ಸತ್ಯಧರ್ಮ ಪಾಲನೆಗೆ ಶ್ರೀರಾಮ ಆದರ್ಶವೆಂದು ನಂಬಿಕೆ ವಿಶ್ವಾಸ ಹೊಂದಿದೆ ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.*

*ಕೆ.ಆರ್.ಪೇಟೆ:ರಾಮಾಯಣ ಕಾಲದ ಸಾಹಿತ್ಯಗಳನ್ನು ಆಧುನಿಕ ಪ್ರಪಂಚ ಸಾರವತ್ತಾಗಿ ತಿಳಿಯುವಂತಾಗಿದ್ದು ಶ್ರೀ ಮಹರ್ಷಿ ವಾಲ್ಮೀಕಿ ಅವರಿಂದ.ರಾಮಾಯಣ ಜಗತ್ತಿನ ಮೊಟ್ಟ ಮೊದಲಗ್ರಂಥ ಶ್ರೀರಾಮನ ಆದರ್ಶ ಈ ದೇಶದ ಸತ್ವ ಇಂದಿಗೂ ಈ ಮಣ್ಣಿನ ಪ್ರತಿಯೊಬ್ಬರಲ್ಲಿ ಸತ್ಯಧರ್ಮ ಪಾಲನೆಗೆ ಶ್ರೀರಾಮ ಆದರ್ಶವೆಂದು ನಂಬಿಕೆ ವಿಶ್ವಾಸ ಹೊಂದಿದೆ ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.*

ಪಟ್ಟಣದಲ್ಲಿರುವ ಶತಮಾನ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ,ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ನೆಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು.

ವಾಲ್ಮೀಕಿ ಸಮುದಾಯದ ಜನತೆ ಒಗ್ಗಟ್ಟಿನಿಂದ ಸಮಾಜಮುಖಿ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಮುಖ್ಯವಾಹಿನಿಗೆ ಬರುವ ಮೂಲಕ ಸಂಘಟಿತರಾಗಬೇಕು.ರಾಮಾಯಣ ಮತ್ತು‌ ಮಹಾಭಾರತ ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕವಾಗಿವೆ.ರಾಮಾಯಣ ಪೂರ್ಣ ಕಲ್ಪನೆಯಲ್ಲ. ಸಮುದಾಯದ ಸದೃಢತೆಗೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಮಕ್ಕಳಿಗೆ ಹಣ,ಆಸ್ತಿ ಮಾಡಬೇಡಿ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು ಇಂದಿನ ಮೊಬೈಲ್ ಗೀಳಿನಿಂದ ಸಂಸ್ಕೃತಿ ಪರಂಪರೆ ಮೌಲ್ಯ ಮಾಯವಾಗುತ್ತಿದೆ.ಸಂಸ್ಕೃತಿ ಮತ್ತು ಮೌಲ್ಯ ಉಳಿಸಬೇಕಾದರೆ ವಾಲ್ಮೀಕಿ ರಾಮಾಯಣ ಓದುವುದು ಅಗತ್ಯವಿದೆ ಮಹರ್ಷಿಗಳು ಒಂದು ಸಮುದಾಯಕ್ಕೆ ಸೀಮಿತವಲ್ಲ ಮಾನವ ಕುಲಕ್ಕೆ ಅಗತ್ಯ ಅವರ ವ್ಯಕ್ತಿತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಎಂದು ತಿಳಿಸಿದರು.

ಸಾಹಿತಿ ಡಾ.ಪುಷ್ಪ ಮಾತನಾಡಿ

ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ ಮೇರುಕೃತಿ ರಾಮಾಯಣ ಬರೆದ ಕೀರ್ತಿ ವಾಲ್ಮೀಕಿ ಮಹರ್ಷಿಗೆಸಲ್ಲುತ್ತದೆ ರಾಮಾಯಣ ಮತ್ತು ಮಹಾಭಾರತ ಸಾರ್ವಕಾಲಿಕ ಮೌಲ್ಯಾಧಾರಿತ ಕಾವ್ಯಗಳು.ಜನರ ದಿನನಿತ್ಯದ ಘಟನೆಗಳು ತಿಳಿಸುತ್ತವೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿ ವಾಲ್ಮೀಕಿ ರಾಮಾಯಣದ ಪಾತ್ರ ಮತ್ತು ಸನ್ನಿವೇಶಗಳು ಸಾಮಾಜಿಕ,ಆಧ್ಯಾತ್ಮಿಕ ಮೌಲ್ಯಗಳನ್ನು ತಿಳಿಸುತ್ತದೆ.ಧರ್ಮದ ಮೂಲಕ ಮೌಲ್ಯಗಳನ್ನು ಪ್ರತಿಯೊಂದು ಪಾತ್ರವೂ ಒಂದೊಂದು ಮೌಲ್ಯವನ್ನು ತಿಳಿಸಿಕೊಡುತ್ತದೆ ಇಂದು ಹಣ, ಆಧುನಿಕ ಪ್ಯಾಷನ್ ವ್ಯವಸ್ಥೆಯು ನಮ್ಮ ಸಂಸ್ಕೃತಿಯನ್ನು ಕೆಡಿಸುತ್ತಿದೆ.

ತಂದೆಯ ಮಾತನ್ನು ನಡೆಸಿಕೊಟ್ಟ ರಾಮನ ಪಾತ್ರ ಏಕಪತ್ನಿತ್ವನಾಗಿರಾಗಿ ಮೌಲ್ಯ, ಹಿರಿಯರಿಗೆ ಗೌರವ ಕೊಡುವುದು.ಭರತ, ಶತೃಘ್ನ, ಲಕ್ಷ್ಮಣ ಸಹೋದರರಿಗೆ ಪರಿಪೂರ್ಣ ಅಣ್ಣನಾಗಿ , ಸೀತಾದೇವಿಗೆ ಆದರ್ಶ ಪತಿಯಾಗಿ ಸಾಮಾಜಿಕ ಮೌಲ್ಯಾಧಾರಿತ ವ್ಯಕ್ತಿಯಾಗಿ ರಾಮನನ್ನು ವಾಲ್ಮೀಕಿ ಬಿಂಬಿಸಿದ್ದಾರೆ.

ನಿಸ್ವಾರ್ಥ ಮನೋಭಾವನೆಯನ್ನು ಶ್ರೀರಾಮ ಹೊಂದಿದ್ದ ಅತ್ಯಂತ ಶ್ರೇಷ್ಠ ವ್ಯಕ್ತಿ ತ್ಯಾಗದ ಸಂಕೇತ, ಭಕ್ತಿಯ ಪರಾಕಾಷ್ಠೆಯನ್ನು ಹನುಮಂತನ ಪಾತ್ರ ತಿಳಿಸಿಕೊಡುತ್ತದೆ.ಶಬರಿ ಶ್ರೀರಾಮನಿಗಾಗಿ ಸಾಕಷ್ಟು ವರ್ಷ ಕಾಯುತ್ತಾಳೆ. ಸಾಧನೆಗಾಗಿ ತಾಳ್ಮೆ, ಸಹನೆಯನ್ನು ಇಟ್ಟು ಕೊಳ್ಳಬೇಕು ಎಂಬುದು ಶಬರಿ ಪಾತ್ರವು ತಿಳಿಸಿಕೊಡುತ್ತದೆ.ಪರಸ್ತ್ರೀ ವ್ಯಾಮೋಹವು ರಾವಣನ ಉತ್ತಮ ಗುಣ ಅಳಿಸಿ ಹೋಗುತ್ತದೆ . ರಾವಣನ ಪರಾಕ್ರಮತೆ, ಮಾತೃಪ್ರೇಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವ್ಯಾಮೋಹಗಳನ್ನು ಕಡಿಮೆ ಮಾಡಿಕೊಳ್ಳದೇ ಇದ್ದರೆ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂಬುದು ರಾವಣನ ಪಾತ್ರ ಮಹಾನ್ ಕೃತಿಯಲ್ಲಿ ವಿಸ್ತಾರವಾಗಿ ಮಹರ್ಷಿಗಳು ಜಗತ್ತಿಗೆ ಸಾರಿದ ಮಹನೀಯರ ಆದರ್ಶಗಳು ಈ ಒಂದು ದಿನಕ್ಕೆ ಸೀಮಿತವಾಗದೆ ಜೀವನದಲ್ಲೂ ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.

ಬಳಿಕ ಎಸ್.ಎಸ್. ಎಲ್. ಸಿ.ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಪ್ರಗತಿಪರ ಹಿರಿಯ ರೈತರಿಗೆ ಗೌರವಿಸಿ,ತಾಲೂಕು ಪಂಚಾಯಿತಿ ಆವರಣದಿಂದ ಮಹರ್ಷಿಗಳ ಭಾವಚಿತ್ರವನ್ನು ಶತಮಾನ ಶಾಲೆಯ ಆವರಣದವರೆಗೆ ಮಂಗಳವಾದ್ಯ, ಡೊಳ್ಳುಕುಣಿತ,ವೀರಗಾಸೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ನಿಸರ್ಗಪ್ರಿಯ,ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸತೀಶ್,ಪುರಸಭಾ ಅಧ್ಯಕ್ಷ ನಟರಾಜ್,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್, ತಾಲೂಕಿನ ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್ ,ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್, ಪಶುವೈದ್ಯ ಇಲಾಖಾ ಸಹಾಯಕ ದೇವರಾಜು, ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಕಾರಿಗನಹಳ್ಳಿ ಕುಮಾರ್, ಅಧ್ಯಕ್ಷರು ಎ ಆರ್ ರಾಜ ನಾಯಕ, ಖಜಾಂಚಿ ಪೂವನಹಳ್ಳಿ ರೇವಣ್ಣ, ಪ್ರಧಾನ ಕಾರ್ಯದರ್ಶಿ ರಾಜು ಜಿಪಿ , ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹೇಶ್ ನಾಯಕ್,ಅಧಿಕಾರಿಗಳಾದ ಮಂಜುನಾಥ್,ಜಯರಾಮ್, ವೆಂಕಟೇಶ್, ಎಚ್ ಡಿ ನಾಯಕ,ತಾಲ್ಲೂಕು ವಾಲ್ಮೀಕಿ ನಾಯಕರ ಸಂಘದ ನರಸನಾಯಕ, ಗೌರವಾಧ್ಯಕ್ಷ ನಟರಾಜು, ಕುಮಾರ್, ರಾಜಾನಾಯಕ್, ರಮೇಶ್, ಜ್ಞಾನಪ್ರಕಾಶ್, ಗ್ರಾ.ಪಂ.ಸದಸ್ಯೆ ಲತಾ, ಟಿಎಪಿಸಿಎಂಎಸ್ ನಿರ್ದೇಶಕ ಮಂಜುನಾಥ್, ಜಿಲ್ಲಾ ನಾಯಕ ಸಂಘದ ಮಾಜಿ ಅಧ್ಯಕ್ಷ ನರೇಂದ್ರನಾಯಕ್, ಸಿಂಗನಹಳ್ಳಿ ವಾಲ್ಮೀಕಿ ನಾಯಕ್ ಸಂಘದ ಅಧ್ಯಕ್ಷರಾದ ರವಿಕುಮಾರ್, ಜಯರಾಂನಾಯಕ್, ಕಾಳನಾಯಕ್, ಭರತಕುಮಾರ್, ನಾಟನಹಳ್ಳಿ ರವಿ, ಸಾಕ್ಷಿಬೀಡು ಸರಸ್ವತಿ, ಭೈರನಾಯಕ, ಕಾಮನಹಳ್ಳಿ ಪ್ರಭು , ಪಲ್ಲಕ್ಕಯ್ಯ ನಾಯಕ,ಭಾರತೀಪುರ ಮಹದೇವ್, ಸಿಂದಘಟ್ಟ ವೆಂಕಟೇಶ್. ಪುರ ಸ್ವಾಮಿ ನಾಯಕ, ಪೂವನ್ನಳ್ಳಿ ಸ್ವಾಮಿ ನಾಯಕ್, ಆಲಂಬಾಡಿ ಕಾವಲು ನಾಗರಾಜ್, ಕುಪ್ಪಳ್ಳಿ ಶೇಖರ್, ಶಾಸಕರ ಆಪ್ತ ನನಗೆ ಸಹಾಯಕರಾದ ಪ್ರತಾಪ್ ಸೇರಿದಂತೆ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow