ ತತ್ವ ಆದರ್ಶ ಹೋರಾಟ ಹಾದಿಗಳ ಮೂಲಕ ಸರ್ವ ಸಮುದಾಯದ ಜನರ ಮನದಾಂಗಲದಲ್ಲಿ ನೆಲೆಸಿದ್ದಾರೆ. ಇಂತಹ ಮಹನೀಯರಿಗೆ ರಾಜ್ಯದಲ್ಲಿ ಹಲವು ಕಡೆ ಕಿಡಿಗೇಡಿಗಳು ಅವಮಾನಗೊಳಿಸಿದ್ದಾರೆ ಆ ಸಂದರ್ಭದಲ್ಲಿ ಘಟನೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಿದರೆ ನಮ್ಮ ಗ್ರಾಮದಲ್ಲಿ ಈ ಘಟನೆ ಜರುಗುತ್ತಿರಲಿಲ್ಲ ಈಗಲೂ ಕಾಲ ಮಿಂಚಿಲ್ಲ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರತಿಮೆ ಮುಂದೆ ನಮ್ಮ ಗ್ರಾಮಸ್ಥರು ಮತ್ತು ರಾಜ್ಯದ ರಾಯಣ್ಣನ ಅಭಿಮಾನಿಗಳು ಉಗ್ರ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿ. ದುಷ್ಕರ್ಮಿಗಳನ್ನ ಬಂಧಿಸಬೇಕು ಎಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಬಿಕನಹಳ್ಳಿ ಗ್ರಾಮಸ್ಥರು ಹಾಗೂ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಯುವಕರು ಸೇರಿದಂತೆ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow