ಚನ್ನಾರಾಯಪಟ್ಟಣ: ಪಟ್ಟಣದಲ್ಲಿ ನಡೆದ ಜ್ಞಾನಸಾಗರ ಪರಂಪರ ಕಾರ್ಯಕ್ರಮದಲ್ಲಿ 'ಬಹುಮುಖ ಪ್ರತಿಭೆ' ಕೃತಿ ಲೋಕಾರ್ಪಣೆ ಮಾಡಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ.
ಚನ್ನರಾಯಪಟ್ಟಣ ತಾಲೂಕಿನ ನಾಗೇಶ್ ಎಜುಕೇಶನ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ ಜ್ಞಾನ ಸಾಗರ ಪರಂಪರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಬಹುಮುಖ ಪ್ರತಿಭೆ ಎಂಬ ಪುಸ್ತಕವನ್ನು ಲೋಕರ್ಪಣೆ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಅಕ್ಷರದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಮನವಿ ಮಾಡಿದರು, ನನ್ನಂತ ಸಾಮಾನ್ಯ ವ್ಯಕ್ತಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ
ಸಿದ್ದರಾಮಯ್ಯರವರಿಗೆ ಹಾಗೂ ಪದ್ಮಶ್ರೀ ಪ್ರಶಸ್ತಿ ನೀಡಿದ ನರೇಂದ್ರ ಮೋದಿ ಅವರಿಗೆ ಹಾಗೂ ವರ್ಷದ ಕನ್ನಡಿಗ ಎಂಬ ಪ್ರಶಸ್ತಿ ನೀಡಿದ ಕನ್ನಡಪ್ರಭ ದಿನಪತ್ರಿಕೆಗೆ ಮತ್ತು ನನ್ನ ಬಗ್ಗೆ ಸವಿಸ್ತಾರವಾಗಿ ಸುದ್ದಿ ಪ್ರಕಟಿಸಿದ ಹೊಸದಿಗಂತ ಪತ್ರಿಕೆಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು, ನನ್ನಂತಹ ಸಾಧಾರಣ ವ್ಯಕ್ತಿಯನ್ನು ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ
ಡಾಕ್ಟರ್ ಭಾರತಿ ಮತ್ತು ಡಾ. ನಾಗೇಶ್ ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು, ನಾನು ನನ್ನ ಊರಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಕಿತ್ತಲೆ ಹಣ್ಣುಗಳನ್ನು ಮಾರಾಟ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಚಿಕ್ಕ ಕೊಡಿಗೆಯನ್ನು ನೀಡಿದ್ದೇನೆ, ಅದೇ ರೀತಿ ಪ್ರತಿ ಒಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜ್ಞಾನ ಸಾಗರ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ನಾಗೇಶ್ ಕಾರ್ಯದರ್ಶಿ ಭಾರತಿ ನಾಗೇಶ್, ಆಡಳಿತ ಅಧಿಕಾರಿ ಶ್ರೀಮತಿ ಸುಜಾಪಿಲಿಪ್ಸ್, ಜ್ಞಾನಸಾಗರ ವಿದ್ಯಾ ಸಂಸ್ಥೆಯ ಸಂಯೋಜಕರಾದ ಪಿಲಿಪ್ಸ್, ಕ್ಷೇತ್ರ ಶಿಕ್ಷಣಾಧಿಕಾರಿ ದೀಪ ಸೇರಿದಂತೆ ಇತರರು ಹಾಜರಿದ್ದರು
What's Your Reaction?