ಅನ್ನದಾತರು ಸಿರಿಧಾನ್ಯ ಬೆಳೆದು ಸಿರಿವಂತರಾಗಲಿ - ಡಾ. ಎನ್.ಟಿ. ನರೇಶ್

ಅನ್ನದಾತರು ಸಿರಿಧಾನ್ಯ ಬೆಳೆದು ಸಿರಿವಂತರಾಗಲಿ - ಡಾ. ಎನ್.ಟಿ. ನರೇಶ್

ಭಾರತೀಯ ಕೃಷಿ ಅನುಸಂಧಾನ ಪರಿಷತ್ - ಕೃಷಿ ವಿಜ್ಞಾನಿ ಕೇಂದ್ರ, ವಿ.ಸಿ ಫಾರಂ, ಮಂಡ್ಯದಲ್ಲಿ ಇವರು

“ರಾಷ್ಟ್ರೀಯ ರೈತ ದಿನಾಚರಣೆ” ಯನ್ನು ದಿನಾಂಕ: ೨೩.೧೨.೨೦೨೩ ರಂದು ಬಿ. ಹುಲ್ಲುಕೆರೆ ದತ್ತು ಗ್ರಾಮದಲ್ಲಿ

ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದಲ್ಲಿನ ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಯುವ ರೈತರಿಗೆ ಗ್ರಾಮೀಣ

ಕ್ರೀಡೆಗಳನ್ನು ಏರ್ಪಡಿಸಿ, ವಿಜೇತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಡಾ. ಎನ್.ಟಿ. ನರೇಶ್, ಹಿರಿಯ ವಿಜ್ಞಾನಿ

ಮತ್ತು ಮುಖ್ಯಸ್ಥರು, ಭಾರತ ರಾಷ್ಟ್ರವು ಬಹುಪಾಲು ರೈತರಿಂದ ಕೂಡಿದ್ದು ಜಗತ್ತಿನಲ್ಲಿ ಆಹಾರ ಪದಾರ್ಥಗಳ ಉತ್ಪಾದನೆಗೆ

ಹೆಚ್ಚಿನ ಪಾಲು ನೀಡುತ್ತಿದೆ, ಕೃಷಿ ಕ್ಷೇತ್ರವು ದೇಶದ ಜಿಡಿಪಿಯ ಪ್ರಗತಿಗೆ ಪೂರಕವಾಗಿದ್ದು, ವರ್ಷಪೂರ ಕೃಷಿ ಆರ್ಥಿಕತೆಯು

ಧನಾತ್ಮಕವಾಗಿ ಪ್ರಗತಿ ಕಾಣುತ್ತಿದೆ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು. ಡಾ.ಸುರೇಶ್.ಡಿ.ಕೆ, ವಿಜ್ಞಾನಿ (ಕೃಷಿ

ವಿಸ್ತರಣೆ) ಇವರು ಮಾತನಾಡುತ್ತಾ ೨೦೨೩ ರಲ್ಲಿ ರಾಜ್ಯ ಮತ್ತು ದೇಶದಲ್ಲಿ ವಾಡಿಕೆ ಪ್ರಮಾಣದಲ್ಲಿ ಮಳೆಯಾಗದಿದ್ದರು

ಕಂಗೆಡದೆ ರೈತರು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಯಶಸ್ವಿಯಾಗಿ ದೇಶದ ಆಹಾರ ಉತ್ಪಾದನೆಗೆ

ಸಹಕಾರಿಯಾಗಿದ್ದಾರೆ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಲಭ್ಯವಿರುವ ತಂತ್ರಜ್ಞಾನಗಳನ್ನು ಮತ್ತು ತಾಂತ್ರಿಕ ಮಾಹಿತಿಯನ್ನು

ರೈತರು ಸದುಪಯೋಗಿಸಿಕೊಂಡು ವೈಜ್ಞಾನಿಕ ಮತ್ತು ವ್ಯವಸ್ಥಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಲಾಭ ಮತ್ತು 

ಸುಸ್ಥಿರತೆಯನ್ನು ಹೊಂದಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಶ್ರೀ. ಮಂಚೇಗೌಡ, ಯೋಧರು

(ಭಾರತೀಯ ಸೇನೆ) ಇವರು ಭಾಗವಹಿಸಿ, ದೇಶದ ರಕ್ಷಣೆಯಲಿ ್ಲ ಸೈನಿಕರ ಪಾತ್ರ ಎಷ್ಟು ಮುಖ್ಯವೋ ಅದೇ ರೀತಿ ದೇಶದ

ಭದ್ರತೆಯಲ್ಲಿ ರೈತರು ಸಹಾ ಯೋಧರಂತೆ ಸನ್ನದ್ದರಾಗಿ ಸೇವೆ ಸಲ್ಲಿಸುತ್ತಿರುವುದು ಸ್ಮರಣೀಯ ಎಂದು ತಮ್ಮ

ಅನಿಸಿಕೆಯನ್ನು ಹಂಚಿಕೊಂಡರು.

ಸುಮಾರು ೫೭ ಕ್ಕೂ ಅಧಿಕ ರೈತ, ರೈತ ಮಹಿಳೆಯರು ಹಾಗೂ ಯುವ ರೈತರು

ಭಾಗವಹಿಸಿದ್ದರು. 

ಜಿಲ್ಲೆಯ ಇಬ್ಬರು ಪ್ರಗತಿಪರ ಸಾವಯವ ರೈತರು ಮತ್ತು ಇಬ್ಬರು ರೈತ ಮಹಿಳೆಯರನ್ನು ಗೌರವಿಸಲಾಯಿತು. ಸಸಿಗೆ

ನೀರೆರೆಯುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಕಮಲಾಬಾಯಿ ಕೂಡಗಿ, ವಿಜ್ಞಾನಿ (ಗೃಹ

ವಿಜ್ಞಾನ)ರವರು ಸಭೆಗೆ ಆಗಮಿಸಿದ ಗಣ್ಯರನ್ನು ಮತ್ತು ರೈತರನ್ನು ಸ್ವಾಗತಿಸಿದರು. ಶಿ  ಚೌಹಾನ್, ಜಿಲ್ಲಾ ಮುಖ್ಯಸ್ಥರು, ಜೆ.

ಫಾರಂ ಸರ್ವೀಸಸ್, ಮಂಡ್ಯರವರು ತಮ್ಮ ಮುಖ್ಯ ಅತಿಥಿಗಳ ಭಾಷಣದಲ್ಲಿ ರೈತರಿಗೆ ಅನುಕೂಲವಾಗುವಂತೆ ಜೆ. ಫಾರಂ

ಸರ್ವೀಸಸ್ ಸಂಸ್ಥೆಯು ರೈತರ ಸಮಸ್ಯೆಗಳಿಗೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಭಿವೃದ್ದಿ ಪಡಿಸಿರುವ

 ತಂತ್ರಾಂಶ ಬಳಕೆಯ ವಿವಿಧ ಉಪಯೋಗಗಳನ್ನು ರೈತ ಸಮುದಾಯಕ್ಕೆ ತಿಳಿಯಪಡಿಸಿದರು. ಪ್ರಗತಿಪರ ರೈತರಾದ

ಹೊನ್ನನಾಯಕನಹಳ್ಳಿ ಗ್ರಾಮದ ಶ್ರೀ. ನಿರಂಜನ, ಹೆಚ್. ಎಸ್., ಮತ್ತು ಸೊಳ್ಳೇಪುರ ಗ್ರಾಮದ ಶ್ರೀ. ಚಂದ್ರಶೇಖರ್ ಹಾಗೂ

ಪ್ರಗತಿಪರ ರೈತಮಹಿಳೆಯರಾದ ಹೊಳಲು ಗ್ರಾಮದ ಶ್ರೀಮತಿ. ಸಾಕಮ್ಮ ಹಾಗೂ ಚಂದಗಾಲು ಗ್ರಾಮದ ಶ್ರೀಮತಿ

ಮಂಜುಳರವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ. ನಿರಂಜನ, ಹೆಚ್. ಎಸ್. ರವರು

ಸಾವಯವ ಕೃಷಿಯ ಅನುಕೂಲಗಳನ್ನು ಮತ್ತು ಕೃಷಿ ಮಾರುಕಟ್ಟೆಯಲ್ಲಿ ಯಶಸ್ಸಿನ ಕುರಿತು ರೈತರಿಗೆ ಮಾಹಿತಿ ನೀಡಿದರು.

ಡಾ. ನರೇಶ್, ಎನ್.ಟಿ., ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೈತ

ದಿನಾಚರಣೆಯನ್ನು ಭಾರತದ ಮಾಜಿ ಪ್ರಧಾನಿಗಳಾದ ದಿವಂಗತ ಶ್ರೀ ಚೌದರಿ ಚರಣ್ ಸಿಂಗ್‌ರವರ ಹುಟ್ಟುಹಬ್ಬದ

ಸ್ಮರಣಾರ್ಥ ೨೦೦೧ರಿಂದ ಭಾರತದಲ್ಲಿ ಆಚರಿಸಲ್ಪಡುತ್ತಾ ಬಂದಿದ್ದಾರೆಂದು ನೆನೆಯುತ್ತಾ ಜಿಲ್ಲೆಯ ರೈತರು ಉತ್ತಮ ಕೃಷಿ 

ಪದ್ದತಿಗಳನ್ನು ಅಳವಡಿಸಿಕೊಂಡು ಅಧಿಕ ಲಾಭಗಳಿಸಿ ಸುಸ್ಥಿರ ಜೀವನವನ್ನು ನಡೆಸಬೇಕೆಂದು ಆಶಿಸಿದರು. ಕಾರ್ಯಕ್ರಮದಲ್ಲಿ

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಸಿಬ್ಬಂದಿ ವರ್ಗ ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು ೧೦೦

ಜನ ರೈತರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.

What's Your Reaction?

like

dislike

love

funny

angry

sad

wow