ನಾಡಿದ್ದು ಶನಿವಾರ ಜಿಲ್ಲಾ ಜೆಡಿಎಸ್ ವತಿಯಿಂದ ಬರ ಅಧ್ಯಯನ

ನಾಡಿದ್ದು ಶನಿವಾರ ಜಿಲ್ಲಾ ಜೆಡಿಎಸ್ ವತಿಯಿಂದ ಬರ ಅಧ್ಯಯನ

ಕೆ ಆರ್ ಪೇಟೆ:ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ವಾಸ್ತವಿಕತೆ ಕುರಿತು ಅಧ್ಯಯನ ನಡೆಸಲು ಮಂಡ್ಯ ಜಿಲ್ಲಾ ಜೆಡಿಎಸ್ ವತಿಯಿಂದ ಮಾಜಿ‌ ಸಚಿವರಾದ ಸಿ ಎಸ್ ಪುಟ್ಟರಾಜು,ಡಿ ಸಿ ತಮ್ಮಣ್ಣ ಹಾಗೂ ಮಾಜಿ‌ ಶಾಸಕರ ನೇತೃತ್ವದಲ್ಲಿ ಶನಿವಾರ ನಮ್ಮ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕ್ಷೇತ್ರದ ಜನಪ್ರಿಯ ಶಾಸಕ ಹೆಚ್ ಟಿ ಮಂಜು ತಿಳಿಸಿದರು.

ಅವರು ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯಿತಿ ಶಾಸಕರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಇದೇ ಶನಿವಾರ ನಮ್ಮ ತಾಲ್ಲೂಕಿನ ಗಡಿಗ್ರಾಮ ಜಿ ಬೊಪ್ಪನಹಳ್ಳಿ ಗ್ರಾಮದ ಸಮೀಪಕ್ಕೆ ಮಾಜಿ‌ ಸಚಿವರಾದ ಸಿ ಎಸ್ ಪುಟ್ಟರಾಜು,ಡಿ ಸಿ ತಮ್ಮಣ್ಣ, ಮಾಜಿ‌ ಶಾಸಕರಾದ ಅನ್ನದಾನಿ,ರವೀಂದ್ರ ಶ್ರೀಕಂಠಯ್ಯ,ಸುರೇಶಗೌಡ,

ಮನ್ಮುಲ್ ಮಾಜಿ‌ ಅಧ್ಯಕ್ಷ ಬಿ ಆರ್ ರಾಮಚಂದ್ರು ಹಾಗೂ ನಾನು ಸೇರಿದಂತೆ ಪ್ರವಾಸ ತಂಡದಲ್ಲಿ ಭಾಗವಹಿಸಲಿದ್ದಾರೆ.ಶನಿವಾರ ಬೆಳಿಗ್ಗೆ 10 ಗಂಟೆಗೆ ಪ್ರವಾಸ ತಂಡ ಆಗಮಿಸಲಿದ್ದು ಮೊದಲಿಗೆ ಸಂತೆಬಾಚಹಳ್ಳಿ ಹೋಬಳಿ ಗ್ರಾಮಗಳಲ್ಲಿ ಒಡೆದ ಕೆರೆಯನ್ನು ವೀಕ್ಷಣೆ ಮಾಡಿ ನಂತರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಬರ ಅಧ್ಯಯನ ಮಾಡಲಾಗುತ್ತದೆ.ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ರೈತರೊಂದಿಗೆ ನೇರವಾಗಿ ಸಂಬಂಧಿಸಿದ ಇಲಾಖೆಗಳಿಂದ ನಷ್ಟದ ವರದಿ ಪಡೆದು ಚರ್ಚಿಸಲಾಗುವುದು.ನಂತರ ಪಕ್ಷದ ವರಿಷ್ಠರ ಗಮನಕ್ಕೆ ತಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.ಆದ್ದರಿಂದ ರೈತರು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಮಾತನಾಡಿದರು.ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಕೀಲ ಧನಂಜಯ್ ಕುಮಾರ್, ತಾ.ಪಂ.ಮಾಜಿ‌ ಸದಸ್ಯ ಮಲ್ಲೇನಹಳ್ಳಿ ಮೋಹನ್,ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್,ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ಸಮಿತಿ ಸದಸ್ಯ ರವಿಕುಮಾರ್, ಪುರಸಭಾ ಮಾಜಿ‌ ಸದಸ್ಯ ಹೇಮಂತಕುಮಾರ್,ಪುರಸಭಾ ಸದಸ್ಯ ಗಿರೀಶ್, ತಾ.ಪಂ.ಮಾಜಿ‌ ಸದಸ್ಯ ರಾಜು,ಭಾರತೀಪುರ ಮಂಜುನಾಥ್, ಸಾರಂಗಿ ಸೊಸೈಟಿ ನಿರ್ದೇಶಕ ಹಾಗೂ ಮನ್ಮುಲ್ ಮಾಜಿ ನಿರ್ದೇಶಕ ನಂಜುಂಡೇಗೌಡ,ಬಳ್ಳೇಕೆರೆ ಗ್ರಾ.ಪಂ.ಮಾಜಿ‌ ಅಧ್ಯಕ್ಷ ಚೌಡೇನಹಳ್ಳಿ ನಾಗರಾಜು, ಶಾಸಕರ ಆಪ್ತ‌ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಇತರರು ಹಾಜರಿದ್ದರು.

*ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow