*ಕೆ. ಆರ್ ಪೇಟೆ: ರಾಜ್ಯ ಸಹಕಾರ ಸಂಘಗಳಿಗೆ ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘ ಸದೃಢವಾಗಿ ಬೆಳೆದು ನಿಂತು ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಮಾದರಿಯಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.*

*ಕೆ. ಆರ್ ಪೇಟೆ: ರಾಜ್ಯ ಸಹಕಾರ ಸಂಘಗಳಿಗೆ ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘ ಸದೃಢವಾಗಿ ಬೆಳೆದು ನಿಂತು  ಹೊಸ ಇತಿಹಾಸ ಸೃಷ್ಟಿಸುವ ಮೂಲಕ  ಮಾದರಿಯಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.*

ತಾಲೂಕು ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರ ಭವನ ನೂತನ ಕಟ್ಟಡ ಉದ್ಘಾಟನಾ ಹಾಗೂ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು ಕಿಕ್ಕೇರಿ ಸಹಕಾರ ಸಂಘವು 4700 ಸದಸ್ಯರನ್ನು ಹೊಂದುವ ಮೂಲಕ 1966 ರಲ್ಲಿ ಪ್ರಾರಂಭವಾದ ಸೊಸೈಟಿಯ ಬೆಳವಣಿಗೆ ಎಲ್ಲಾರೂ ಸಹಕಾರಿ ಹಿನ್ನಲೆ ಇಂದು 29 ಕೋಟಿ ವ್ಯವಹಾರ ಮಾಡುವ ಮೂಲಕ ರೈತರ ಪರವಾಗಿ ಹಲವಾರು ಕೆಲಸ ಮಾಡುವ ಮೂಲಕ 1.40 ಲಕ್ಷ ರೂ ವೆಚ್ಚದಲ್ಲಿ ಸುಸರ್ಜಿತ ನೂತನ ಸಹಕಾರ ಭವನವನ್ನು ಸಹ ನಿರ್ಮಿಸುವ ಮೂಲಕ ಸಹ ಇತರೆ ಸಹಕಾರ ಸಂಘಗಳಿಗೆ ಮಾದರಿಯಾಗಿದ್ದಿರಿ ಹಾಗಾಗಿ ಸರ್ಕಾರದ ಪರವಾಗಿಯು ಸಹ ಅಭಿನಂದನೆಗಳು ಸೊಸೈಟಿಯಲ್ಲಿ ಅವ್ಯಹಹಾರ ನಡೆಯದಂತೆ ನೋಡಿಕೊಳ್ಳಿ ಸೊಸೈಟಿ ನೀವು ಕಾಯಬೇಕು.ಷೇರುದಾರರಿಗೆ ಮಾತ್ರ ಮದುವೆ ಇತರೆ ಕಾರ್ಯಕ್ರಮಗಳನ್ನು ಈ ಸಮುದಾಯ ಭವನದಲ್ಲಿ ಮಾಡಿದರೆ 5 ಸಾವಿರ ರಿಯಾಯಿತಿ ದರದಲ್ಲಿ ನೀಡಲು ಆಡಳಿತ ತೀರ್ಮಾನಿಸಿರುವುದು ನಿಜಕ್ಕೂ ಶ್ಲಾಘನೀಯ. ಈ ವರ್ಷ ಕೇಂದ್ರ ಸರ್ಕಾರ 2340 ಕೋಟಿ ರೂ ಮಾತ್ರ ಕೊಟ್ಟಿದ್ದಾರೆ ಈ ರಾಜ್ಯದಲ್ಲಿ 19 ಜನ ಗೆಲ್ಲಿಸಿದ್ದಾರಲ್ಲ 9000 ಕೋಟಿ ಕೇಳಿದ್ದು 2340 ಕೋಟಿ ಕೊಟ್ಟಿದ್ದಾರೆ 

ಅವರು ರಾಷ್ಟ್ರೀಯ ಬ್ಯಾಂಕುಗಳ ಮೂಲಕ ಸಾಲ ಪಡೆಯಲಿ ಎಂದು ಸಚಿವೆ ನಿರ್ಮಲ ಸೀತಾರಾಮ್ ಹೇಳುತ್ತಾರೆ. ವಿರೋಧ ಪಕ್ಷ ನಾಯಕ 

ಆಶೋಕ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಏನಾದರೂ

ಹೇಳಿದರೆ ಅದನ್ನೇ ಕೇಳುತ್ತಿರಿ ನೀವು ಯಾರಿಂದ ಏನು ಅನ್ಯಾಯ ವಾಗಿತ್ತಿದೆ ಎಂದು ನೀವು ತಿಳಿಯಬೇಕು ಬರ ಪರಿಹಾರದಲ್ಲೂ ಕೋರ್ಟ್ ಆದೇಶದಂರೆ ಕೇಳಿದರು ಇದರ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹಿರಿಯ ನಾಯಕರಾದ ಮಾಜಿ ಪ್ರದಾನಿ ದೇವೆಗೌಡರು ಯಡಿಯೂರಪ್ಪ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಈ ಬಗ್ಗೆ ಟೇಬಲ್ ಕುಟ್ಟಿ ಕೇಳಬೇಕು ಈ ರೀತಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕಳೆದ 5 ವರ್ಷದಲ್ಲಿ ಯಾವುದಾದರೂ ಸಾಧನೆ ಇದ್ದರೆ ತಿಳಿಸಿಬೇಕು.ಬೆಂಗಳೂರು ಕುಡಿಯುವ ನೀರಿನ ಯೋಜನೆ ನಮ್ಮ ಸರ್ಕಾರದ ಯೋಜನೆ, ಗ್ಯಾರಂಟಿ ಯೋಜನೆ,ಉಚಿತ ಪಡಿತರ ಕೊಟ್ಟಿದ್ದೆವೆ ಕುಮಾರಸ್ವಾಮಿಗೆ ವಕ್ಕಲಿಗರು ಬೆಳೆಯುವಂತಿಲ್ಲ ಡಿ.ಕೆ ನೀರಾವರಿ ಸಚಿವನಾಗಿರೊದು ಸಹಿಸಿಕೊಳ್ಳುಲು ಆಗುತ್ತಿಲ್ಲಾ 56 ಸಾವಿರ ಕೋಟಿ ರೂ ಜನರಿಗೆ ನೀಡುತ್ತಿದ್ದೆವೆ 2004 ರಲ್ಲಿ ಮಂಡ್ಯ ಮೆಡಿಕಲ್ ಕಾಲೇಜು ಹಲವಾರು ತಾಲ್ಲೂಕಿಗೆ ಬಸ್ ಡಿಪೋ ಕೊಟ್ಟೊ ಕೃಷಿ ವಿ.ವಿ ಸೇರಿದಂತೆ ಹಲವಾರು ಯೋಜನೆಗಳನ್ನು ನಮ್ಮ ಸರ್ಕಾರ ನೀಡುತ್ತಿದ್ದರು ಕೂಡ 

ನಮ್ಮನ್ನ ಈ ತರ ಯಾಕೆ ತುಳುಯುತ್ತಿದ್ದಿರಾ.

ಸ್ರೀಶಕ್ತಿ ಸಂಘಗಳಿಗೆ ನೀಡಿರುವ ಸಾಲದ ಮೇಲಿನ 1000 ಕೋಟಿ ರೂ ಬಡ್ಡಿ ಸರ್ಕಾರ ಕಟ್ಟುತ್ತಿದ್ದೆವೆ ನಾವು ರೈತರ ಪರ ಕೆಲಸ ಮಾಡುತ್ತಿದ್ದೆವೆ ಜಿಲ್ಲೆಯ ಅಭಿವೃದ್ಧಿಯ ಪರ ಕೆಲಸ ಮಾಡುತ್ತೆವೆ.ಕಿಕ್ಕೇರಿ ಎಳನೀರು ಮಾರುಕಟ್ಟೆ ಮಾಡಲು ಪ್ರಯತ್ನ ಮಾಡುತ್ತೆವೆ ಕೇಂದ್ರ ಸರ್ಕಾರ ಹೀಗೆ ಮುಂದುವರೆದರೆ ನಮ್ಮ ರಾಜ್ಯಕ್ಕೆ ತುಂಬಾ ಅನ್ಯಾಯವಾಗಲಿದೆ ಎಂದರು.

*ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ* ಮಾತನಾಡಿ ಜಿಲ್ಲೆಯಲ್ಲಿ ಅತ್ಯುತ್ತಮ ಸಂಘವಾಗಿ ಕಿಕ್ಕೇರಿ ಸಂಘ ಹೊರಹೊಮ್ಮಿದೆ ಅದರ ಹಿಂದೆ ಹಲವಾರು ಸಹಕಾರಿ ಮನೋಭಾವನೆಯ ಹಿರಿಯರ ಮಾರ್ಗದರ್ಶನ ಆಡಳಿತ ಮಂಡಳಿಯ ನಿಷ್ಠೆ ಫಲವಾಗಿ ಮಾದರಿ ಸಂಘವಾಗಿ ನಿಂತು ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

ಬಳಿಕ ಮಾತನಾಡಿದ *ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್* ನಮ್ಮ ಗ್ರಾಮದ ಸೊಸೈಟಿ ರಾಜ್ಯಕ್ಕೆ ಮಾದರಿಯಾಗಿ ಜಿಲ್ಲೆಗೆ ಪ್ರಥಮವಾಗಿ ಕಂಗೊಳಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಈ ಸಂಘದ ಅಭಿವೃದ್ಧಿಯ ಹಿಂದೆ ಸಂಘದ ವ್ಯಾಪ್ತಿಗೆ ಬರುವ ಹಲವಾರು ಸಹಕಾರಿಯ ಹಿರಿಯ ಮಹನೀಯರು ಪ್ರಸ್ತುತ ಒಳಗೊಡಂತೆ ಆಡಳಿತ ನೀಡಿರುವ ಮಂಡಳಿಯ ಪರಿಶ್ರಮವಿದೆ ಎಂದರು. ಕಿಕ್ಕೇರಿ ಗ್ರಾಮವನ್ನು ಪಟ್ಟಣ ಪಂಚಾಯಿತಿ ಸೇರಿಸಬೇಕು. ಕೆ.ಆರ್.ಪೇಟೆ ತಾಲ್ಲೂಕು ಭೌಗೋಳಿಕವಾಗಿ ವಿಸ್ತೀರ್ಣವಾಗಿದೆ ಹಾಗಾಗಿ ಕಿಕ್ಕೇರಿನ್ನು ಕಂದಾಯ ತಾಲೂಕು ಆಗಿ ಘೋಷಿಸಬೇಕು ಎಂದು ಸೇರಿದಂತೆ ಶ್ರೀರಂಗಪಟ್ಟಣದಿಂದ ಕೆ ಆರ್ ಪೇಟೆ ತಾಲೂಕು ಗಡಿದಾಟುವ ಆನೆಗೋಳ ಗ್ರಾಮದ ತನಕ ರಾಜ್ಯ ಹೆದ್ದಾರಿಯದರು ಕೂಡ ತೀವ್ರ ಹದಗೆಟ್ಟು ನಿಂತಿದೆ ಕೂಡಲೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ವಿವಿಧ ಸಮಸ್ಯೆಗಳ ಕುರಿತು ವೇದಿಕೆಯ ಮೇಲೆ ಸಚಿವ ಎನ್ ಚಲುವರಾಯಸ್ವಾಮಿ ಕಿಕ್ಕೇರಿ ಜನತೆಯ ಪರವಾಗಿ ಕಿಕ್ಕೇರಿ ಸುರೇಶ ಒತ್ತಾಯಿಸಿದರು.

ಕಿಕ್ಕೇರಿ ಆಗಮಿಸಿದ ಕೃಷಿ ಸಚಿವರನ್ನು ಕಿಕ್ಕೇರಿ ಪಟ್ಟಣದಲ್ಲಿರುವ ಶ್ರಾವಣಬೆಳಗೊಳ ವೃತ್ತದಿಂದ ವೇದಿಕೆಯವರೆಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಾಯಿ ಸುರೇಶ ವಹಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಬಿ ಪ್ರಕಾಶ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್,ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಯಿ ಸುರೇಶ್,ಟಿಎಪಿಸಿ ಎಂ ಎಸ್ ಅಧ್ಯಕ್ಷ ಬಿ ಎಲ್ ದೇವರಾಜು,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಮೈ ಶುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್,ಜಿ.ಪಂ ಮಾಜಿ ಸದಸ್ಯ ಕೆ.ಎಲ್ ದೇವರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಹರಳಹಳ್ಳಿ ವಿಶ್ವನಾಥ್,ಕಿಕ್ಕೇರಿ ಗ್ರಾ.ಪಂ ಅಧ್ಯಕ್ಷ ಕೆ.ಜಿ ಪುಟ್ಟರಾಜು,ರುದ್ರಮುನಿ ಸ್ವಾಮೀಜಿ ,ಮುಖಂಡ ಕಾಯಿ ಮಂಜೇಗೌಡ,ಮೊಟ್ಟೆ ಮಂಜು,ಪುರಸಭಾ ಸದಸ್ಯ ಡಿ ಪ್ರೇಮ್ ಕುಮಾರ್, ರವೀಂದ್ರ ಬಾಬು,ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ಅಗ್ರಹಾರ ಬಾಚಹಳ್ಳಿ ಎ. ಬಿ ಕುಮಾರ್,ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಚಂದ್ರೇಗೌಡ,ಡಾ ರಾಮಕೃಷ್ಣೇಗೌಡ, ಸಂಘದ ಉಪಾಧ್ಯಕ್ಷ ಹರೀಶ್ ನಾಯಕ ಸಂಘದ ನಿರ್ದೇಶಕರಾದ ಈರಪ್ಪ, ಕೋಮಲ ಪುಟ್ಟೇಗೌಡ. ಡಿ ತಾರನಾಥ್,ಪಾಪೇಗೌಡ,ಭಾರತಿ ಪ್ರಕಾಶ್,ಮುರುಳಿಧರ್,ಶಿವರಾಮಯ್ಯ,ಶ್ರೀನಾಥ್,ಕೆ. ಬಿ ಶೇಖರ್, ಸಿದ್ದಿಕ್ ಪಾಷ, ರಘು, ಸಂಘದ ಮುಖ್ಯ ಅಧಿಕಾರಿ ಪುಟ್ಟರಾಜು, ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು

*ವರದಿ, ರಾಜು ಜಿ,ಪಿ, ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow