ಚನ್ನರಾಯಪಟ್ಟಣ:ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ ಎನ್ ಬಾಲಕೃಷ್ಣ

ಚನ್ನರಾಯಪಟ್ಟಣ:ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ ಎನ್ ಬಾಲಕೃಷ್ಣ

ಚನ್ನರಾಯಪಟ್ಟಣ:ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ ಎನ್ ಬಾಲಕೃಷ್ಣ 

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣರವರು ತಮ್ಮ ಪತ್ನಿ ಸಿ ಕೆ ಕುಸುಮರಾಣಿ ಜೊತೆ ಆಗಮಿಸಿ ಎ ಚೋಳನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 250 ರಲ್ಲಿ ಪತ್ನಿ ಹಾಗೂ ಮಗಳ ಸಮೇತ ಹಕ್ಕು ಚಲಾಯಿಸಿದರು. ಆನಂತರ ಪತ್ರಕರ್ತರ ಜೊತೆ ಮಾತನಾಡಿ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹಾಸನ

ಲೋಕಸಭಾ ಚುನಾವಣೆಯಲ್ಲಿ ಶ್ರವಣಬೆಳಗೊಳ ವಿಧಾನಸಭಾ ವ್ಯಾಪ್ತಿಯಲ್ಲಿ ನನ್ನ ಸ್ವಗ್ರಾಮ ಎ ಚೋಳನಹಳ್ಳಿಯಲ್ಲಿ ಮತದಾನವನ್ನು ಮಾಡಲಾಗಿದೆ ಇದೆ ಸಂದರ್ಭದಲ್ಲಿ ನಮ್ಮ ಶ್ರೀಮತಿ ಹಾಗೂ ನನ್ನ ಮಗಳು ಸಹ ಇದ್ದಾರೆ, ಇಡೀ ತಾಲೂಕಿನ ಅತ್ಯಂತ ಶಾಂತಿಯುತ ಮತದಾನ ನಡೆಯುತ್ತಿದೆ , ನುಗ್ಗೆಹಳ್ಳಿ ಹೋಬಳಿಯ ವಿರೂಪಾಕ್ಷಪುರ ಗ್ರಾಮದಲ್ಲಿ ಈವಿಎಂ ಸ್ವಲ್ಪ ಸಮಸ್ಯೆಯಾಗಿ ಅದನ್ನು ಬದಲಾವಣೆ ಮಾಡಲಾಗಿದೆ, ಎಲ್ಲಿಯೂ ಸಹ ಯಾವುದೇ ಗಲಾಟೆ ಗದ್ದಲ ಇಲ್ಲದೆ ಶಾಂತಿಯುತವಾಗಿ ಚುನಾವಣೆ ನಡೆಯುತ್ತಿದೆ , ನಮ್ಮ ಎನ್ ಡಿ ಎ ಅಭ್ಯರ್ಥಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ, ಪ್ರಜ್ವಲ್ ರೇವಣ್ಣರವರ ಗೆಲುವು ಖಚಿತ ಎಂದು ಈ ಸಂದರ್ಭದಲ್ಲಿ ಭಾವಿಸಿದ್ದೇನೆ, ಸಂಜೆ 6:00 ವರೆಗೆ ಮತದಾರ ಬಂಧುಗಳು ಯಶಸ್ವಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಸಹಕರಿಸಬೇಕು ಎಂದು ವಿನಂತಿಸಿದರು. ನಾವು ಮಾಡಿರೋ ಅಭಿವೃದ್ಧಿ ಕಾರ್ಯಗಳು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ, ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ದೇವೆಗೌಡರ ಜನಪ್ರಿಯ ಯೋಜನೆಗಳು ನಮ್ಮ ಅಭ್ಯರ್ಥಿಯ ಗೆಲುವಿಗೆ ಮುನ್ನುಡಿ ಬರೆಯಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ದೇಶಕ್ಕೆ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ ಎಂದು ಹೇಳಿದರು. ವಿರೋಧ ಪಕ್ಷಗಳಿಗೆ ಸೋಲಿನ ಭೀತಿಯಿಂದ ಕೆಲವು ಷಡ್ಯಂತ್ರಗಳನ್ನು

ಮಾಡುತ್ತಿದ್ದಾರೆ, ಈ ಷಡ್ಯಂತ್ರಗಳಿಗೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕಿವಿಕೊಡದೆ, ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೇ ಸನ್ಮಾನ್ಯ ನರೇಂದ್ರ ಮೋದಿಯವರನ್ನು ಹ್ಯಾಟ್ರಿಕ್ ಪ್ರಧಾನಿ ಆಗೋದಕ್ಕೆ ನಮ್ಮೆಲ್ಲರ ಮತವನ್ನು ನೀಡಬೇಕಾಗಿದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕೈಯನ್ನು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗೂ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿ ಎನ್ ಬಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ ಕೆ ಕುಸುಮರಾಣಿ, ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ, ಶಾಸಕರ ಸುಪುತ್ರಿ ನಕ್ಷತಾ ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow