*ಹಾಲಿನ ಡೈರಿಯ ವಿಷಯದಲ್ಲಿ ಜಾತೀಯತೆ ರಾಜಕಾರಣ ಬೆರೆಸಬೇಡಿ ಡಾಲು ರವಿ*
ಕೆ ಆರ್ ಪೇಟೆ: *ಹಾಲಿನ ಡೇರಿ ವಿಚಾರದಲ್ಲಿ ಜಾತೀಯತೆ, ರಾಜಕಾರಣ ಬೆರೆಸಿದರೆ ಹಾಲಿನ ಡೇರಿ ಸಂಪೂರ್ಣವಾಗಿ ಹಾಳಾಗುವುದರಲ್ಲಿ ಸಂಶಯವಿಲ್ಲ ಆದ್ದರಿಂದ ಸಂಘವು ಉಳಿಯಬೇಕಾದರೆ ಗ್ರಾಮದ ಎಲ್ಲಾ ಧರ್ಮ, ಸಮುದಾಯಗಳ ಪಾತ್ರ ಮಹತ್ವದ್ದು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.*
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಅಕ್ಕಿಹೆಬ್ಬಾಳು ಜೈನಹಳ್ಳಿ ,ಮಾಚಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲಿನ ಡೇರಿ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿ ಸಹಕಾರ ನೀಡಬೇಕು. ಕೇವಲ ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದರೆ ಸಾಲದು ಮಕ್ಕಳು,ಮಹಿಳೆಯರು ಮೂಳೆ ಗಟ್ಟಿಯಾಗಲು ಕ್ಯಾಲ್ಸಿಯಂ ಅಂಶವಿರುವ ಹಾಲನ್ನು ಸೇವಿಸಬೇಕು.ಹಿಂದಿನ ಕಾಲದಲ್ಲಿ ಮಹಿಳೆಯರು ಉತ್ತಮ ಹಾಲು, ಬೆಣ್ಣೆ ಸೇವಿಸುತ್ತಿದ್ದರಿಂದ ಖಾಯಿಲೆಯಿಂದ ದೂರವಾಗಿ ದೀರ್ಘಾವಧಿಯ ವರೆಗೆ ಜೀವಿಸುವುದನ್ನು ನೋಡುತ್ತಿದ್ದೇವೆ.ಇತ್ತೀಚಿನ ದಿನಗಳಲ್ಲಿ ಶುಗರ್,ಬಿ ಪಿ ಸಾಮಾನ್ಯವಾಗಿವೆ.ಆದ್ದರಿಂದ ಮಹಿಳೆಯರು ಯುವಕರು ಆಧುನಿಕ ಜೀವನ ಶೈಲಿಯನ್ನು ಬದಿಗೊತ್ತಿ ಕೃಷಿ,ಹೈನುಗಾರಿಕೆ ಚಟುವಟಿಕೆಗಳಲ್ಲಿ ಪಾಲ್ಗೊಂಡು ರೋಗ ಮುಕ್ತ ರಾಗುವಂತೆ ಕರೆ ನೀಡಿದರು.ಸಭೆಯಲ್ಲಿ ರಾಸುಗಳ ನಿರ್ವಹಣೆ ಹಾಗೂ ಗುಣಮಟ್ಟದ ಹಾಲನ್ನು ಕರೆಯುವ ಬಗ್ಗೆ ನಿರರ್ಗಳವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಕ್ಕಿಹೆಬ್ಬಾಳು ಗ್ರಾಮದ ಹಾಲು ಉತ್ಪಾದಕರ ಸಂಘದ ಅನಿತಾ ಹಾಗೂ ಮಂಜುನಾಥ್ ದಂಪತಿಗಳ ಸುಪುತ್ರಿ ವಾಣಿಶ್ರೀ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಅಂಗವಾಗಿ ಮನ್ಮುಲ್ ನಿರ್ದೇಶಕ ಡಾಲು ರವಿ ಅವರು ವೈಯುಕ್ತಿಕವಾಗಿ 5 ಸಾವಿರ ನಗದು ಬಹುಮಾನ ವಿತರಣೆ ಮಾಡಿದರು. ಹಾಲನ್ನು ಕರೆದು ಸಂಘಕ್ಕೆ ಹಾಕಿ ಜೀವನವನ್ನು ಸಾಗಿಸುತ್ತಿರುವ ಅನಿತಾಮಂಜುನಾಥ್ ದಂಪತಿಗಳ ಸುಪುತ್ರಿ ವಾಣಿಶ್ರೀಯ ಮುಂದಿನ ವಿಧ್ಯಾಭ್ಯಾಸ ಜೀವನ ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳುವಂತೆ ಶುಭ ಕೋರಿದರು.
ಕಳೆದ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲನ್ನು ಸರಬರಾಜು ಮಾಡಿದ ಹಾಲು ಉತ್ಪಾದಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಅಕ್ಕಿಹೆಬ್ಬಾಳು ರಘು,ಮಾರ್ಗ ವಿಸ್ತರಣಾ ಅಧಿಕಾರಿಗಳಾದ ಗುರುರಾಜ್ ಸುರುಗೀಹಳ್ಳಿ, ನಾಗಪ್ಪ ಅಲ್ಲಿಬಾದಿ,ಸಂಘದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಧರ್ಮರಾಜು,ಸಂಘದ ನಿರ್ದೇಶಕರಾದ ಶಂಕರಪ್ಪ,ಯೋಗೇಶ್,ಬಸವರಾಜು, ಪವಿತ್ರ, ಶೈಲಜಾ, ವೆಂಕಟೇಶ್, ಸೋಮು,ಹರೀಶ್, ಯತಿರಾಜು,ಸಂಘದ ಕಾರ್ಯದರ್ಶಿ ಯೋಗೇಶ್, ರೇಣುಕಾ,ಸ್ವಾಮಿ, ಕೃಷ್ಣೋಜಿರಾವ್ ಸೇರಿದಂತೆ ಇತರರು ಹಾಜರಿದ್ದರು.
ವರದಿ *ರಾಜು ಜಿಪಿ ಕಿಕ್ಕೇರಿ*
What's Your Reaction?