ನಮ್ಮ ನಾಯಕ ಸಮಾಜದ ಮೇಲೆ ನಿರಂತರವಾಗಿ ಮೈಸೂರು ಜಿಲ್ಲೆಯಲ್ಲಿ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದರು ಜಿಲ್ಲಾಡಳಿತ ರಕ್ಷಣೆ ನೀಡಲು ವಿಫಲವಾಗಿದೆ
*ನಂಜನಗೂಡು ತಾಲ್ಲೂಕಿನ ತಾಯೂರು* ಗ್ರಾಮದಲ್ಲಿ ಅಕ್ಕ-ಪಕ್ಕ ಗ್ರಾಮದ ಅನ್ಯ ಸಮಾಜದ ಯುವಕರು ತನ್ನ ಸ್ನೇಹಿತನ ಹುಟ್ಟು ಹಬ್ಬ ಮಾಡಿ ಮೊಜುಮಸ್ತಿ ಮಾಡುವಾಗ ತಾವೇ ಗಲಾಟೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದನ್ನು ಪ್ರಶ್ನಿಸಿದ ನಾಯಕ ಸಮಾಜದ ಯುವಕನ ಮೇಲೆ ಹಲ್ಲೆ ನಡೆಸುತ್ತಿದ್ದಾಗ *ತಾಯೂರು ಗ್ರಾಮದ ಯಜಮಾನರಾದ ರಾಜಣ್ಣ ಅವರು ಗಲಾಟೆ ಬಿಡಿಸಿ ಅನ್ಯ ಸಮಾಜದ ಯುವಕರಿಗೆ ಬುದ್ದಿವಾದ ಹೇಳಿದ ಹಿನ್ನಲೆಯಲ್ಲಿ* ಅದೇ ದಿನ ಮೈಸೂರಿನ ಕಡೆಗೆ ಬೈಕ್ ನಲ್ಲಿ ತಾಯೂರು ಮತ್ತು ಕುಪ್ಪಗಾಲ ಮಾರ್ಗ ಮದ್ಯೆ ಅನ್ಯ ಸಮಾಜದ ದೊಡ್ಡ ಯುವಕರ ಗುಂಪು ಅಡ್ಡಗಟ್ಟಿ ದೊಣ್ಣೆ ಮತ್ತು ಕಬ್ಬಿಣದ ರಾಡ್ ನಿಂದ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಗಾಯಗೊಂಡ್ಡಿದ ತಾಯೂರು ನಾಯಕ ಸಮಾಜದ ಯಜಮಾನರಾದ ರಾಜಣ್ಣ ಅವರನ್ನು ಜೆಎಸ್ಎಸ್ ಆಸ್ಪತ್ರೆ ಸೇರಿಸಿ ತೀರ್ವ ಘಟಕ ಐಸಿಯು ನಲ್ಲಿ ಚಿಕಿತ್ಸೆ ನೀಡಿ ಇಂದು ಸ್ವಲ್ಪ ಪ್ರಜ್ಞೆ ಬಂದ ಮೇರೆಗೆ ಸಾಮಾನ್ಯ ವಾರ್ಡ್ ಬದಲಾವಣೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.
*ಇಂದು ಜೆಎಸ್ಎಸ್ ಆಸ್ಪತ್ರೆಗೆ ಬೇಟಿ ನೀಡಿದ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು* ಅವರು ಹಲ್ಲೆಗೊಳಗಾದ ಗಾಯಾಳು ರಾಜಣ್ಣ ಅವರ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ದೈರ್ಯ ಹೇಳಿ ಆರೋಪಿಗಳಿಗೆ ಕಾನೂನಾತ್ಮಕ ಶಿಕ್ಷೆ ಆಗುವರೆಗೂ ನಮ್ಮ ಸಂಘ ನಿಮ್ಮ ಕುಟುಂಬದ ಜೊತೆ ಇರುತ್ತದೆ ಎಂದು ದೈರ್ಯ ತುಂಬಿದರು.
ಈ ವಿಚಾರ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಘಟನೆ ನಡೆಸು ಎರಡು ದಿನ ಆದರೂ ಕೇಸು ದಾಖಲಿಸಲು ವಿಳಂಬ ಮಾಡಿರುವ ವಿಚಾರವಾಗಿ ಗಾಯಳು ರಾಜಣ್ಣನ ಕುಟುಂಬದವರು *ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಸಂಘಟನೆ ಗಮನಕ್ಕೆ ತಂದಾಗ ಬಿಳಿಗೆರೆಯ ಪೊಲೀಸ್ ಠಾಣೆಯ ಅಧಿಕಾರಿಗಳ ಜೊತೆ ಮಾತನಾಡಿ ಮಾರಣಾಂತಿಕ ಹಲ್ಲೆ ಆಗಿದ್ದರು ಆರೋಪಿಗಳ ವಿರುದ್ಧ ದೂರು ದಾಖಲಿಸದೆ ನಿರ್ಲಕ್ಷ್ಯ ಮತ್ತು ತಾರತಮ್ಯ ದೊರಣೆ ಅನುಸರಿಸಿರುವ ನಿಮ್ಮ ವಿರುದ್ಧ ಎಸ್ಪಿಯವರಿಗೆ ದೂರು ನೀಡಿ ಹೋರಾಟ ಮಾಡುವುದಾಗಿ ತಿಳಿದ ಮೇರೆಗೆ ಆರೋಪಿಗಳ ವಿರುದ್ಧ FIR ಮಾಡಿದ್ದಾರೆ*.
ನಮ್ಮ ನಾಯಕ ಸಮಾಜದ ಮೇಲೆ ನಿರಂತರವಾಗಿ *ಮೈಸೂರು ಜಿಲ್ಲೆಯಲ್ಲಿ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದರು ಜಿಲ್ಲಾಡಳಿತ ರಕ್ಷಣೆ ನೀಡಲು ವಿಫಲವಾಗಿದೆ*.
ಇದರ ವಿರುದ್ಧ ನಮ್ಮ ಸಮಾಜ ಎಚ್ಚೆತ್ತುಕೊಂಡು ಸಂಘಟನೆ ಆಗುವ ಮೂಲಕ ಜಿಲ್ಲಾಡಳಿತ ವಿರುದ್ಧ ಹೋರಾಟ ಮಾಡುವ ಅನಿವಾರ್ಯವಾಗಿದೆ.
ಆದರಿಂದ *ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಹೋರಾಟಕ್ಕೆ ನಮ್ಮ ಸಮಾಜದ ಯುವಕರು ಬೆಂಬಲ ,ಸಹಕಾರ ನೀಡಬೇಕೆಂದು ದೇವರಾಜ್ ಟಿ ಕಾಟೂರು ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಿ ಮೈಸೂರು ಇವರು ಮನವಿ ಮಾಡಿದ್ದರು,
What's Your Reaction?