ಚನ್ನರಾಯಪಟ್ಟಣ: ನಾಲ್ಕನೇ ಆವೃತ್ತಿಯ ಕಬಡ್ಡಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡ ಬೋಳಮಾರನಹಳ್ಳಿ ಡಾಕ್ಟರ್ ಸೂರಜ್ ರೇವಣ್ಣ ಫ್ಲೆಮಿಂಗ್ ಈಗಲ್ಸ್ ತಂಡ

ಚನ್ನರಾಯಪಟ್ಟಣ: ನಾಲ್ಕನೇ ಆವೃತ್ತಿಯ ಕಬಡ್ಡಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡ ಬೋಳಮಾರನಹಳ್ಳಿ ಡಾಕ್ಟರ್ ಸೂರಜ್ ರೇವಣ್ಣ ಫ್ಲೆಮಿಂಗ್ ಈಗಲ್ಸ್ ತಂಡ

ಚನ್ನರಾಯಪಟ್ಟಣ: ಸರ್ಕಾರಿ ಪೇಟೆ ಶಾಲೆ ಆವರಣದಲ್ಲಿ ಡಾ. ಸೂರಜ್ ರೇವಣ್ಣ ಸ್ಪೋರ್ಟ್ಸ್ ಅಂಡ್ ಕಲ್ಚರ್ ಅಸೋಸಿಯೇಷನ್ ವತಿಯಿಂದ ಡಾ. ಸೂರಜ್ ರೇವಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ನಾಲ್ಕನೇ ಆವೃತ್ತಿಯ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಏರ್ಪಡಿಸಲಾಯಿತು, ಈ ಪಂದ್ಯಾವಳಿಯಲ್ಲಿ ಸುಮಾರು 40 ತಂಡಗಳು ಭಾಗವಹಿಸಿದವು, ಅಂತಿಮವಾಗಿ ಟೀಮ್ 99 ನಾಗನಹಳ್ಳಿ ಮೈಸೂರ್ ವರ್ಸಸ್ ಡಾಕ್ಟರ್ ಸೂರಜ್ ರೇವಣ್ಣ ಪ್ಲೇಯಿಂಗ್ ಈಗಲ್ಸ್ ಬೋಳಮಾರನಹಳ್ಳಿ ನಡುವೆ ಫೈನಲ್ ಪಂದ್ಯವು ನಡೆಯಿತು, ಈ ಪಂದ್ಯದಲ್ಲಿ ಡಾಕ್ಟರ್ ಸೂರಜ್ ರೇವಣ್ಣ ಪ್ಲೇಯಿಂಗ್ ಈಗಲ್ಸ್ ತಂಡ ವಿಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು, ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಡಾಕ್ಟರ್ ಸೂರಜ್ ರೇವಣ್ಣ ಪ್ಲೇಯಿಂಗ್ ಈಗಲ್ಸ್ ತಂಡ, ದ್ವಿತೀಯ ಸ್ಥಾನವನ್ನು ಟೀಮ್ 99 ನಾಗನಹಳ್ಳಿ ಮೈಸೂರ್ ತಂಡ, ತೃತೀಯ ಸ್ಥಾನವನ್ನು ಮಂಡ್ಯದ ಗಾಣದಾಳು ತಂಡ,ನಾಲ್ಕನೇ ಸ್ಥಾನವನ್ನು ಮಂಡ್ಯದ ಸಾತನೂರು ತಂಡವು ಬಹುಮಾನವನ್ನು ಪಡೆಯಿತು, ಈ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಂಎಲ್ಸಿ ಸುರಜ್ ರೇವಣ್ಣ ಪ್ರತಿ ವರ್ಷವೂ ಸಹ ಇಂತಹ ಕ್ರೀಡಾಕೂಟಗಳನ್ನು ಯುವಕರು ಏರ್ಪಡಿಸುವ ಮೂಲಕ ಗ್ರಾಮೀಣ ಕ್ರೀಡಾಕೂಟಗಳನ್ನು ಪ್ರೋತ್ಸಾಹಿಸಬೇಕು ಇಂತಹ ಕ್ರೀಡಾಕೂಟಗಳಿಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲವಿರುತ್ತದೆ ಎಂದು ತಿಳಿಸಿದರು, ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು, ಇದೇ ಸಂದರ್ಭದಲ್ಲಿ ಪರಮ ಪೂಜ್ಯ ನಿರ್ಮಲಾನಂದ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ, ಎಂಎಲ್ಸಿ ಸೂರಜ್ ರೇವಣ್ಣ, ಕಾರ್ಯಕ್ರಮದ ಆಯೋಜಕರಾದ ವಿಕಾಸ್,ರಕ್ಷಿತ್, ಸಚಿನ್,ಪ್ರವೀಣ್, ಪೂರ್ವಿಕ ನವೀನ್,ನಾಗರಾಜು, ಮಿಥುನ್, ಅಭಿಷೇಕ್, ಪರಮೇಶ್, ಬೈರೇಗೌಡ, ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow