ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ತಾಲೂಕು ಆಡಳಿತ ಅಧಿಕಾರಿ ಡಾ. ಶಶಿಧರ್ ರವರಿಗೆ ಮನವಿ ನೀಡಿದ ಕರುನಾಡು ಯುವಜನ ವೇದಿಕೆ*

ಕೆ.ಆರ್.ಪೇಟೆ ತಾಲೋಕಿನಾಂದ್ಯತ
ಇತ್ತೀಚೆಗೆ ಡೆಂಗ್ಯೂ- ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿದ್ದು ತಾಲ್ಲೋಕಿನ ಸುತ್ತ ಮುತ್ತಲಿನ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಬೆಲೆಯ ಚಿಕಿತ್ಸೆ ಪಡೆಯಲು ನಿಸ್ಸಹಾಯಕ ರಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದರೆ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮತ್ತು ಔಷಧಿಗಾಗಿ ಖಾಸಗಿಯ ಲ್ಯಾಬ್ - ಮೆಡಿಕಲ್ ಸ್ಟೋರ್ ಗಳಲ್ಲಿ ಖರೀದಿಸುವುದು ಕಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ತಾಲೂಕು ಆಡಳಿತಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳಲಾಯಿತು, ತಕ್ಷಣದಲ್ಲೇ ಪರೀಶೀಲನೆ ನೆಡೆಸಿ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರುನಾಡು ಯುವಜನ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ ನೇತೃತ್ವದಲ್ಲಿ ತಾಲ್ಲೋಕು ಆಡಳಿತಾಧಿಕಾರಿಗಳಾದ ಡಾಕ್ಟರ್ ಶಶಿಧರ್ ರವರಿಗೆ ಕರುನಾಡು ಯುವಜನ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ಕರುನಾಡು ಯುವಜನ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ.ರಾಜು, ನೂತನವಾಗಿ ಆಯ್ಕೆಯಾದ ಜಿಲ್ಲಾ ಉಪಾಧ್ಯಕ್ಷರಾದ ಯುವರಾಜ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್,ನೂತನ ತಾಲ್ಲೋಕು ಅಧ್ಯಕ್ಷರಾದ ಶ್ಯಾಮ್ ಸುಂದರ್, ಮಹಿಳಾ ತಾಲ್ಲೂಕು ಅಧ್ಯಕ್ಷರಾದ ಧನಲಕ್ಷ್ಮೀ, ಕಾರ್ಯಾಧ್ಯಕ್ಷರಾದ ಸುನೀಲ್ ಕುಮಾರ್, ಸುಂದರೇಶ್, ಲಕ್ಷ್ಮೀ, ಯೋಗೇಶ್, ಪವನ್,ಶಶಿ ಕುಮಾರ್, ರಂಗನಾಥ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು,
What's Your Reaction?






