*ಬೆಂಗಳೂರಿನಲ್ಲಿ ಯಶಸ್ವಿಗೊಂಡ 56 ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ*

*ಬೆಂಗಳೂರಿನಲ್ಲಿ ಯಶಸ್ವಿಗೊಂಡ 56 ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ*

ಚನ್ನರಾಯಪಟ್ಟಣ:ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನಡೆದ 56ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮವು ಭಾನುವಾರ ಬೆಂಗಳೂರಿನ ಹಂಪಿನಗರದಲ್ಲಿರುವ ಸರ್ಕಾರಿ ಗ್ರಂಥಾಲಯದ ಆಡಿಟೋರಿಯಂ ನಲ್ಲಿ 56ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯ ಕಲಾವಿದೆ ಶ್ರೀಮತಿ ಅಂಜಲಿರವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ನಾನು ಶ್ರೀಮತಿ ಸ್ವಾತಿರವರನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದೇನೆ, ತಾನು ಸಾಧನೆ ಮಾಡುವುದಲ್ಲದೆ ಇತರೆ ಕಲಾವಿದರಿಗೂ ಸಹ ಪ್ರೋತ್ಸಾಹ ಮಾಡುತ್ತಿರುವುದನ್ನು ಅಭಿನಂದನೆಯ ಕೆಲಸವಾಗಿದೆ ಎಂದು ಶ್ಲಾಘನೆ ಮಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಹಲವಾರು ಪ್ರತಿಭಾವಂತ ಕಲಾವಿದರುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಚನ್ನರಾಯಪಟ್ಟಣದ ಅಕಾಡೆಮಿ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ವಿಶ್ವದಾದ್ಯಂತ ಸಾವಿರಾರು ಜನ ಕಲಾವಿದರ ಸದಸ್ಯತ್ವವನ್ನು ಹೊಂದಿರುವ ರಾಷ್ಟ್ರೀಯ ನೃತ್ಯ ಅಕಾಡೆಮಿ ವತಿಯಿಂದ ಭಾರತೀಯ ಸಂಸ್ಕೃತಿಯಲ್ಲಿ ಒಂದಾದ 8 ಶಾಸ್ತ್ರೀಯ ನೃತ್ಯಗಳನ್ನು ಒಂದೆ ವೇದಿಕೆಯಲ್ಲಿ ನೋಡುವಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಸಂತೋಷದ ವಿಚಾರವಾಗಿದೆ, ಹಾಗೂ ರಾಷ್ಟ್ರೀಯ ನೃತ್ಯೋತ್ಸವವನ್ನು ಭಾರತದ ಪ್ರಖ್ಯಾತ ಮಂದಿರಗಳಲ್ಲಿ ಹಾಗೂ ವಿಶೇಷ ಸ್ಥಾನಮಾನವುಳ್ಳ ಪ್ರವಾಸೋದ್ಯಮ ಜಿಲ್ಲೆಗಳಲ್ಲಿ ರಾಷ್ಟ್ರೀಯ ನೃತ್ಯಗಳನ್ನು ಮಾಡಿಸುವುದರ ಮೂಲಕ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ವರೆಗೆ ಅಂತರಾಷ್ಟ್ರೀಯ ಮಲೇಶಿಯಾ ಸೇರಿದಂತೆ ಭಾರತ ದೇಶದ ತಿರುಪತಿ ಗುಜರಾತ್, ಮಹಾರಾಷ್ಟ್ರ, ಶಿರಡಿ,ಮಂತ್ರಾಲಯ, ಧರ್ಮಸ್ಥಳ,ಹೊರನಾಡು, ಗೋವಾ, ಹೈದರಾಬಾದ್, ಚೆನ್ನೈ,ಮೈಸೂರ್,ತಂಜಾವೂರ್,ಮೈಸೂರ್, ಬೆಳಗಾಂ, ಶ್ರವಣಬೆಳಗೊಳ, ಬೇಲೂರು, ಕಾರವಾರ, ಊಟಿ, ಶಿರಸಿ, ಹಾಸನ, ಬೆಂಗಳೂರು, ಮಂಡ್ಯ, ಇನ್ನು ಇತರೆ ಭಾಗಗಳಲ್ಲಿ ನೃತ್ಯೋತ್ಸವವನ್ನು ನೆಡೆಸಿದ್ದೇವೆ, 56ನೇ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ದೇಶದ್ಯಂತ 150 ಕ್ಕೂ ಹೆಚ್ಚು ಕಲಾವಿದರು ಬೆoಗಳೂರಿಗೆ ಆಗಮಿಸಿ ಭಾಗವಹಿದ್ದಾರೆ ಎoದು ಡಾ. ಸ್ವಾತಿ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. 

ಬೆಂಗಳೂರಿನ ಕನ್ನಡ ಪರ ಹೋರಾಟಗಾರ ಮಹೇಂದ್ರ ಮನೋತ್ ಮಾತನಾಡಿ ನಾನು ಸ್ವಾತಿರವರನ್ನು 15 ವರ್ಷದಿಂದ ಬಲೇ ಅವರ ಸಾಧನೆಯಂತೆ ಇತರೆ ಮಕ್ಕಳು ಸಾಧನೆ ಮಾಡಬೇಕು ಎಂಬ ಮನಸು ಬಂದಿದ್ದಾರೆ, ದೇಶದ ಹಲವಾರು ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಇದುವರೆಗೂ 10,000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನೃತ್ಯ ಕಲಿಯುವ, ಕಲಿಯುತ್ತಿರುವ, ಕಲಿತಿರುವ ಪ್ರತಿಭಾವಂತ ನೃತ್ಯ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದು ಬಹಳ ಸಂತೋಷವಾಗಿದೆ ಎಂದರು. 

ಪ್ರಾಧ್ಯಾಪಕರು ಹಾಗೂ ಗಾಯಕರಾದ ಶ್ರೀಮತಿ ನಮಿತಾ ಎಮ್ ಡಿ ಮಹೇಶ್ ಮಾತನಾಡಿ ಶಾಸ್ತ್ರೀಯ ಸಂಗೀತ,ಸಾಹಿತ್ಯ,ನೃತ್ಯೋತ್ಸವ ಒಂದು ಅಮರ ಕಲೆಯಾಗಿದ್ದು, ಇಂತಹ ನೃತ್ಯೋತ್ಸವದಲ್ಲಿ 4 ವರ್ಷದಿಂದ 60 ವರ್ಷ ವಯಸ್ಸಿನ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವ ನೀಟಿನಲಿ ಎನ್ ಸಿ ಡಿ ಎ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಾಜ ಸೇವಕರಾದ ರಮೇಶ್ ಮಾತನಾಡಿ 56ನೇ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶ ರಾಷ್ಟ್ರೀಯ ಮಟ್ಟದ ನೃತ್ಯೋತ್ಸವವನ್ನು ಆಯೋಜನೆ ಮಾಡಿಕೊಂಡು ಬರುತ್ತಿರುವುದು ಸಂತೋಷ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಅನಿತಾ ಪ್ರಕಾಶ್ , ಕಾರ್ಯದರ್ಶಿ ಶ್ರೀಮತಿ ಸ್ವಾತಿ ಭಾರದ್ವಾಜ್, ಎಂ ಕೆ ಪ್ರಕಾಶ್,ಗಂಧರ್ವ ಪರೀಕ್ಷ ವಿಬಾಗದ ಸುರೇಶ ಹೆಗಡೆ, ಹಿoದುಸ್ಥಾನಿ ಸಂಗೀತ ಶಿಕ್ಷಕಿ ಶ್ರೀಮತಿಗೀತಾ, ಮಾಧ್ಯಮ ವರದಿಗಾರ ಐ ಕೆ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow