ಜಾನಪದ ಹಾಗೂ ರಂಗಭೂಮಿ ಕಲೆಗಳು ಗ್ರಾಮೀಣ ಜನರ ಜೀವಸೆಲೆಯಾಗಿದ್ದು ನಿತ್ಯ ಜೀವನದಲ್ಲಿ ನೈತಿಕ ಸಂದೇಶ ಸಾರುತ್ತಾ ಚಿರಸ್ಥಾಯಿಯಾಗಿ ನಿಂತಿವೆ. ಸ್ವರೂಪರಾಣಿ

ಜಾನಪದ ಹಾಗೂ ರಂಗಭೂಮಿ ಕಲೆಗಳು ಗ್ರಾಮೀಣ ಜನರ ಜೀವಸೆಲೆಯಾಗಿದ್ದು ನಿತ್ಯ ಜೀವನದಲ್ಲಿ ನೈತಿಕ ಸಂದೇಶ ಸಾರುತ್ತಾ ಚಿರಸ್ಥಾಯಿಯಾಗಿ ನಿಂತಿವೆ. ಸ್ವರೂಪರಾಣಿ

ಜಾನಪದ ಕಲೆಗಳು ಹಾಗೂ ರಂಗ ಗೀತೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು ಗ್ರಾಮೀಣ ಪ್ರದೇಶದ ರೈತರ ಜೀವನದ ಚೈತನ್ಯ ಶಕ್ತಿಯಾಗಿವೆ ಎಂದು ಮಹಿಳಾ ಹೋರಾಟಗಾರ್ತಿ, ಸಮಾಜ ಸೇವಕಿ ಹಂಪಾಪುರ ಸ್ವರೂಪರಾಣಿ ಹೇಳಿದರು*.

ಅವರು ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಸ್ನೇಹಜೀವಿ ಜಾನಪದ ಗಾಯಕರು ಹಾಗೂ ವಾದ್ಯಗೋಷ್ಠಿ ಕಲಾ ಸಂಘ ಮತ್ತು ಡಾ.ರಾಜಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ರಂಗಗೀತೆ ಗಾಯನಸ್ಪರ್ಧೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಚಲನಚಿತ್ರ, ಟಿವಿ ಹಾಗೂ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಜಾನಪದ ಹಾಗೂ ರಂಗ ಕಲೆಗಳು ಕಣ್ಮರೆಯಾಗಿ ನೇಪತ್ಯಕ್ಕೆ ಜಾರುತ್ತಿರುವ ಸಂಧರ್ಭದಲ್ಲಿ ಸ್ನೇಹಜೀವಿ ಜಾನಪದ ಗಾಯಕರು ಮತ್ತು ವಾದ್ಯ ಗೋಷ್ಠಿ ಕಲಾವಿಧರು ರಾಜ್ಯ ಮಟ್ಟದ ರಂಗಗೀತೆ ಸ್ಪರ್ಧೆಯನ್ನು ಆಯೋಜಿಸಿ ಜಾನಪದ ಕಲಾವಿದರನ್ನು ಉತ್ತೇಜಸಿ ಪ್ರೋತ್ಸಾಹಿಸಿ ನಗಧು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸುತ್ತಿರುವುದು ಗ್ರಾಮೀಣ ಭಾಗದ ಜಾನಪದರ ಕಲೆಗೆ ಉತ್ತೇಜನ ನೀಡಿ ಹುರಿದುಂಬಿಸಿದಂತಾಗಿದೆ ಎಂದು ಅಭಿಮಾನದಿಂದ ಹೇಳಿದ ಸ್ವರೂಪರಾಣಿ ಗ್ರಾಮೀಣ ಪ್ರದೇಶದ ರೈತ ಭಾಂಧವರು ನಮ್ಮ ದೇಸಿ ತಳಿಯ ಹಸುಗಳು ಹಾಗೂ ಸಿದ್ಧಿ, ಮಲೆನಾಡ ಗಿಡ್ಡ, ಘೀರ್ ಸೇರಿದಂತೆ ಹಳ್ಳಿಕಾರ್ ರಾಸುಗಳನ್ನು ಸಾಕಿ ನಮ್ಮ ನೆಲದ ಪ್ರಾಣಿ ಸಂಕುಲದ ತಳಿಗಳನ್ನು ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದ ಅವರು ದೇಸಿ ತಳಿಯ ಹಸುಗಳ ಹಾಲು ಹಾಗೂ ಗಂಜಲಕ್ಕೆ ಔಷಧಿಯ ಗುಣಗಳಿದ್ದು ರೋಗ ನಿರೋಧಕ ಶಕ್ತಿ ಹೊಂದಿರುವುದರಿಂದ ನಮ್ಮ ನೆಲದ ರಾಸುಗಳ ಸಂರಕ್ಷಣೆಗೆ ಪಾಣತೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಮಾತನಾಡಿ ರಂಗಭೂಮಿ ಕಲೆಗಳ ಉತ್ತೇಜನಕ್ಕೆ ಪ್ರೋತ್ಸಾಹ ನೀಡಿ ರಾಜ್ಯ ಮಟ್ಟದ ರಂಗಗೀತೆ ಸ್ಪರ್ಧೆಯನ್ನು ಆಯೋಜಿಸಿರುವ ಸ್ನೇಹಜೀವಿ ಜಾನಪದ ಗಾಯಕರು ಮತ್ತು ವಾದ್ಯ ಗೋಷ್ಠಿ ಕಲಾವಿದರ ಸಂಘದ ಸಾಹಸವನ್ನು ಶ್ಲಾಘಿಸುವುದಾಗಿ ತಿಳಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.

ಸಂಘದ ಅಧ್ಯಕ್ಷ ಚೌಡೇನಹಳ್ಳಿ ಪುಟ್ಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಶೀಳನೆರೆ ಸಿದ್ದೇಶ್, ಜೈ ಭುವನೇಶ್ವರಿ ರಂಗ ಕಲಾ ಸಂಘದ ಅಧ್ಯಕ್ಷ ಡಾ.ಕೆ.ಎನ್. ತಮ್ಮಯ್ಯ, ಡಾ. ರಾಜಕುಮಾರ್ ಕಲಾ ಸಂಘದ ಅಧ್ಯಕ್ಷ ದೇವರಾಜು, ರವಿ ಶಿವಕುಮಾರ್, ಕಮಲಾಕ್ಷಿ ನಾಗರಾಜು, ಜಯಶ್ರೀ ಚಿಮ್ಮಲ್, ಚಿಕ್ಕಗಾಡಿಗನಹಳ್ಳಿ ರೇಣುಕಾ, ಜಯಲಕ್ಷ್ಮಿ, ಸರಸ್ವತಿ, ಸಿದ್ದರಾಜು, ಕಟ್ಟಹಳ್ಳಿ ಲಿಂಗಪ್ಪ, ಹರಿಹರಪುರ ಮಹದೇವೇಗೌಡ ಸೇರಿದಂತೆ ನೂರಾರು ಕಲಾವಿದರು ಹಾಗೂ ಕಲಾಪ್ರೇಮಿಗಳು ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow