ಕೆ.ಆರ್.ಪೇಟೆ: ತಾಲೋಕು ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪುರ ದೇವರಾಜು ನೇಮಕ

ಕೆ.ಆರ್.ಪೇಟೆ: ತಾಲೋಕು ಓಬಿಸಿ  ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪುರ ದೇವರಾಜು ನೇಮಕ

ಕೆ.ಆರ್.ಪೇಟೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸಾರಂಗಿ ನಾಗರಾಜು (ನಾಗಣ್ಣ) ನೇತೃತ್ವದಲ್ಲಿ ತಾಲೂಕು ಬಿಜೆಪಿ ಓಬಿಸಿ ಮೋರ್ಚ ಅಧ್ಯಕ್ಷರಾಗಿ ಹಾದನೂರು ಮಂಜು, ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪುರ ದೇವರಾಜು (ದೇವು), ಕಾರ್ಯದರ್ಶಿ ಸಂಗಾಪುರ ಶ್ರೀನಿವಾಸ್ ಆದೇಶ ಪ್ರತಿ ಸ್ವೀಕರಿಸಿ ನೇಮಕಗೊಂಡರು

ಕೆ.ಆರ್.ಪೇಟೆ ಪಟ್ಟಣದಲ್ಲಿರುವ ತಾಲೂಕು ಬಿಜೆಪಿ ಕಚೇರಿಯಲ್ಲಿ) ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜು (ನಾಗಣ್ಣ)ನಮ್ಮ ರಾಜ್ಯ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಚುಕ್ಕಾಣಿ ಹಿಡಿದ ನಂತರ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದು ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ ಆ ಶಕ್ತಿಯನ್ನು ಸದುಪಯೋಗ ಪಡೆಸಿಕೊಂಡು. ಗ್ರಾಮೀಣ ಮಟ್ಟದಲ್ಲಿ ಯುವಕರನ್ನು ಸಂಘಟಿಸಿ ಮುಂಬರುತ್ತಿರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮೋದಿ ಅವರ ಪರವಾದ ಅಲೆ ಎದ್ದಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸ್ಸಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಯೋಜನೆ ಸೌಲಭ್ಯಗಳು ಪ್ರತಿ ಮನೆಮನೆಗಳಿಗೆ ತಲುಪುತ್ತಿದೆ. ಹಾಗಾಗಿ ನಾವೆಲ್ಲರು ಸೇರಿ ದೇಶದ ಉಳಿವಿಗಾಗಿ,ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ನಿಮ್ಮ ಸಂಘಟನೆ ಪ್ರಮುಖವಾಗಿರಬೇಕು ಎಂದು ಸಂಘಟನೆ ಬಗ್ಗೆ ಸಲಹೆ ನೀಡಿದರು.

ಬಳಿಕ ಮಾತನಾಡಿದ ನೂತನ ಬಿಜೆಪಿ ಓಬಿಸಿ ಮೋಚಾ ತಾಲೂಕು ಅಧ್ಯಕ್ಷ ಹಾದನೂರು ಮಂಜು ನಮ್ಮ ನಾಯಕರ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಜಿಲ್ಲಾಧ್ಯಕ್ಷ ಡಾ:ಇಂದ್ರೇಶ್ ಅವರ ಮಾರ್ಗದರ್ಶನದಲ್ಲಿ ನಮ್ಮ ತಾಲೂಕು ಅಧ್ಯಕ್ಷರಾದ ಸಾರಗಿ ನಾಗರಾಜು ಅವರ ನೇತೃತ್ವದಲ್ಲಿ ಒಂದು ಉನ್ನತ ಜವಾಬ್ದಾರಿ ಸ್ಥಾನವನ್ನು ನೀಡಿದ್ದಾರೆ ಅದಕ್ಕೆ ಪೂರಕವಾಗಿ ಸಂಘಟನಾತ್ಮಕ ಮನೋಭಾವನೆಯಿಂದ ಕ್ರಿಯಾಶೀಲತೆಯಲ್ಲಿ ನಮ್ಮ ತಾಲೂಕಿನ ಪ್ರತಿ ಗ್ರಾಮಕ್ಕೂ ಬಿಜೆಪಿಯ ಕನಸನ್ನ ಸಾಮಾನ್ಯ ಜನರಿಗೆ ಅರಿವು ಮೂಡಿಸಿ ಚುನಾವಣೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿ ಮತ್ತೊಮ್ಮೆ ಪ್ರಧಾನಿಯಾಗಲು ಹಗಲು ಇರುಳು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಅರವಿಂದ ಪರಮೇಶ್,ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಎಸ್. ಸಿ ರಂಗೇಗೌಡ,ತಾಲೂಕು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರವಿ ಎಸ್. ಆರ್,ಬಿಜೆಪಿ ರೈತರ ಮೋರ್ಚಾ ತಾಲೂಕು ಅಧ್ಯಕ್ಷರಾದ ಹೊಸಹೊಳಲು ಯೋಗೇಶ್ ಎನ್. ಗೌಡ ,ಬಿಜೆಪಿ ರೈತರ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರೇವಣ್ಣ,ಹೆಚ್.ಡಿ ಬಾಲಚಂದ್ರ, ತಾಲೂಕು ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥರುಗಳಾದ ಸುರೇಶ ಮೋದಿ ಮತ್ತು ಪುನೀತ್, ಓ ಬಿ ಸಿ ಮೋರ್ಚಾ ಉಪಾಧ್ಯಕ್ಷ ಎಸ್ ಪುರ ವಿಜಯ್ ಪಿ. ಎನ್,ಓ ಬಿ ಸಿ ಕಾರ್ಯದರ್ಶಿ ಸೋಮಚಾರಿ ಸಿ , ಸೇರಿದಂತೆ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow