ನಿವೃತ್ತ ಸೈನಿಕರೊಬ್ಬರು ಸೇನೆಗೆ ಸೇರುವ, ಹಾಗೂ ಪೋಲೀಸ್ ಇಲಾಖೆಗೆ ಸೇರುವ ಆಸಕ್ತ ಯುವಕರಿಗೆ ಉಚಿತವಾಗಿ ದೈಹಿಕ ಶಿಕ್ಷಣ ತರಬೇತಿ ನೀಡುವ ಮೂಲಕ ಆಕಾಂಕ್ಷಿ ಯುವಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ

ನಿವೃತ್ತ ಸೈನಿಕರೊಬ್ಬರು ಸೇನೆಗೆ ಸೇರುವ, ಹಾಗೂ  ಪೋಲೀಸ್ ಇಲಾಖೆಗೆ ಸೇರುವ ಆಸಕ್ತ ಯುವಕರಿಗೆ ಉಚಿತವಾಗಿ ದೈಹಿಕ ಶಿಕ್ಷಣ  ತರಬೇತಿ ನೀಡುವ ಮೂಲಕ ಆಕಾಂಕ್ಷಿ ಯುವಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ

ಮೂಲತಃ ಕೆ.ಆರ್.ಪೇಟೆ ತಾಲ್ಲೂಕಿನ ಗಡಿ ಗ್ರಾಮ ಚಿಕ್ಕವಡ್ಡರಕೊಪ್ಪಲು ಗ್ರಾಮದ ಮೊಮ್ಮಗನಾಗಿರುವ ಪಿರಿಯಾಪಟ್ಟಣದ ಶಿವು ಅವರು ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಶಿವು ಸೈನಿಕ್ ಅಕಾಡೆಮೆ ಆರಂಭಿಸಿ ಈ ಸಂಸ್ಥೆಯ ಮೂಲಕ ಸೇನೆಗೆ ಹಾಗೂ ಪೊಲೀಸ್ ಇಲಾಖೆಗೆ ಸೇರಲು ಇಚ್ಚಿಸುವ ಯುವಕರಿಗೆ ಉಚಿತವಾಗಿ ದೈಹಿಕ ತರಬೇತಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೇನೆಗೆ ಸೇರಬೇಕಾದರೆ ಎಲ್ಲಿ ತರಬೇತಿ ಪಡೆಯಬೇಕು. ಹೇಗೆ ಪಡೆಯಬೇಕು. ಅಥವಾ ಪೋಲೀಸ್ ಹುದ್ದೆಗೆ ಆಯ್ಕೆಯಾಗಬೇಕಾದರೆ ಎಲ್ಲಿ ಯಾವ ರೀತಿಯ ತರಬೇತಿ ಪಡೆಯಬೇಕು. ಯಾರು ತರಬೇತಿ ನೀಡುತ್ತಾರೆ ಎಂಬುದು ತಿಳಿಯದೇ ಅದೆಷ್ಟೋ ಮಂದಿ ಸೇನೆ ಅಥವಾ ಪೋಲೀಸ್ ಇಲಾಖೆಗೆ ಸೇರಲು ಅವಕಾಶ ವಂಚಿತರಾಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ.

ಇಂತಹ ಸಂದರ್ಭ ತಾಲ್ಲೂಕಿನ ಗಡಿಗ್ರಾಮ ವಡ್ಡರಕೊಪ್ಪಲು ಗ್ರಾಮದ ತಮ್ಮ ತಾಯಿ ಮನೆಯಲ್ಲಿ ಹುಟ್ಟಿ, ಕೆ.ಆರ್.ಪೇಟೆಯಲ್ಲಿ ಪ್ರೌಢಶಾಲೆಯ ವರೆಗೆ ಶಿಕ್ಷಣ ಪಡೆದುಕೊಂಡ ಹಿನ್ನೆಲೆಯಲ್ಲಿ ತನಗೆ ಪ್ರಾಥಮಿಕ ಶಿಕ್ಷಣ ನೀಡಿದ ಊರಿನ ಜನತೆಗೆ ಏನಾದರೊಂದು ಸೇವೆ ನೀಡಬೇಕೆಂಬ ಮಹಾದಾಸೆ ಹೊಂದಿದ್ದ ಶಿವು ಕೆ.ಆರ್.ಪೇಟೆಯಲ್ಲಿ ನಿತ್ಯ ಇಲ್ಲಿನ ಯುವಕರಿಗೆ ದೈಹಿಕ ತರಬೇತಿಯನ್ನು ಉಚಿತವಾಗಿ ನೀಡುವ ಕಾಯಕವನ್ನು ಕಳೆದ ಎರಡು ವಾರಗಳಿಂದ ಆರಂಭಿಸಿದ್ದಾರೆ.

ಆರಂಭದಲ್ಲಿ ಸುಮಾರು 20ಮಂದಿ ಯುವಕರು ಹಾಜರಾಗುತ್ತಿದ್ದಾರೆ.

ಇವರಿಗೆ ಸೈನ್ಯಕ್ಕೆ ಸೇರಲು ಅವಶ್ಯಕತೆ ಇರುವ ಎಲ್ಲಾ ದೈಹಿಕ ತರಬೇತಿಯನ್ನು ನೀಡುತ್ತಿದ್ದಾರೆ. ಜೊತೆಗೆ ಪೋಲೀಸ್ ಇಲಾಖೆಗೆ ಸೇರಲು ಇಚ್ಚಿಸುವ ಯುವಕರಿಗೂ ಪೊಲೀಸ್ ಇಲಾಖೆಗೆ ಆಯ್ಕೆಯಾಗಲು ಸಹಾಯಕವಾಗುವ ದೈಹಿಕ ತರಬೇತಿಯನ್ನು ನೀಡುತ್ತಿದ್ದಾರೆ ಅಲ್ಲದೆ ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆಗೆ ನಡೆಸುವ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು. ಯಾವ ಪುಸ್ತಕಗಳನ್ನು ಓದಬೇಕು ಎಂಬುದರ ಬಗ್ಗೆಯೂ ಮಾಹಿತಿ ನೀಡುವ ಮೂಲಕ ಯುವಕರಲ್ಲಿ ದೇಶ ಸೇವೆ ಮಾಡಬೇಕೆನ್ನುವ ವ್ಯಕ್ತಿತ್ವವನ್ನು ಬೆಳೆಸುವ ಕೆಲಸ‌ ಮಾಡುತ್ತಿದ್ದಾರೆ.

ಇಂತಹ ಅಪರೂಪದ ವ್ಯಕ್ತಿತ್ವ ಹೊಂದಿರುವ ಒಬ್ಬರು ಮಾಜಿ ಸೈನಿಕ ಶಿವು ಅವರು ಶಿವು ಸೈನಿಕ್ ಆಕಾಡೆಮಿ ಎಂಬ ಹೆಸರಿನಲ್ಲಿ ಉಚಿತ ಸೈನ್ಯ ತರಬೇತಿ ಕೇಂದ್ರವನ್ನು ತೆರೆದು ಕೆ.ಆರ್.ಪೇಟೆ, ಪಿರಿಯಾಪಟ್ಟಣ, ರಾವಂದೂರು, ಮಿರ್ಲೆ ಇತರೆ ಕಡೆಗಳಲ್ಲಿ ತಮ್ಮ ನಿವೃತ್ತ ಸೈನಿಕರ ತಂಡದೊಂದಿಗೆ ಯುವಕರಿಗೆ ಪ್ರತಿದಿನ ದೈಹಿಕ ತರಬೇತಿ ನೀಡುತ್ತಿದ್ದಾರೆ.

ಸೇನೆಯಲ್ಲಿ 17ವರ್ಷಗಳ ಕಾಲ ಭಾರತದ ಗಡಿಕಾಯುವ ಮೂಲಕ ಭಾರತಾಂಭೆಯ ಸೇವೆ ಮಾಡಿ, ನಿವೃತ್ತಿಯ ನಂತರವೂ ಭಾರತಾಂಭೆಯ ಸೇವೆ ಯುವಕರನ್ನು ತಯಾರು ಮಾಡುವ ಕಾಯಕಕ್ಕೆ ಮುಂದಾಗಿರುವ ನಿಸ್ವಾರ್ಥ ಸೇವೆಗೆ ಶುಭವಾಗಲಿ ಸರ್ಕಾರ ಇಂತಹವರನ್ನು ಗುರ್ತಿಸಿ ಗೌರವಿಸುವ ಕೆಲಸ ಮಾಡಲಿ ಎಂಬುದು ಪತ್ರಿಕೆಯ ಆಶಯವಾಗಿದೆ.

ಶಿವು ಸೈನಿಕ್ ಅಕಾಡೆಮೆಯಲ್ಲಿ ತರಬೇತಿ ಪಡೆಯಲು ಇಚ್ಚಿಸುವವರು ಅವರ ಮೊಬೈಲ್ ಸಂಖ್ಯೆ: 7986110633 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಅಭಿಪ್ರಾಯಗಳು: 

ನಾನು ಸೇನೆಗೆ ಸೇರುವಾಗ ನನಗೆ ಮಾರ್ಗದರ್ಶನ ಮಾಡುವವರು ಇರಲಿಲ್ಲ. ತರಬೇತಿಯ ಕೊರತೆ ಇತ್ತು. ಆದರೆ, ನಿವೃತ್ತಿ ಬಳಿಕ ಗ್ರಾಮೀಣ ಭಾಗದ ಯುವಕರು ತರಬೇತಿ ಉಚಿತವಾಗಿ ಪಡೆದು ಸೇನೆಗೆ ಸೇರಲಿ ಎಂಬ ಕಾರಣಕ್ಕೆ ಸೈನಿಕ ಆಕಾಡೆಮಿ ಸ್ಥಾಪಿಸಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕೆಂಬುವುದು ನನ್ನ ಬಯಕೆಯಾಗಿದೆ. ಇದಕ್ಕಾಗಿ ಶಿವು ಸೈನಿಕ್ ಆಕಾಡೆಮಿ ಸ್ಥಾಪಿಸಿ ಕಳೆದ ಒಂದು ವರ್ಷದಿಂದ ಯುವಕರಿಗೆ ಉಚಿತ ದೈಹಿಕ ಶಿಕ್ಷಣ ತರಬೇತಿಯನ್ನು ನೀಡುತ್ತಿದ್ದೇನೆ. ನನ್ನ ಈ ಸಣ್ಣ ಪ್ರಯತ್ನದಿಂದ ಗ್ರಾಮೀಣ ಯುವಕರು ನಿರುದ್ಯೋಗಿ ಆಗುವುದನ್ನು ತಪ್ಪಿಸಿದಂತಾಗುತ್ತದೆ. ಮಾತ್ರವಲ್ಲದೆ ದೇಶದ ರಕ್ಷಣೆಯನ್ನು ಮಾಡಿದಂತಾಗುತ್ತದೆ. ನನ್ನ ಈ ಕೆಲಸಕ್ಕೆ 

ಕೆಲವು ಮಾಜಿ ಸೈನಿಕರು ಕೂಡ ನನಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ನಮ್ಮ ಈ ಸಣ್ಣ ಪ್ರಯತ್ನಕ್ಕೆ ಯುವಕರಿಂದ ಹೆಚ್ಚಿನ ಸ್ಪಂದನೆ ದೊರೆಯುತ್ತಿದೆ. ಇದರಿಂದ 

ಸೇನೆಗೆ ಹಸ್ತ ಪೊಲೀಸ್ ಇಲಾಖೆಗೆ ಸೇರಲಿಚ್ಚಿಸುವ ಯುವಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ. ಇದುವರೆಗೂ ನೂರಾರು ಜನರಿಗೆ ಒಂದು ವರ್ಷದಲ್ಲಿಯೇ ತರಬೇತಿ ನೀಡಿದ್ದು, ಇದುವರೆಗೆ ತರಬೇತಿ ಪಡೆದ 32 ಆ ಜನರು ಸೈನ್ಯಕ್ಕೆ ಸೇರಿದ್ದಾರೆ ಎಂಬುವುದು ಹೆಮ್ಮೆಯ ಸಂಗತಿಯಾಗಿದೆ.

-ಶಿವು

ನಿವೃತ್ತ ಸೈನಿಕರು ಹಾಗೂ ಸಂಸ್ಥಾಪಕರು ಶಿವು ಸೈನಿಕ್ ಅಕಾಡೆಮೆ.

 ಇಂದಿನ ದಿನದಲ್ಲಿ ಸೈನ್ಯಕ್ಕೆ ಸೇರಲು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಶಿವು ರವರು ಆಸಕ್ತ ಯುವಕರಿಗೆ ಸೂಕ್ತ ದೈಹಿಕ ತರಬೇತಿಯನ್ನು ಉಚಿತವಾಗಿ ನೀಡುವ ಮೂಲಕ ಯುವಕರ ಚೈತನ್ಯ ಚಿಲುಮೆಯಾಗಿದ್ದಾರೆ. ಚಿಲುಮೆಯಾಗಿದ್ದಾರೆ. ಇಂತಹ ಸಾರ್ಥಕ ಕೆಲಸ ಮಾಡುತ್ತಿರುವ ನಿವೃತ್ತ ಸೈನಿಕ ಶಿವು ಅವರು ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಮೊಮ್ಮಗ ಎನ್ನುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ತಾಲ್ಲೂಕಿನ ಯುವಕರು ಶಿವು ಅಕಾಡೆಮೆಯ ವತಿಯಿಂದ ನೀಡುತ್ತಿರುವ ಉಚಿತ ತರಬೇತಿ ಪಡೆದು ಸೇನೆಗೆ ಹಾಗೂ ಪೊಲೀಸ್ ಇಲಾಖೆಗೆ ಆಯ್ಕೆಯಾಗಲಿ ಎಂದು ಆಶಿಸುತ್ತೇನೆ.

-ಹೆಚ್.ಆರ್.ಲೋಕೇಶ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರು, ಕೆ.ಆರ್.ಪೇಟೆ. ಇವರು ತಿಳಿಸಿದರು.

 ವರದಿ *ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow